ಬೆಂಗಳೂರು : ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿರುವ ಹಿನ್ನಲೆಯಲ್ಲಿ ಈಗಾಗಲೇ 9 ರಿಂದ ತರಗತಿಗಳು ಪ್ರಾರಂಭವಾಗಿದೆ. ಕೊರೋನಾ ಸೋಂಕು ಹೆಚ್ಚಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೂಡಾ ಸೋಮವಾರದಿಂದ ಪಿಯುಸಿ ತರಗತಿಗಳು ಪ್ರಾರಂಭವಾಗಲಿದೆ.
ಈ ನಡುವೆ ಈಗಾಗಲೇ ಪ್ರಾರಂಭವಾಗಿರುವ ತರಗತಿಗಳಲ್ಲಿ ಯಾವುದೇ ಸಮಸ್ಯೆಗಳು ಕಂಡುಬಾರದಿರುವ ಹಿನ್ನಲೆಯಲ್ಲಿ 1 ರಿಂದ ಎಂಟನೇ ತರಗತಿ ಪ್ರಾರಂಭಿಸುವ ಕುರಿತಂತೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಈ ಹಿನ್ನಲೆಯಲ್ಲಿ School Re Opening ಕುರಿತಂತೆ ಸೋಮವರಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಸಭೆಯಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್, ಆರೋಗ್ಯ ಸಚಿವ ಡಾ.ಸುಧಾಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದು 1 ರಿಂದ 8 ನೇ ತರಗತಿ ಪ್ರಾರಂಭಿಸುವ ಕುರಿತಂತೆ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಶಾಲೆ ಪ್ರಾರಂಭಿಸುವ ಬಗ್ಗೆ ತಜ್ಞರು ವರದಿಯನ್ನು ಕೊಟ್ಟಿದ್ದು, ವರದಿಯ ಆಧಾರದಲ್ಲಿ ಶಾಲೆ ತೆರೆಯುವ ಬಗ್ಗೆ ನಿರ್ಧಾರವಾಗಲಿದೆ.
ಶೇ.2 ಕ್ಕಿಂತ ಕಡಿಮೆ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದು ತಾಂತ್ರಿಕ ಸಮಿತಿ ತಜ್ಞರು ಹಸಿರು ನಿಶಾನೆ ತೋರಿದರೆ ಸೆಪ್ಟೆಂಬರ್ ಮೊದಲ ದಿನ, ತಪ್ಪಿದ್ರೆ ಮೊದಲ ವಾರದಲ್ಲೇ ಶಾಲೆ ಆರಂಭವಾಗೋ ಸಾಧ್ಯತೆಗಳಿದೆ,
Discussion about this post