40% ಕಮಿಷನ್ ವಿವಾದ ಇದೀಗ ಮತ್ತೊಂದು ಹಂತಕ್ಕೆ ಹೋಗಿದೆ. ನಿಜವಾಗ್ಲೂ ಈಗ ಎದೆಗಾರಿಕೆ ಸಾಬೀತಾಗುತ್ತದೆ ( Kempanna)
ಬೆಂಗಳೂರು : ಕಮಿಷನ್ ಆರೋಪಕ್ಕೆ ಸಿಲುಕಿರುವ ರಾಜ್ಯ ಬಿಜೆಪಿ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರೇ ತಲೆ ತಗ್ಗಿಸುವಂತೆ ಮಾಡಿದೆ. ಮೋದಿ ಹೆಸರಿನಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಪದೇ ಪದೇ ಭ್ರಷ್ಟಚಾರದ ಆರೋಪಕ್ಕೆ ಗುರಿಯಾಗುತ್ತಿದೆ. ಪರಿಸ್ಥಿತಿ ನೋಡಿದರೆ 2023ರಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿಯಲಿದೆ.( Kempanna)
ಈ ನಡುವೆ ಕಮಿಷನ್ ಆರೋಪಕ್ಕೆ ಗುರಿಯಾಗಿರುವ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದ ಕೆಂಪಣ್ಣ ಸಚಿವ ಮುನಿರತ್ನ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುನಿರತ್ನ, 7 ದಿನಗಳ ಒಳಗಾಗಿ ನನ್ನ ಮೇಲಿನ ಆರೋಪಕ್ಕೆ ದಾಖಲೆ ಕೊಡಬೇಕು. ಇಲ್ಲವಾದ್ರೆ ಕೆಂಪಣ್ಣ ಸೇರಿದಂತೆ ಗುತ್ತಿಗೆದಾರರ ಸಂಘದ ವಿರುದ್ಧ ಶಾಸಕರ ವಿಶೇಷ ಕೋರ್ಟ್ ನಲ್ಲಿ 50 ಕೋಟಿ ಮಾನನಷ್ಟ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : Kalladka : ಕರಾವಳಿಯ ಜನಪ್ರತಿನಿಧಿಗಳ ನಿರ್ಲಕ್ಷ್ಯ : ಕಲ್ಲಡ್ಕದಲ್ಲಿ ರಸ್ತೆ ಕಾಮಗಾರಿಗೆ ವ್ಯಕ್ತಿಯ ಬೆನ್ನು ಮೂಳೆ ಮುರಿತ
ಇನ್ನು ಈ ಎಚ್ಚರಿಕೆಗೆ ಕೆಂಪಣ್ಣ ಅವರು ರಿಯಾಕ್ಷನ್ ಕೊಟ್ಟಿದ್ದು, ಮೊದಲು ಕೇಸ್ ದಾಖಲಿಸಿ, ನಾನೇ ಕೈ ಮುಗಿದು ಪ್ರಾರ್ಥಿಸುತ್ತೇನೆ. ಅವರು ಕೇಸ್ ದಾಖಲಿಸುತ್ತೇನೆ ಅಂತಾ ಹೇಳಿರುವುದು ಸಂತೋಷದ ವಿಷಯ. ಮೊದಲು ಮೊಕದ್ದಮೆ ದಾಖಲಿಸಲಿ. ನ್ಯಾಯಾಲಯಕ್ಕೆ ಎಲ್ಲಾ ದಾಖಲೆಗಳನ್ನು ನಾವು ಸಲ್ಲಿಸುತ್ತೇವೆ ಅಂದಿದ್ದಾರೆ.
ಇದೀಗ ಬಾಲ್ ಮುನಿರತ್ನ ಅಂಗಳದಲ್ಲಿದೆ. 7 ಅಲ್ಲ 70 ದಿನವಾದರೂ ಕೆಂಪಣ್ಣ ಅವರು ದಾಖಲೆ ಬಿಡುಗಡೆ ಮಾಡೋದಿಲ್ಲ, ಬದಲಾಗಿ ಕೋರ್ಟ್ ನಲ್ಲೇ ದಾಖಲೆ ಸಲ್ಲಿಸುವುದಾಗಿ ಹೇಳಿದ್ದಾರೆ. ಈಗ ಮುನಿರತ್ನ ಅವರು ಹೇಳಿದಂತೆ ಕೇಸ್ ದಾಖಲಿಸದಿದ್ರೆ, ಕೆಂಪಣ್ಣ ಆರೋಪದಲ್ಲಿ ಸತ್ಯಾಂಶವಿದೆ ಅನ್ನುವುದು ಸ್ಪಷ್ಟವಾಗುತ್ತಿದೆ. ಕೇಸು ದಾಖಲಾದ್ರೆ ನ್ಯಾಯಾಲಯವೇ ಸರಿ ತಪ್ಪುಗಳನ್ನು ತೀರ್ಮಾನಿಸಲಿದೆ.
Discussion about this post