Kisan samman nidhi ಯೋಜನೆಯ ವೆಬ್ ಸೈಟ್ ನಲ್ಲಿ ಕನ್ನಡಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಗಾದೆ ತೆಗೆದಿದೆ. ಈ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ನೀಡಲಾಗಿದೆ
ಬೆಂಗಳೂರು : ಲಕ್ಷಾಂತರ ರೈತರಿಗೆ ಅನುಕೂಲವಾಗಿರುವ ಕಿಸಾನ್ ಸಮ್ಮಾನ್ ನಿಧಿ ( Kisan samman nidhi ) ಯೋಜನೆಯ ವಿರುದ್ಧ ಇದೀಗ ಕರ್ನಾಟಕ ರಕ್ಷಣಾ ವೇದಿಕೆ ಕಿಡಿ ಕಾರಿದೆ. ಯೋಜನೆಯ ವೆಬ್ ಸೈಟ್ ನಲ್ಲಿ ಕನ್ನಡವನ್ನು ನಿರ್ಲಕ್ಷ್ಯ ಮಾಡಲಾಗಿದೆ ಅನ್ನುವುದು ಕರವೇ ಮುಖಂಡರ ಆಕ್ರೋಶ. pm kisan samman nidhi ವೆಬ್ ಸೈಟ್ ನಲ್ಲಿ ಹಿಂದಿ ಭಾಷೆ ಇದೆ, ಗುಜರಾತ್ ಭಾಷೆ ಇದೆ, ತಮಿಳು, ತೆಲುಗು ಸೇರಿದಂತೆ ಹಲವಾರು ಭಾಷೆಗಳಿದೆ. ಆದರೆ ಕನ್ನಡ ಮಾತ್ರ ಇಲ್ಲ ಅನ್ನುವ ಹಿನ್ನಲೆಯಲ್ಲಿ ಈ ಹೋರಾಟದ ಎಚ್ಚರಿಕೆ ನೀಡಲಾಗಿದೆ.
ಯೋಜನೆಯ ವೆಬ್ ಸೈಟ್ ನಲ್ಲಿ ಇಂಗ್ಲೀಷ್, ಅಸ್ಸಾಮಿ, ಗುಜರಾತಿ, ಮಲಯಾಳಂ, ಮರಾಠಿ, ತೆಲುಗು ಭಾಷೆಗಳನ್ನು ಮಾನ್ಯ ಮಾಡಲಾಗಿದೆ. ಆದರೆ ಕನ್ನಡಕ್ಕೆ ಮನ್ನಣೆ ನೀಡಲಾಗಿಲ್ಲ. ಹಾಗಾದ್ರೆ ಕನ್ನಡ ಬಾರದ ರೈತರು ಏನು ಮಾಡಬೇಕು. ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅನ್ನದಾತರಿದ್ದೂ, ಕನ್ನಡದ ಬಗ್ಗೆ ನಿರ್ಲಕ್ಷ್ಯ ಯಾಕೆ ಎಂದು ಪ್ರಶ್ನಿಸಿರುವ ಕರವೇ, ಭಾಷಾ ನೀತಿ ಕಡೆಗಣನೆಯನ್ನು ಖಂಡಿಸಿದೆ.
ಇದನ್ನೂ ಓದಿ : ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ : ಶಾಸಕ ಜಮೀರ್ ಸಾಮ್ರಾಜ್ಯಕ್ಕೆ ಎಸಿಬಿ ದಾಳಿ
ಮಾಹಿತಿಗಳ ಪ್ರಕಾರ ಕೇರಳದಲ್ಲಿ 37 ಲಕ್ಷ ಫಲಾನುಭವಿಗಳು, ಅಸ್ಸಾಂನಲ್ಲಿ 31 ಲಕ್ಷ ಫಲಾನುಭವಿಗಳಿದ್ದು ಅಲ್ಲಿನ ಭಾಷೆಗಳಿಗೆ ಮನ್ನಣೆ ನೀಡಲಾಗಿದೆ. ಆದರೆ ಕರ್ನಾಟಕದಲ್ಲಿ 50 ಲಕ್ಷ ಫಲಾನುಭವಿಗಳಿದ್ದರೂ ಕನ್ನಡಕ್ಕೆ ವೆಬ್ ಸೈಟ್ ನಲ್ಲಿ ಜಾಗವಿಲ್ಲ. ಹೀಗಾಗಿ ತಕ್ಷಣ ವೆಬ್ ಸೈಟ್ ನಲ್ಲಿ ಯೋಜನೆಯ ಬಗ್ಗೆ ಕನ್ನಡದಲ್ಲೂ ಮಾಹಿತಿ ನೀಡುವಂತೆ ಆಗ್ರಹಿಸಿರುವ ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ( TA Narayanagowda ) ತಪ್ಪಿದರೆ ಉಗ್ರ ಹೋರಾಟ ಉಂಟು ಅಂದಿದ್ದಾರೆ.
ರಾಜಕೀಯದಿಂದ ದೂರ ಸರಿದ ರಮ್ಯ ಬ್ಯಾಂಕಾಕ್ ನತ್ತ ಪಯಣ
ಮೋಹಕ ತಾರೆ ರಮ್ಯ ( Ramya ) ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದಾರೆ. ಆಗೊಮ್ಮೆ ಈಗೊಮ್ಮೆ ಮೋದಿ ( Naredndra modi ), ಬಿಜೆಪಿ ( BJP ) ವಿರುದ್ಧ ಟ್ವೀಟ್ ಮಾಡುತ್ತಿರುವ ರಮ್ಯ ತಮ್ಮ ಹಳೆಯ ಗೆಳೆಯರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಮಾಧ್ಯಮಗಳ ಕ್ಯಾಮಾರದಿಂದ ಸಂಪೂರ್ಣ ಮರೆಯಾಗಿದ್ದ ರಮ್ಯ ನಿಧಾನವಾಗಿ ಸುದ್ದಿ ವಾಹಿನಿಗಳ ( news channels) ಕ್ಯಾಮಾರ ಕಡೆಗೆ ಒಲವು ತೋರಿದ್ದಾರೆ. ಈ ನಡುವೆ ದಿವ್ಯಾ ಸ್ಪಂದನ ಯಾನೆ ರಮ್ಯ ಬ್ಯಾಂಕಾಕ್ ಗೆ ( Ramya Bangkok) ಹಾರಿರುವ ಸುದ್ದಿ ಬಂದಿದೆ
ಇತ್ತೀಚೆಗೆಷ್ಟೇ ನಟಿ ಕಾವ್ಯಾ ಮತ್ತು ವರುಣ್ ಗೌಡ ಮದುವೆಯಲ್ಲಿ ಕಾಣಿಸಿಕೊಂಡಿದ್ದ ರಮ್ಯ ಬ್ರೇಕ್ ಸಲುವಾಗಿ ಬ್ಯಾಂಕಾಕ್ಗೆ ಹಾರಿದ್ದಾರೆ. ಆತ್ಮೀಯ ಗೆಳತಿಯರು ಕೂಡಾ ರಮ್ಯ ಅವರಿಗೆ ಕಂಪನಿ ನೀಡಿದ್ದಾರೆ ಅನ್ನಲಾಗಿದೆ.
ಈ ನಡುವೆ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಲು ಮುಂದಾಗಿರುವ ರಮ್ಯಾ, ಕಥೆಗಳನ್ನು ಕೇಳುತ್ತಿದ್ದಾರಂತೆ. ದೊಡ್ಡ ಗ್ಯಾಪ್ ನಂತ್ರ ತೆರೆಗೆ ಮರಳುತ್ತಿರುವ ಕಾರಣ ಕಥೆ ಭಿನ್ನವಾಗಿರಬೇಕು ಅನ್ನುವುದು ರಮ್ಯಾ ಆಸೆಯಂತೆ. ಹೀಗಾಗಿ ಸಿನಿಮಾ ಮಾಡಲು ಕಥೆಗಳನ್ನು ಅವರು ಕೇಳುತ್ತಿದ್ದಾರೆ.
ಅಭಿ ಸಿನಿಮಾದ ಮೂಲಕ ಚಂದನವನಕ್ಕೆ ಬಂದ ರಮ್ಯ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ರಾಜಕೀಯದ ಕಡೆಗೆ ಹೆಜ್ಜೆ ಹಾಕಿದ ರಮ್ಯ ಅಲ್ಲಿ ಯಶಸ್ಸು ಕಾಣಲಿಲ್ಲ. ಚಿತ್ರರಂಗದಲ್ಲೇ ಇರುತ್ತಿದ್ರೆ ರಮ್ಯಾ ಇಷ್ಟು ಹೊತ್ತಿಗೆ ದೊಡ್ಡ ಮಟ್ಟದಲ್ಲಿ ಬೆಳೆದಿರುತ್ತಿದ್ದರು. ಆದರೆ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗಿಳಿದು ತಪ್ಪು ಮಾಡಿದ್ರ ಅನ್ನುವ ಪ್ರಶ್ನೆ ಈಗ್ಲೂ ಹಲವರನ್ನು ಕಾಡುತ್ತಿದೆ.
ಒಟ್ಟಿನಲ್ಲಿ ಇದೀಗ ಸಿನಿಮಾ, ರಾಜಕೀಯ ಆದಾದ ಬಳಿಕ ಕೆಲದಿನ ಸಿನಿಮಾ ಮತ್ತು ರಾಜಕೀಯ ಎರಡು ರಂಗದಿಂದಲೂ ದೂರ ಸರಿದಿದ್ದ ರಮ್ಯ ಈಗ ರಮ್ಯಾ ಚೈತ್ರ ಕಾಲ ಶುರುವಾಗುವ ಮುನ್ಸೂಚನೆ ನೀಡಿದ್ದಾರೆ. ಸಿನಿಮಾ ಸಮಾರಂಭಗಳಲ್ಲಿ, ಆತ್ಮೀಯರ ಕುಟುಂಬದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರಮ್ಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
Discussion about this post