ಬೆಂಗಳೂರು : ಕೆಲವೇ ದಿನಗಳಲ್ಲಿ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣೆ ನಡೆಯಲಿದೆ ಅನ್ನುವುದು ಸ್ಪಷ್ಟವಾಗಿದೆ. ಸಿಎಂ ಯಡಿಯೂರಪ್ಪ ಅವರನ್ನು ಗೌರವಯುತವಾಗಿ ಕಳುಹಿಸಿಕೊಡಲು ಹೈಕಮಾಂಡ್ ನಿರ್ಧರಿಸಿದ್ದು, ಆಗಸ್ಟ್ 6ಕ್ಕೆ ಯಡಿಯೂರಪ್ಪ ನಿರ್ಗಮಿಸಲಿದ್ದಾರೆ ಎನ್ನಲಾಗಿದೆ.
ಈ ನಡುವೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬಾರದು ಅನ್ನುವ ಒತ್ತಾಯಗಳು ಕೂಡಾ ಕೇಳಿ ಬಂದಿದೆ. ಆದರೆ ಈ ಬೆಳವಣಿಗೆಯಿಂದ ಬಿಜೆಪಿ ಸರ್ಕಾರ ಬರಲು ಕಾರಣರಾದ ಮಿತ್ರ ಮಂಡಳಿ ಆತಂಕಕ್ಕೆ ಒಳಗಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ತೊರೆದು ಬಂದಿದ್ದ ಶಾಸಕರು ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಕಾರಣರಾಗಿದ್ದರು. ಯಡಿಯೂರಪ್ಪ ಮೇಲೆ ವಿಶ್ವಾಸವಿಟ್ಟು ಬಂದಿದ್ದ ಅವರು ಅವಧಿ ಪೂರ್ಣಗೊಳಿಸುವ ಭರವಸೆ ಹೊಂದಿದ್ದರು.
ಆದರೆ ಈಗ ನಡೆದಿರುವ ಬೆಳವಣಿಗೆ ಭೈರತಿ ಬಸವರಾಜು, ಡಾ. ಸುಧಾಕರ್, ಬಿಸಿ ಪಾಟೀಲ್, ಮುನಿರತ್ನ, ಎಂಟಿಬಿ ನಾಗರಾಜು, ನಾರಾಯಣಗೌಡ, ಎಸ್.ಟಿ. ಸೋಮಶೇಖರ್ ಸೇರಿ ಮಿತ್ರ ಮಂಡಳಿಯ ಎಲ್ಲಾ ಸದಸ್ಯರ ಆತಂಕಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಬದಲಾವಣೆಯಾದರೆ ಸಂಪುಟ ಪುನರ್ ರಚನೆಯಾಗುವುದು ಖಚಿತ. ಆ ಸಂದರ್ಭದಲ್ಲಿ ಬೇರೆ ಪಕ್ಷಗಳಿಂದ ಬಂದು ಸಚಿವರಾದ ನಮ್ಮ ಕುರ್ಚಿಗೆ ಕಂಟಕ ಬರಬಹುದು ಅನ್ನುವ ಆತಂಕ ಇವರದ್ದು. ಹೀಗಾಗಿ ಮುಂದೇನು ಅನ್ನುವ ಕುರಿತಂತೆ ಚರ್ಚಿಸಲು ಸೋಮವಾರ ರಾತ್ರಿ ರಹಸ್ಯ ಸ್ಥಳದಲ್ಲಿ ಮಿತ್ರ ಮಂಡಳಿ ಸಭೆ ನಡೆಸಿದೆ. ಸಭೆಯಲ್ಲಿ ಆನಂದ್ ಸಿಂಗ್ ಸೇರಿ ಮಿತ್ರ ಮಂಡಳಿಯ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು. ಆದರೆ ಎಚ್. ವಿಶ್ವನಾಥ್ ಈ ಸಭೆ ಹಾಜರಿರಲಿಲ್ಲ ಎನ್ನಲಾಗಿದೆ.
ಸಭೆಯಲ್ಲಿ ಹೈಮಾಂಡ್ ಭೇಟಿ, ಬಿಎಲ್ ಸಂತೋಷ್ ಭೇಟಿ ಕುರಿತಂತೆ ಚರ್ಚೆಗಳು ನಡೆದಿದೆ ಎನ್ನಲಾಗಿದೆ.
Discussion about this post