ಬೆಂಗಳೂರು : ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು ಎಲ್ಲರೂ ಪ್ರೀತಿಯಿಂದ ಕೆ.ಎಸ್.ಆರ್.ಟಿ.ಸಿ ಎಂದೇ ಕರೆಯುತ್ತಿದ್ದರು. ಆದರೆ ಇನ್ಮುಂದೆ KSRTC ಹೆಸರನ್ನು ಕರ್ನಾಟಕ ಬಳಸುವಂತಿಲ್ಲ. ಬದಲಾಗಿ ಕರ್ನಾಟಕ ಸಾರಿಗೆ ಸಂಸ್ಥೆ ತನ್ನ ಹೆಸರನ್ನೇ ಬದಲಾಯಿಸಬೇಕಾಗಿದೆ.
ಕೇರಳ ಹಾಗೂ ಕರ್ನಾಟಕದ ನಡುವೆ KSRTC ಬ್ರ್ಯಾಂಡ್ ಗಾಗಿ 27 ವರ್ಷಗಳಿಂದ ಕಾನೂನು ಸಮರ ನಡೆದಿತ್ತು. ಇದೀಗ ಕೇರಳ ಕಾನೂನು ಹೋರಾಟದಲ್ಲಿ ಮೇಲುಗೈ ಸಾಧಿಸಿದ್ದು, ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಅಧಿಕೃತ ಆದೇಶ ಹೊರಡಿಸಿದೆ.
27 ವರ್ಷದ ಕಾನೂನು ಹೋರಾಟದಲ್ಲಿ ಗೆದ್ದು ಬೀಗಿರುವ ಕೇರಳ, ಇದೀಗ ಕರ್ನಾಟಕಕ್ಕೆ ಎಚ್ಚರಿಕೆಯನ್ನು ಕೂಡಾ ಕೊಟ್ಟಿದೆ. ಈ ಬಗ್ಗೆ ಮಾತನಾಡಿರುವ ಕೇರಳ ಸಾರಿಗೆ ಸಚಿವ ಅಂಟೋನಿ ರಾಜು KSRTC ಹೆಸರು ನಮ್ಮ ರಾಜ್ಯಕ್ಕೆ ಸೇರಿದ್ದಾಗಿದೆ. ಹೀಗಾಗಿ KSRTC ಬ್ರ್ಯಾಂಡ್ ನೇಮ್ ಬಳಸದಂತೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ನೋಟಿಸ್ ಜಾರಿ ಮಾಡುವುದಾಗಿ ಹೇಳಿದ್ದಾರೆ.
1994ರಲ್ಲಿ ಕೇರಳ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದ ಕರ್ನಾಟಕ ಸರ್ಕಾರ KSRTC ಹೆಸರನ್ನು ನೀವು ಬಳಕೆ ಮಾಡೋ ಹಾಗಿಲ್ಲ. ಈ ಬ್ರ್ಯಾಂಡ್ ನೇಮ್ ನಮಗೆ ಸೇರಿದ್ದು ಎಂದು ಹೇಳಿತ್ತು. ಇದರಿಂಜ ಆಕ್ರೋಶಗೊಂಡ ಕೇರಳ ಸರ್ಕಾರ ಟ್ರೇಡ್ ಮಾರ್ಕ್ ರಿಜಿಸ್ಟ್ರಿಗೆ ದೂರು ನೀಡಿತ್ತು. ನಮ್ಮ ರಾಜ್ಯದ ಸರ್ಕಾರಿ ಬಸ್ ಗಳಿಗೆ KSRTC ಬ್ರ್ಯಾಂಡ್ ನೇಮ್ ಅನ್ನು ನಾವೇ ಮೊದಲು ಬಳಸಿದ್ದೇವೆ.ಕೇರಳದಲ್ಲಿ 1965ರಲ್ಲೇ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ರಚಿಸಲಾಗಿತ್ತು. ಆದರೆ ಕರ್ನಾಟಕದಲ್ಲಿ 1973ರಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಪ್ರಾರಂಭವಾಗಿತ್ತು ಎಂದು ವಾದಿಸಿತ್ತು.
ಇದೀಗ ಕೇರಳ ಸರ್ಕಾರದ ವಾದಕ್ಕೆ ಮನ್ನಣೆ ಸಿಕ್ಕಿದ್ದು, ಇನ್ಮುಂದೆ KSRTC ಅಂದ್ರೆ ಅದು ಕೇರಳದ ಆಸ್ತಿ.
Discussion about this post