ಆದ್ಯಾಕೋ ಬೊಮ್ಮಾಯಿ ನೇತೃತ್ವದ ಸರ್ಕಾರದ ಗ್ರಹ ಗತಿ ಸರಿ ಇಲ್ಲ. ಇದೀಗ ಕಟೀಲು ಕ್ಷೇತ್ರದಲ್ಲಿ (Kateel temple) ಪಾರ್ಕಿಂಗ್ ಶುಲ್ಕ ವಿವಾದ ಶುರುವಾಗಿದೆ
ಮಂಗಳೂರು : ಧಾರ್ಮಿಕ ಕ್ಷೇತ್ರಗಳಿಗೆ ಜನ ಕಷ್ಟ ಎಂದು ಬರುತ್ತಾರೆ. ದೇವರೇ ಸಕಲ ಸಂಕಷ್ಟ ನಿವಾರಿಸು ಎಂದು ಪ್ರಾರ್ಥಿಸುತ್ತಾರೆ. ಹೀಗಾಗಿಯೇ ಧಾರ್ಮಿಕ ಕ್ಷೇತ್ರಗಳನ್ನು ಎಂದಿಗೂ ವಾಣಿಜ್ಯ ಕ್ಷೇತ್ರವಾಗಿ ನೋಡಲು ಆಸ್ತಿಕರು ಬಯಸುವುದಿಲ್ಲ. ಆದರೆ ಕೆಲವೊಂದು ಭ್ರಷ್ಟರ ಕಾರಣದಿಂದ ಧಾರ್ಮಿಕ ಕ್ಷೇತ್ರಗಳು ಉಳ್ಳವರ ಪಾಲಿಗೆ ಮಾತ್ರ ಅನ್ನುವ ಪರಿಸ್ಥಿತಿಯೂ ಇದೆ.(Kateel temple)
ಈ ನಡುವೆ ಇದೀಗ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಪಾರ್ಕಿಂಗ್ ಶುಲ್ಕ ವಿಧಿಸಲು ಆಡಳಿತ ಮಂಡಳಿ ನಿರ್ಧರಿಸಿದೆಯಂತೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಒಂದು ವೇಳೆ ಕಟೀಲು ಕ್ಷೇತ್ರಕ್ಕೆ (Kateel temple) ಬರುವ ಭಕ್ತರಿಗೆ ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತಿದೆ ಅನ್ನುವುದಾದ್ರೆ ಅದಕ್ಕಿಂತ ದೊಡ್ಡ ಎಡವಟ್ಟು ಮತ್ತೊಂದಿಲ್ಲ.
ಇದನ್ನು ಓದಿ : Chakravarthy sulibele : ನಿರ್ವೀರ್ಯ ಸರ್ಕಾರಕ್ಕೆ ಇನ್ನೆಷ್ಟು ಪ್ರವೀಣರು ಹೆಣವಾಗಬೇಕು…
ಕಟೀಲು ದೇವಸ್ಥಾನ ಬರೀ ದೇವಸ್ಥಾನವಲ್ಲ. ಅಲ್ಲಿ ನೆಲೆ ನಿಂತಿರುವ ದುರ್ಗಾಪರಮೇಶ್ವರಿ (Kateel temple) ಸಕಲರನ್ನು ಪೊರೆವ ಮಹಾತಾಯಿ. ಭಕ್ತರ ಪಾಲಿಗೆ ಆಕೆ ಕೇವಲ ದೇವಿಯಲ್ಲ, ಆಕೆ ಆಸ್ತಿಕರ ಪಾಲಿಗೆ ಅಮ್ಮ. ಇಂತಹ ಪ್ರತಿಷ್ಠಿತ ದೇವಸ್ಥಾನಕ್ಕೆ ಬರುವ ಭಕ್ತರು ಪಾರ್ಕಿಂಗ್ ಶುಲ್ಕ ಕೊಡಬೇಕು ಅನ್ನುವುದು ಅದ್ಯಾವ ನ್ಯಾಯ. ದೇವರ ನಾಡು ಎಂದು ಕರೆಸಿಕೊಳ್ಳುವ ಕೇರಳದಲ್ಲೂ ಇಂತಹ ಕ್ರಮವಿಲ್ಲ. ಅಷ್ಟೇ ಯಾಕೆ ದಕ್ಷಿಣ ಕನ್ನಡ ಅದ್ಯಾವ ದೇವಸ್ಥಾನದಲ್ಲಿ ಪಾರ್ಕಿಂಗ್ ಶುಲ್ಕವಿದೆ.
ಪಾರ್ಕಿಂಗ್ ಶುಲ್ಕ ವಿಧಿಸಲು ಪ್ರಾರಂಭಿಸಿದ್ರೆ ಅದು ದೇವಸ್ಥಾನವಾಗಿ ಉಳಿಯೋದಿಲ್ಲ. ಅದೊಂದು ವಾಣಿಜ್ಯ ಸ್ಥಳವಾಗಿ ಬಿಡುತ್ತದೆ. ದೇವಾಲಯಗಳು ಭಕ್ತರು ಕೊಟ್ಟ ದುಡ್ಡಿನಿಂದ ನಡೆಯಬೇಕೇ ಹೊರತು, ಭಕ್ತರಿಂದ ವಸೂಲಿ ಮಾಡಿದ ದುಡ್ಡಿನಿಂದಲ್ಲ.
ಕಟೀಲು ಕ್ಷೇತ್ರದಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸುವ ಕ್ರಮಕ್ಕೆ ಇದೀಗ ಆಸ್ತಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇಂದು ಕಟೀಲು, ನಾಳೆ ಕೊಲ್ಲೂರು, ನಾಡಿದ್ದು ಸುಬ್ರಹ್ಮಣ್ಯ ಹೀಗೆ ಮುಜರಾಯಿ ದೇವಸ್ಥಾನಗಳಲ್ಲಿ ಪಾರ್ಕಿಂಗ್ ಶುಲ್ಕ ಪ್ರಕ್ರಿಯೆ ಮುಂದುವರಿದುಕೊಂಡು ಹೋಗುತ್ತದೆ ಅಂದಿದ್ದಾರೆ.
ಮತ್ತೊಬ್ಬ ಭಕ್ತರು ಈಗ ಟಿಕೆಟ್ ಕೊಡ್ತಾರೆ ಮುಂದೆ ಗಂಟೆ ಲೆಕ್ಕದಲ್ಲಿ ಮಾಲ್ ಗಳಂತೆ ಜಾರ್ಜ್ ಮಾಡ್ತಾರೆ, ನಂತರ ಪಾರ್ಕಿಂಗ್ ಶುಲ್ಕಕ್ಕೆ GST ತರ್ತಾರೆ ಒಟ್ಟಿನಲ್ಲಿ ನೆಮ್ಮದಿಯಾಗಿ ದೇವರ ದರ್ಶನಕ್ಕೆ ಬಿಡೋದಿಲ್ಲ. ಹಿಂದುಗಳ ಹೆಸರು ಹೇಳಿ ಅಧಿಕಾರಕ್ಕೆ ಬಂದವರೇ ಹಿಂದೂಗಳಿಗೆ ಟಾರ್ಚರ್ ಕೊಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
Discussion about this post