ಬೆಂಗಳೂರಿನಲ್ಲಿ ದಿನಕ್ಕೆ ಅದೆಷ್ಟು ಮೊಬೈಲ್ ಕಳ್ಳತನವಾಗುವುದಿಲ್ಲ. ಆ ಪೈಕಿ ಪೊಲೀಸರು ಅದೆಷ್ಟು ಮೊಬೈಲ್ ಅನ್ನು ಪತ್ತೆ ಹಚ್ಚುತ್ತಾರೆ. ಮೊಬೈಲ್ ಕಳೆದು ಹೋಯ್ತು ಎಂದು ಠಾಣೆಯಲ್ಲಿ ದಾಖಲಾದ ದೂರುಗಳೆಷ್ಟು, ಅದರಲ್ಲಿ ವಿಲೇವಾರಿಯಾದ ಪ್ರಕರಣಗಳೆಷ್ಟು. ಒಂದಕ್ಕೊಂದು ಸಂಬಂಧವೇ ಇರೋದಿಲ್ಲ.
Get upto 30% off on Mens Wear
ಆದರೆ ಸಚಿನ ಈಶ್ವರಪ್ಪ ಅವರ ಮಗಳ ಮೊಬೈಲ್ ನಾಪತ್ತೆ ಪ್ರಕರಣದಲ್ಲಿ ಹೀಗಾಗಿಲ್ಲ. ಆ ಮೊಬೈಲ್ ಎಲ್ಲಿದೆ ಅನ್ನುವುದನ್ನು ಪೊಲೀಸರು ಶ್ರದ್ಧೆಯಿಂದ ಪತ್ತೆ ಹಚ್ಚಿದ್ದಾರೆ.
ಇದೇ ಸಪ್ಟಂಬರ್ 13 ರಂದು ನನ್ನ ಮೊಬೈಲ್ ಕಳೆದು ಹೋಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಮಗಳು ಕೆ ಶಾಂತಾ ಬೆಂಗಳೂರು ನಾರ್ತ್ ಈಸ್ಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
Get upto 30% off on Womens Ethnics Wear
ಈ ಬಗ್ಗೆ ತನಿಖೆ ಪ್ರಾರಂಭಿಸಿದ ಪೊಲೀಸರು ಇದೀಗ ಮೊಬೈಲ್ ಅನ್ನು ಬಾಗಲಕೋಟೆಯ ಬಂಟನೂರು ಗ್ರಾಮದಲ್ಲಿ ಪತ್ತೆ ಹಚ್ಚಿದ್ದಾರೆ. ಅಂದ ಹಾಗೇ ಈ ಮೊಬೈಲ್ ಸಿಕ್ಕಿರುವುದು ಬಿಜೆಪಿ ಕಾರ್ಯಕರ್ತ ಲಕ್ಷ್ಮಣ ಬಂಡಿವಡ್ಡರ್ ಮನೆಯಲ್ಲಿ.
ಬೆಂಗಳೂರು ನಾರ್ತ್ ಈಸ್ಟ್ ಪೊಲೀಸರ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಲೋಕಾಪುರ ಪೊಲೀಸರು ಲಕ್ಷ್ಮಣ ಬಂಡಿವಡ್ಡರ್ ಮನೆಯಿಂದ ಮೊಬೈಲ್ ವಶಕ್ಕೆ ಪಡೆದು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ.
ಹಾಗಾದರೆ ಆ ಮೊಬೈಲ್ ಹೇಗೆ ಕಾರ್ಯಕರ್ತನ ಮನೆಗೆ ಹೇಗೆ ಹೋಯಿತು. ಸಚಿವರ ಮಗಳ ಮೊಬೈಲ್ ಮನೆಯಿಂದ ನಾಪತ್ತೆಯಾಗಿದ್ದು ಹೇಗೆ…. ಹೀಗೆ ಹತ್ತು ಹಲವು ಪ್ರಶ್ನೆಗಳು ಈ ಪ್ರಕರಣದ ಸುತ್ತ ಇವೆ.
ಏನಿವೇ ಸಚಿವರ ಮಗಳ ಮೊಬೈಲ್ ಬಗ್ಗೆ ಇರುವ ಕಾಳಜಿ, ಬಡವರು ಮೊಬೈಲ್ ಕಳೆದುಕೊಂಡ ವೇಳೆಯೂ ಇರಲಿ ಅನ್ನುವುದು ಪೊಲೀಸರಲ್ಲಿ ನಮ್ಮ ಕಳಕಳಿಯ ಮನವಿ.
Discussion about this post