ಬೆಂಗಳೂರು ವಿಸ್ತಾರಗೊಳ್ಳುತ್ತಿದೆ. ಕಾಡುಪ್ರಾಣಿಗಳ ( leopard in bengaluru ) ವಾಸ ಸ್ಥಾನವನ್ನು ಈಗಾಗಲೇ ನಾಗರಿಕರ ವಾಸಕ್ಕೆ ಕಬಳಿಸಲಾಗಿದೆ
ಬೆಂಗಳೂರು : ನಾಡಪ್ರಭು ಕೆಂಪೇಗೌಡ ಬಡಾವಣೆಯ ಸೂಳಿಕೆರೆ ಪಾಳ್ಯದಲ್ಲಿ ಚಿರತೆಯ ಹೆಜ್ಜೆ ಗುರುತಗಳು ( leopard in bengaluru ) ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಡಾವಣೆಯಲ್ಲಿ ಕುರುಚಲು ಗಿಡಗಳು ದಟ್ಟವಾಗಿ ಬೆಳೆದಿದೆ, ಮಾತ್ರವಲ್ಲದೆ ಕಾಡಿಗೂ ಹತ್ತಿರವಿದೆ. ಮಾತ್ರವಲ್ಲದೆ ಈ ಹಿಂದೆ ಕುರಿ ಮತ್ತು ನಾಯಿಗಳನ್ನು ಹೊತ್ತೊಯ್ದ ಘಟನೆಗಳು ನಡೆದಿದೆ ಎಂದು ಸೂಳಿಕೆರೆ ಪಾಳ್ಯದ ನಿವಾಸಿಗಳು ಹೇಳಿದ್ದಾರೆ.
ಆದರೆ ಈ ಹೆಜ್ಜೆ ಗುರುತಿನ ಬಗ್ಗೆ ಸೂಳಿಕೆರೆ ಪಾಳ್ಯದ ನಿವಾಸಿಗಳ ಹೇಳಿಕೆಯನ್ನು ಅಲ್ಲಗಳೆದಿರುವ ಅರಣ್ಯಾಧಿಕಾರಿಗಳು ಇದು ನಾಯಿ ಅಥವಾ ದೊಡ್ಡ ಬೆಕ್ಕಿನ ಹೆಜ್ಜೆ ಗುರುತಾಗಿರಬಹುದು. ಸೂಲಿಕೆರೆ ಮೀಸಲು ಅರಣ್ಯ ಪ್ರದೇಶ NPKL ಸಮೀಪವಿದ್ದು, ಅಲ್ಲಿಂದ ಚಿರತೆ ಬಂದು ಹೋಗಿರಬಹುದು ಹೀಗಾಗಿ ಸ್ಥಳೀಯರು ಆತಂಕ ಪಡುವ ಅಗತ್ಯವಿಲ್ಲ ಅಂದಿದ್ದಾರೆ.
ಇದನ್ನೂ ಓದಿ : state bjp organizing secretary : ದಕ್ಷಿಣ ಕನ್ನಡದ ಆರ್.ಎಸ್.ಎಸ್ ಕಾರ್ಯಕರ್ತನಿಗೆ ರಾಜ್ಯ BJP ಸಂಘಟನಾ ಕಾರ್ಯದರ್ಶಿ ಹುದ್ದೆ
ಹಾಗೇ ನೋಡಿದರೆ ಈ ಪ್ರದೇಶದ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವು ಹೊಸದೇನಲ್ಲ. ಎರಡು ವರ್ಷಗಳ ಹಿಂದೆ ಭೀಮನಕುಪ್ಪೆ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಕಳೆದ ವರ್ಷ ಬೆಟ್ಟಪಾಳ್ಯ, ಕೊಮ್ಮಘಟ್ಟ ಸಮೀಪ ಚಿರತೆ ಓಡಾಡುತ್ತಿತ್ತು ಎಂದು ಇಲ್ಲಿನ ಸ್ಥಳೀಯರು ಹೇಳಿದ್ದಾರೆ.
Discussion about this post