ಸಿದ್ದರಾಮಯ್ಯ ಅವರ ಮನೆ ಎಲ್ಲಿದೆ ಅಂದ್ರೆ ವಿಜಯನಗರ ಅನ್ನುವುದು ಎಲ್ಲರಿಗೂ ಗೊತ್ತು, ಅದಕ್ಕೆ ಚುನಾವಣೆ ಆಫಿಡವಿಟ್ ಸಾಕ್ಷಿ ಬೇರೆ ಇದೆ ( lakshmi hebbalkar)
ದಾವಣಗೆರೆ : ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯ (siddaramaiah birthday) ಅವರನ್ನು ಹೊಗಳುವ ಭರಾಟೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (( lakshmi hebbalkar)) ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನಲ್ಲಿ ಮನೆಯೇ ಇಲ್ಲ, ಅವರೊಬ್ಬ ಸರಳ ಜೀವಿ ಅನ್ನುವ ಲಕ್ಷ್ಮಿ ಹೆಬ್ಬಾಳ್ಕರ್ ಮಾತಿಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.
ಕಾಯಕವೇ ಕೈಲಾಸ ಎಂದು 40 ವರ್ಷಗಳ ಕಾಲ ರಾಜಕೀಯ ಮಾಡಿದವರು ಸಿದ್ದರಾಮಯ್ಯ. (siddaramaiah birthday) ಆಡು ಮುಟ್ಟದ ಸೊಪ್ಪಿಲ್ಲ ಸಿದ್ದರಾಮಯ್ಯ ಮಾಡದ ಜನಪರ ಕೆಲಸವಿಲ್ಲ. ಬಸವಣ್ಣನವರ ತತ್ವದಡಿಯಲ್ಲಿ ಕೆಲಸ ಮಾಡಿದವರು ಸಿದ್ದರಾಮಯ್ಯ. ಸರಳತೆ ಅನ್ನುವುದು ಇದ್ರೆ ಸಿದ್ದರಾಮಯ್ಯ ಅವರಲ್ಲಿ ಮಾತ್ರ. ಗ್ರಾಮ ಪಂಚಾಯತ್ ಅಧ್ಯಕ್ಷರಾದವರು ಗಾಡಿ ತೆಗೆದುಕೊಳ್ಳುತ್ತಾರೆ. ಆದರೆ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನಲ್ಲಿ ಮನೆ ಕೂಡಾ ಇಲ್ಲ. ( lakshmi hebbalkar)
ಇದನ್ನು ಓದಿ : K R Ramesh Kumar : ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್
ದಿನದ 24 ಗಂಟೆ ಬಡವರ, ಹಿಂದುಳಿದದವರ, ದನಿ ಇಲ್ಲದವರ ಹೀಗೆ ಎಲ್ಲರ ಪರವಾಗಿ ಸಿದ್ದರಾಮಯ್ಯ ಚಿಂತನೆ ಮಾಡ್ತಾರೆ. ಎಲ್ಲಾ ಜಾತಿಯವರಿಗಾಗಿ, ಧರ್ಮದವರಿಗಾಗಿ ಯೋಜನೆ ರೂಪಿಸ್ತಾರೆ ಅಂದ ಹೆಬ್ಬಾಳ್ಕರ್, ಸಿದ್ದರಾಮಯ್ಯ ಕರ್ನಾಟಕದ ರಾಜಕೀಯದ ಧೃವ ತಾರೆ ಎಂದು ಬಣ್ಣಿಸಿದರು.
ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನಲ್ಲಿ ನಿವಾಸ ಇಲ್ಲ ಅನ್ನುವುದು ಸತ್ಯಕ್ಕೆ ದೂರವಾದ ಮಾತು. ಇತ್ತೀಚೆಗೆ ಅವರು ಮನೆ ಮಾರಾಟ ಮಾಡಿದ್ದಾರೆಯೇ ಅನ್ನುವುದು ಗೊತ್ತಿಲ್ಲ. ಅದನ್ನು ಹೊರತು ಪಡಿಸಿದರೆ ವಿಜಯನಗರ ಬಡಾವಣೆಯಲ್ಲಿ ಸಿದ್ದರಾಮಯ್ಯ ಅವರು ನಿವಾಸ ಹೊಂದಿದ್ದಾರೆ. ಅದು ಮಾಧ್ಯಮಗಳಲ್ಲೂ ಪ್ರಕಟವಾಗಿದೆ.
ಮಾತ್ರವಲ್ಲದೆ ಸಿದ್ದರಾಮಯ್ಯ 2018ರಲ್ಲಿ ಸಿದ್ದರಾಮಯ್ಯ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ವಿಜಯನಗರದಲ್ಲೊಂದು ನಿವಾಸ ಇರುವುದನ್ನು ನಮೂದಿಸಿದ್ದಾರೆ.
Discussion about this post