ಮೈಸೂರು ದಸರಾ ಇಡೀ ಪ್ರಂಪಚಕ್ಕೆ ನಮ್ಮ ನಾಡಿನ ಸಂಸ್ಕೃತಿಯನ್ನು ಸಾರುವ ಹಬ್ಬ. ಇಂತಹ ವೇದಿಕೆಯಲ್ಲಿ ಇದೆಂತಹ ಕರ್ಮ ಇದು ಕರುನಾಡು ಸ್ವಾಮಿ ಎಂದು ಜನ ಇದೀಗ ಚಂದನ್ ಶೆಟ್ಟಿಗೆ ಛೀ…ಥೂ ಎಂದು ಉಗಿಯುತ್ತಿದ್ದಾರೆ.
ಹೌದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮಾಡಿಕೊಂಡ ಎಡವಟ್ಟಿಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಶುಕ್ರವಾರ ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಚಂದನ್ ಶೆಟ್ಟಿ ಮತ್ತು ತಂಡದವರಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಹಾಡುಗಾರ್ತಿಯಲ್ಲದಿದ್ದರೂ ಪ್ರೇಮ ನಿವೇದನೆ ಸಲುವಾಗಿ ನಿವೇದಿತಾ ಗೌಡಳನ್ನು ವೇದಿಕೆ ಹತ್ತಿಸಲಾಗಿತ್ತು.
105 ದಿನಗಳಲ್ಲಿ ನಮ್ಮಿಬ್ಬರ ಸಾಕಷ್ಟು ಮಾತುಕತೆ ನಡೆದಿದೆ. 105 ದಿನಗಳಲ್ಲಿ ನಿವೇದಿತಾ ನನ್ನನ್ನು ಅರ್ಥ ಮಾಡಿಕೊಂಡಷ್ಟು ಯಾರು ಮಾಡಿಕೊಳ್ಳಲಿಲ್ಲ. ಹಾಗಾಗಿ ನನ್ನ ಜೀವನದಲ್ಲಿ ನಿವೇದಿತಾ ಮುಂದಿನ ದಿನಗಳಲ್ಲಿ ಜೊತೆಯಾಗಿರಲಿ ಎಂದು ಇಂದು ನಿಮ್ಮೆಲ್ಲರ ಸಾಕ್ಷಿಯಾಗಿ ಪ್ರೇಮ ನಿವೇದನೆಯನ್ನ ಸಲ್ಲಿಸುತ್ತಿದ್ದೇನೆ ಎಂದು ಮೊಳಕಾಲೂರಿ ಉಂಗುರ ಹಿಡಿದು ವಿಲ್ ಯು ಮ್ಯಾರಿ ಮೀ ಎಂದು ಚಂದನ್ ಪ್ರಪೋಸ್ ಮಾಡಿದರು.
ಆಗ ಜನ ಚಪ್ಪಾಳೆ ಹೊಡೆದಿದ್ದರು.ಆದರೆ ಯಾವಾಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಯ್ತೋ, ಜನ ಉಗಿಯಲಾರಂಬಿಸಿದರು. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಅಪಚಾರವಾಯ್ತು ಎಂದು ಟೀಕೆ ಮಾಡಲಾರಂಭಿಸಿದರು.
ಜನರ ಆಕ್ರೋಶ ಹೇಗಿತ್ತು ಅನ್ನುವುದು ಇಲ್ಲಿದೆ ನೋಡಿ.
ಒಟ್ಟಿನಲ್ಲಿ ಸರ್ಕಾರದಿಂದ ಆಯೋಜಿತವಾಗಿರುವ ಕಾರ್ಯಕ್ರಮವನ್ನು ಖಾಸಗಿ ಉದ್ದೇಶಕ್ಕಾಗಿ ಬಳಸಿಕೊಂಡ ಇವರಿಬ್ಬಗೆ ಅದ್ಯಾವ ಶಿಕ್ಷೆ ಅನ್ನುವುದು ಜನರ ಪ್ರಶ್ನೆ.
Discussion about this post