ಕರಣ್ ಜೋಹರ್ ನಡೆಸಿಕೊಡುವ Koffee With Karan ಒಂದೊಳ್ಳೆ ಮನೋರಂಜನೆ ಶೋ
ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ( Karan Johar )ನಡೆಸಿಕೊಡುವ ಸೆಲೆಬ್ರಿಟಿ ಚಾಟ್ ಶೋ ‘ಕಾಫಿ ವಿತ್ ಕರಣ್‘ ( Koffee With Karan )ಎಂಟನೇ ಸೀಸನ್ಗೆ ಕಾಲಿಟ್ಟಿದೆ. 2004 ರಲ್ಲಿ ಪ್ರಾರಂಭವಾದ ಈ ಡಿಫರೆಂಟ್ ಶೋ ಅನ್ನು ಕರಣ್ ಜೋಹರ್ ಅವರೇ ನಡೆಸಿಕೊಡುತ್ತಿರುವುದು ವಿಶೇಷವಾಗಿದೆ.
ಇನ್ನು ಎಂಟನೇ ಸೀಸನ್ ಕುರಿತಂತೆ ಕಾರ್ಯಕ್ರಮ ಪ್ರಸಾರ ಕಾಣಲಿರುವ ಡಿಸ್ನಿ + ಹಾಟ್ಸ್ಟಾರ್ ( Disney+ Hotstar ) ವಾಹಿನಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ‘ಕಾಫಿ ವಿತ್ ಕರಣ್’ ನ ಹೊಸ ಸೀಸನ್ ‘ ‘Koffee With Karan’ will be ‘edgier, crazier and candid leading to a whole lot of revelations’ ಆಗಿರಲಿದೆ ಅಂದಿದೆ.
Read This : ಪತ್ರಕರ್ತರು ಸ್ನಾಕ್ಸ್ ಅನ್ನು ಊಟದಂತೆ ತಿನ್ನುತ್ತಿದ್ದಾರೆ : ನಾಲಗೆ ಹರಿ ಬಿಟ್ಟ ನಿರೂಪಕಿ
ಕಾಫಿ ವಿತ್ ಕರಣ್ ಸೀಸನ್ 8ರಲ್ಲಿ ಅನೇಕ ಸೆಲೆಬ್ರಿಟಿ ಅತಿಥಿಗಳು ಪಾಲು ಪಡೆಯಲಿದ್ದು, ಮೊದಲ ಎಪಿಸೋಡ್ ನಲ್ಲಿ ಬಾಲಿವುಡ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ( Ranveer and Deepika ) ಪಾಲ್ಗೊಳ್ಳಲಿದ್ಜಾರೆ. ನಂತರದ ಎಪಿಸೋಡ್ ಗಳಲ್ಲಿ ಆಲಿಯಾ ಭಟ್ ( Alia bhatt), ಕರೀನಾ ಕಪೂರ್ ಖಾನ್ ( Kareena Kapoor ), ರಾಣಿ ಮುಖರ್ಜಿ ( Rani Mukherjee), ಸಾರಾ ಅಲಿ ಖಾನ್ ( Sara Ali Khan) ಮತ್ತು ಅನನ್ಯಾ ಪಾಂಡೆ ( Ananya Panday ) ಇತರರು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
ಇನ್ನು ಕರಣ್ ಜೋಹರ್ ಇತ್ತೀಚೆಗೆ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ( Rocky Aur Rani Kii Prem Kahaani ) ಸಿನಿಮಾವನ್ನು ನಿರ್ದೇಶಿಸಿದ್ದು, ಈ ಸಿನಿಮಾದಲ್ಲಿ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಜೊತೆಗೆ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ನಟಿಸಿದ್ದಾರೆ.
Here’s all you need to know about Koffee With Karan Season 8:
Koffee With Karan Season 8: Date And Time
Koffee with Karan Season 8 premiered on October 26, 2023. The first episode of the show aired at 12 AM. A new episode will be aired every Thursday.
Where To Watch Koffee With Karan Season 8?
Koffee with Karan Season 8 will stream on Disney+ Hotstar. The show will not be aired on television.
ಕಳೆದ ವಾರವಷ್ಟೇ ಕರಣ್ ಜೋಹರ್ ಅವರ ಧರ್ಮ ನಿರ್ಮಾಣ ಸಂಸ್ಥೆ ಮತ್ತು ಗುನೀತ್ ಮೊಂಗಾ ಅವರ ಸಿಖ್ಯ ಎಂಟರ್ಟೈನ್ಮೆಂಟ್ ತಮ್ಮ ಎರಡನೇ ಪ್ರಾಜೆಕ್ಟ್ ಅನ್ನು ಘೋಷಿಸಿದ್ಜು ಫ್ರೆಂಚ್ ಭಾಷೆಯ ಹಿಟ್ ಸಿನಿಮಾ ‘ದಿ ಇಂಟಚಬಲ್ಸ್’ ಅನ್ನು ಹಿಂದಿಯಲ್ಲಿ ನಿರ್ಮಿಸೋದಾಗಿ ಹೇಳಿದೆ.
Also Read : ತುಟಿ ಕಚ್ಚಿ ರಸ ಹೀರಿ 2ನೇ ಮದುವೆಗೆ ಸೈ ಅಂದ ಅಮಲಾ ಪೌಲ್
ಈ ಸಿನಿಮಾವನ್ನು ‘ಸಂಜು’, ‘ಸೀಕ್ರೆಟ್ ಸೂಪರ್ಸ್ಟಾರ್’ ಮತ್ತು ‘ಶಾಂದಾರ್’ ನಂತಹ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಕಾಲಿನ್ ಡಿ’ಕುನ್ಹಾ ನಿರ್ದೇಶಿಸಲಿದ್ದಾರೆ. ಈ ತಿಂಗಳ ಆರಂಭದಲ್ಲಿ, ಕರಣ್ ಜೋಹರ್ ಅವರ ನಿರ್ದೇಶನದ ಚೊಚ್ಚಲ ‘ಕುಚ್ ಕುಚ್ ಹೋತಾ ಹೈ’ ( Kuch Kuch Hota Hai ) ಸಿನಿಮಾದ 25 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗಿತ್ತು. ಅಕ್ಟೋಬರ್ 16, 1998 ರಂದು ಬಿಡುಗಡೆಯಾದ ಈ ಹಿಂದಿ ಚಲನಚಿತ್ರದಲ್ಲಿ ಶಾರುಖ್ ಖಾನ್, ಕಾಜೋಲ್ ಮತ್ತು ರಾಣಿ ಮುಖರ್ಜಿ ನಟಿಸಿದ್ದರು.
Discussion about this post