ಕರಾವಳಿಯ ಶಾಂತಿಯನ್ನು ಕೆಡಿಸುವಲ್ಲಿ ಅಕ್ರಮ ಗೋ ಸಾಗಾಟದ್ದು ಪ್ರಮುಖ ಪಾತ್ರ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಬಿದ್ದರೆ ಶಾಂತಿ ಕದಡುವ ಪ್ರಯತ್ನಗಳಿಗೂ ಸಹಜವಾಗಿಯೇ ಬೀಗ ಬೀಳುತ್ತದೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದರೂ ಅಕ್ರಮ ಗೋಸಾಗಾಟಕ್ಕೆ ಬ್ರೇಕ್ ಬಿದ್ದಿಲ್ಲ ಅಂದ್ರೆ ಈ ದಂಧೆಯ ರೂವಾರಿಗಳು ಅದೆಷ್ಟು ಪ್ರಭಾವಿಗಳಾಗಿರಬೇಡ.
ಈ ನಡುವೆ ಮಂಗಳೂರು ಹೊರವಲಯದ ಮರವೂರು ಡ್ಯಾಮ್ ನಲ್ಲಿ ಕೈ ಕಾಲು ಕಟ್ಟಿದ ಸ್ಥಿತಿಯಲ್ಲಿ ದನದ ಶವ ಪತ್ತೆಯಾಗಿದ್ದು, ಇದರ ಹಿಂದೆ ಅಕ್ರಮ ಗೋಸಾಗಾಟಕೋರರ ಕೈವಾಡ ಇದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದೆ.
ಗೋವಿನ ಎರಡೂ ಕಾಲುಗಳನ್ನು ಕಟ್ಟಿ ಹಾಕಿದ್ದು, ಗೋ ಕಳ್ಳರು ಅಕ್ರಮವಾಗಿ ಗೋವುಗಳನ್ನು ಒಯ್ಯುವ ಸಂದರ್ಭದಲ್ಲಿ ತಪ್ಪಿ ನದಿಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ. ಈ ವಿಷಯ ತಿಳಿದ ಹಿಂದೂ ಸಂಘಟನೆ ಸದಸ್ಯರು ಸ್ಥಲಕ್ಕೆ ಭೇಟಿಕೊಟ್ಟು, ದನದ ಶವ ಮೇಲೆತ್ತಿ, ಸಂಪ್ರದಾಯದಂತೆ ಮಣ್ಣು ಮಾಡಿದ್ದಾರೆ.
Discussion about this post