ಬೈಕ್ ಸವಾರರ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಗೊತ್ತಾಗಿದೆ.( laxman savadi)
ಚಿಕ್ಕೋಡಿ : ಮಾಜಿ ಉಪ ಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ( laxman savadi) ಕಾರು ಅಪಘಾತವಾದ ಘಟನೆ ಬೆಳಗಾವಿ ಜಿಲ್ಲೆಯ ಹಾರುಗೇರಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಲಕ್ಷ್ಮಣ್ ಸವದಿ ಪಾರಾಗಿದ್ದಾರೆ.
ರಸ್ತೆ ಮಧ್ಯೆ ಬೈಕ್ ಸವಾರರು ಏಕಾಏಕಿ ಬಂದಾಗ, ಅಪಘಾತ ತಪ್ಪಿಸಲು ಕಾರು ಚಾಲಕ ಸರ್ಕಸ್ ಮಾಡಿದ್ದಾರೆ ಈ ವೇಳೆ ಕಾರನ್ನು ತಕ್ಷಣ ರಸ್ತೆಯಿಂದ ಕೆಳಗಿಳಿಸಲು ಹೋಗಿದ್ದಾರೆ. ಈ ವೇಳೆ ವೇಗವಾಗಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಇದನ್ನು ಓದಿ : Indian American : ಅಮೆರಿಕಾದ ನೆಲದಲ್ಲಿ ಅವಮಾನ : ಆರೋಪಿ ಮಹಿಳೆಯನ್ನು ಬಂಧಿಸಿದ ಪೊಲೀಸರು
ಸವದಿಯವರು ಅಥಣಿಯಿಂದ ಗೋಕಾಕ್ ಕಡೆಗೆ ಹೋಗುತ್ತಿದ್ದರು. ಹಾರುಗೇರಿ ಬಳಿ ಈ ಘಟನೆ ಸಂಭವಿಸಿದ್ದು, ಲಕ್ಕ್ಷ್ಮಣ ಸವದಿ ಜೊತೆಗೆ ಕಾರಿನಲ್ಲಿ ನಾಲ್ಕು ಜನ ಪ್ರಯಾಣ ಮಾಡುತ್ತಿದ್ದರು.
ಕಾರು ಪಲ್ಟಿಯಾದ ತಕ್ಷಣ ದೌಡಾಯಿಸಿದ ಸ್ಥಳೀಯರು ಕಾರಿನೊಳಗೆ ಸಿಲುಕಿಕೊಂಡಿದ್ದ ಸವದಿ ಮತ್ತು ಇತರರನ್ನು ಕಾರಿನಿಂದ ಹೊರಗೆ ಸುರಕ್ಷಿತವಾಗಿ ಹೊರ ತಂದಿದ್ದಾರೆ.
ಇದೀಗ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರೀಕ್ಷೆಯ ಬಳಿಕ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
Discussion about this post