ಬೆಂಗಳೂರು : ಬಿಗ್ ಬಾಸ್ ಮನೆಗೆ ಪ್ರಶಾಂತ್ ಸಂಬರಗಿ ಎಂಟ್ರಿ ಹಲವಾರು ಮಂದಿ ಖುಷಿ ಪಟ್ಟಿದ್ದರು. ಡ್ರಗ್ಸ್ ವಿಚಾರದಲ್ಲಿ ಪ್ರಶಾಂತ್ ಮಾಡಿದ ಕೆಲಸ ಚೆನ್ನಾಗಿತ್ತು, ಹೀಗಾಗಿ ಬಿಗ್ ಬಾಸ್ ಮನೆಯಲ್ಲೂ ಸಂಬರಗಿ ಸ್ವಚ್ಛ ಕರ್ನಾಟಕದ ಕೆಲಸ ಮಾಡುತ್ತಾರೆ ಎಂದು ಕೊಳ್ಳಲಾಗಿತ್ತು.
ಆದರೆ ಎಲ್ಲಾ ನಿರೀಕ್ಷೆಗಳು ಉಲ್ಟಾ ಹೊಡೆದಿದೆ. ಸಂಬರಗಿಯ ಅಸಲಿ ಮುಖವೇನು ಅನ್ನುವುದು ಇದೀಗ ಕಳಚಿ ಬಿದ್ದಿದೆ.
ಈ ನಡುವೆ ಕಿರಿಕ್ ಪಾರ್ಟಿ ಸಿನಿಮಾ ತಂಡ ಮತ್ತು ಲಹರಿ ಆಡಿಯೋ ಸಂಸ್ಥೆಯ ನಡುವಿನ ಕಾಪಿ ರೈಟ್ ವಿವಾದ ಮತ್ತೆ ನ್ಯಾಯಾಲಯದಲ್ಲಿ ಸದ್ದು ಮಾಡಲಾರಂಭಿಸಿದೆ. ಆದರೆ ಈ ವಿವಾದದ ನಡುವೆ ಪ್ರಶಾಂತ್ ಸಂಬರಗಿ ಹೆಸರು ಕೂಡಾ ಕೇಳಿ ಬಂದಿದೆ.
ವಿವಾದದ ಕುರಿತಂತೆ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ರಿಷಭ್ ಶೆಟ್ಟಿ, ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆಯಾಗೋ ಮುನ್ನಾ ದಿನ ಅದನ್ನು ತಡೆ ಹಿಡಿಯುವ ಕೆಲಸ ನಡೆಯಿತು. ನಮ್ಮವರೇ ನಮ್ಮ ಕತ್ತು ಹಿಸುಕುವ ಕೆಲಸ ಮಾಡಿದರು. ವಿವಾದ ಕೋರ್ಟ್ ಮೆಟ್ಟಿಲೇರಿದ ಮೇಲೆ ಸಂಧಾನದ ಪ್ರಯತ್ನ ನಡೆಯಿತು. ಮ್ಯೂಸಿಕ್ ಅನ್ನು ನಮಗೆ ಕೊಡಿ ಅನ್ನುವ ಆಫರ್ ಕೊಟ್ಟರು. ನಮಗೊಂದಿಷ್ಟು ದುಡ್ಡು ಕೊಟ್ಟು ಡೀಲ್ ಮಾಡುವ ಪ್ರಯತ್ನ ನಡೆಯಿತು. ಅಷ್ಟೇ ಅಲ್ಲದೆ ನಮ್ಮನ್ನು ಬೆದರಿಸುವ ಕೆಲಸ ನಡೆಯಿತು. ಇದೇ ಸಂದರ್ಭದಲ್ಲಿ ಪ್ರಶಾಂತ್ ಸಂಬರಗಿ ಕೂಡಾ ನಮ್ಮ ಬಳಿಗೆ ಡೀಲ್ ತೆಗೆದುಕೊಂಡು ಬಂದಿದ್ದರು ಅಂದಿದ್ದಾರೆ ರಿಷಬ್.
ಅಲ್ಲಿಗೆ ಸಂಬರಗಿ ಚಿತ್ರರಂಗದಲ್ಲಿ ಅದ್ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ ಅನ್ನುವುದನ್ನು ರಿಷಬ್ ಶೆಟ್ಟಿ ಬಯಲು ಮಾಡಿದ್ದಾರೆ.
ಆದರೆ ನಮ್ಮ ಸ್ವಂತ ಸಂಗೀತದ ಸಿನಿಮಾ ಆದಾಗಿತ್ತು. ನಾವು ಯಾವುದನ್ನೂ ಕಾಪಿ ಮಾಡಿರಲಿಲ್ಲ. ಅವತ್ತು ಅವರು ಬಳಸಿದ ಸಂಗೀತ ಸಾಧನಗಳನ್ನು ನಾವು ಬಳಸಿದ್ದೇವೆ ಅಷ್ಟೇ. ಹೀಗಾಗಿ ಡೀಲ್, ಸಂಧಾನ, ಬೆದರಿಕೆಗೆ ಜಗ್ಗುವ ಪ್ರಶ್ನೆಯೇ ಇಲ್ಲ. ಎಲ್ಲವನ್ನೂ ಕಾನೂನು ಮೂಲಕವೇ ಎದುರಿಸುತ್ತೇವೆ ಎಂದು, ಲಹರಿ ಮ್ಯೂಸಿಕ್ ಗೆ ರಿಷಭ್ ಶೆಟ್ಟಿ ಹೇಳಿದ್ದಾರೆ.
Discussion about this post