ಬೆಂಗಳೂರು : ಝೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ಮಹಾನಾಯಕ ಅಂಬೇಡ್ಕರ್ ಧಾರಾವಾಹಿಯ ಹೊಸ ಪ್ರೋಮೋವನ್ನು ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದ್ದಾರೆ.
ಈಗಾಗಲೇ ಮಹಾನಾಯಕ ಬಿ.ಆರ್. ಅಂಬೇಡ್ಕರ್ ಧಾರಾವಾಹಿ ವೀಕ್ಷಕರನ್ನು ಸೆಳೆದಿದ್ದು, ದೇಶಕ್ಕಾಗಿ ಜೀವ ಜೀವನವನ್ನೇ ಮುಡಿಪಾಗಿಟ್ಟ ಅಂಬೇಡ್ಕರ್ ಅವರ ಸಾಧನೆಗಳನ್ನು ಈಗಿನ ಯುವಜನತೆಗೆ ತಲುಪಿಸುವಲ್ಲಿ ಈ ಧಾರಾವಾಹಿ ಯಶಸ್ವಿಯಾಗಿದೆ. ಈ ತನಕ ಅವರ ಬಾಲ್ಯಾವಸ್ಥೆಯ ಕಥೆ ಪ್ರಸಾರವಾಗಿದ್ದು ಶುಕ್ರವಾರ ಅಂದ್ರೆ ಆಗಸ್ಟ್ 20 ರಿಂದ ಅಂಬೇಡ್ಕರ್ ಅವರ ಜೀವನದ ಮತ್ತೊಂದು ಘಟ್ಟ ಪ್ರಸಾರಗೊಳ್ಳಲಿದೆ.
ಈ ಬಗ್ಗೆ ಮಾತನಾಡಿರುವ ಜೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ದೇಶ ಸ್ವಾತಂತ್ರ್ಯ ಪಡೆದ 75ನೇ ವರ್ಷದ ಸಂದರ್ಭದಲ್ಲಿ ಯುವ ಅಂಬೇಡ್ಕರ್ ಅವರ ಜೀವನಗಾಥೆ ಹೇಳುವ ‘ಮಹಾನಾಯಕ ಅಂಬೇಡ್ಕರ್’ ಧಾರಾವಾಹಿಯ ವಿಶೇಷ ಪ್ರೊಮೋವನ್ನು ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಅಂದಿದ್ದಾರೆ.
Discussion about this post