ಕೋಲಾರ ಕಾಂಗ್ರೆಸ್ ಕಚೇರಿಯಲ್ಲಿ ಗಲಾಟೆ ನಡೆಯುತ್ತಿದ್ದ ವೇಳೆ ದೃಶ್ಯಗಳನ್ನು ಸೆರೆ ಹಿಡಿಯತ್ತಿದ್ದ ಪತ್ರಕರ್ತರ ಮೇಲೆ ರಮೇಶ್ ಕುಮಾರ್ (K R Ramesh Kumar) ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಕೋಲಾರ : ಕಾಂಗ್ರೆಸ್ ಶಾಸಕ, ಮಾಜಿ ಸ್ಪೀಕರ್ ರಮೇಶ್ (K R Ramesh Kumar) ಅವರ ಮೇಲೆ 2019ರ ನವೆಂಬರ್ ತಿಂಗಳಲ್ಲಿ 50 ಕೋಟಿ ಹಣ ಸ್ವೀಕರಿಸಿದ ಆರೋಪವೊಂದು ಬಂದಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರೇ ಈ ಕುರಿತ ಆಡಿಯೋವನ್ನು ಬಿಡುಗಡೆ ಮಾಡಿದ್ದರು. ಆದರೆ ಆ ತನಿಖೆ ಏನಾಯ್ತು. ರಮೇಶ್ ಕುಮಾರ್ ಆ ಕಳಂಕದಿಂದ ಮುಕ್ತರಾದ್ರ ಅನ್ನುವುದು ಇನ್ನೂ ಗೊತ್ತಿಲ್ಲ.
ಈ ನಡುವೆ ಇದೇ ರಮೇಶ್ ಕುಮಾರ್ (K R Ramesh Kumar) ಪತ್ರಕರ್ತರ ಮೇಲೆ ಹಲ್ಲೆ ನಡೆಸುವ ಮೂಲಕ ಸುದ್ದಿಯಾಗಿದ್ದಾರೆ. ಹೌದು ಕೋಲಾರದ ಕಾಂಗ್ರೆಸ್ ಕಚೇರಿಯಲ್ಲೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ : veerendra heggade : ಪ್ರಧಾನಿ ನರೇಂದ್ರ ಮೋದಿಗೆ ಧರ್ಮಸ್ಥಳದ ಪ್ರಸಾದ ಕೊಟ್ಟ ವೀರೇಂದ್ರ ಹೆಗ್ಗಡೆ
ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬದ ಪೂರ್ವಭಾವಿ ಸಭೆಯಲ್ಲಿ ರಮೇಶ್ ಕುಮಾರ್ ಮತ್ತು ಕೆ ಎಚ್ ಮುನಿಯಪ್ಪ ಬಣದ ನಡುವೆ ಕಿತ್ತಾಟ ನಡೆದಿದೆ. ಬ್ಯಾನರ್ ನಲ್ಲಿ ಮುನಿಯಪ್ಪ ಪೋಟೋ ಇಲ್ಲ ಅನ್ನುವ ಕಾರಣಕ್ಕೆ ಪ್ರಾರಂಭವಾದ ಕಿತ್ತಾಟ ಕೈ ಕೈ ಮಿಲಾಯಿಸುವ ತನಕ ಬಂದಿತ್ತು.
ಈ ಗಲಾಟೆಯ ದೃಶ್ಯವನ್ನು ಪತ್ರಕರ್ತರು ಸೆರೆ ಹಿಡಿಯುತ್ತಿದ್ರೆ ಕುರ್ಚಿಯಲ್ಲಿ ಕೂತಿದ್ದ ರಮೇಶ್ ಕುಮಾರ್ ಎದ್ದು ಬಂದು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ.
ಇದಾದ ಬಳಿಕ ಸಭೆಯಿಂದ ಏಕಾಏಕಿ ಹೊರ ನಡೆದಿದ್ದಾರೆ. ಇದೀಗ ರಮೇಶ್ ಕುಮಾರ್ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ರಮೇಶ್ ಕುಮಾರ್ ಅಂತಹ ವ್ಯಕ್ತಿಗಳು ಹೀಗಾಡುವುದು ಸರಿಯೇ ಅನ್ನುವುದೇ ಹಲವರ ಪ್ರಶ್ನೆ. ಹಾಗೇ ನೋಡಿದರೆ ರಮೇಶ್ ಕುಮಾರ್ ಅವರಿಗೆ ವಿವಾದಗಳು ಹೊಸದಲ್ಲ, ಮಹಿಳೆ ಮತ್ತು ರೇಪ್ ವಿಚಾರದಲ್ಲಿ ರಮೇಶ್ ಕುಮಾರ್ ಆಡಿದ ಮಾತು ಇಡೀ ಕರ್ನಾಟಕವನ್ನೇ ತಲೆ ತಗ್ಗಿಸುವಂತೆ ಮಾಡಿತ್ತು.
Discussion about this post