ಇತ್ತೀಚೆಗೆ ರಾಜಕಾರಣಿಗಳು ಆಡುತ್ತಿರುವ ಮಾತು ನೋಡಿದ್ರೆ ಇವರು ದೇಶ ಕಟ್ಟುತ್ತಾರೆ ಅನ್ನೋದು ನಮ್ಮ ಭ್ರಮೆ ( Karnataka Politics )
ಬಾಗಲಕೋಟೆ : ನಳಿನ್ ಕುಮಾರ್ ಕಟೀಲು ಒಬ್ಬ ವಿದೂಷಕ ಇದ್ದ ಹಾಗೆ. ಪಾಪ ಅವನಿಗೆ ಮೆಚ್ಯುರಿಟಿ ಇಲ್ಲ. ನಾನು ನೀಡಿರುವ ಆಡಳಿತ ಸೇರಿ ಕಳೆದ 16 ವರ್ಷಗಳ ಹಿಂದಿನದ್ದು ತನಿಖೆ ಮಾಡಿಸಿ, ಭ್ರಷ್ಟಚಾರ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಿ ಎಂದು ಅಧಿವೇಶನದಲ್ಲೇ ಸಿಎಂಗೆ ಹೇಳಿದ್ದೆ. ಆದರೆ ಸಿಎಂ ಉತ್ತರ ನೀಡದೆ ಸಿಎಂ ಸುಮ್ಮನಾದ್ರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ( Karnataka Politics)
ಜಮಖಂಡಿ ತಾಲೂಕಿನ ನಾಗನೂರು ಗ್ರಾಮದಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದ ಅವಧಿಯಲ್ಲಿ ಪ್ರಧಾನಿ ಮೋದಿ ನಮ್ಮ ಸರ್ಕಾರವನ್ನು 10 ಶೇ, ಸರ್ಕಾರ ಎಂದು ಕರೆದಿದ್ದರು. ಅದಕ್ಕೆ ಬಿಜೆಪಿಯವರು ಯಾವ ದಾಖಲೆ ನೀಡಿದ್ದರು. ಹಾಗಿರುವಾಗ, ಅವರಿಗೆ ದಾಖಲೆ ಕೇಳಲು ಏನು ಹಕ್ಕಿದೆ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಲೋಕಾಯುಕ್ತವನ್ನು ನಾನು ರದ್ದು ಮಾಡಿಲ್ಲ ಅಂದಿರುವ ಸಿದ್ದರಾಮಯ್ಯ, ಎಸಿಬಿಯನ್ನು ಬಿಜೆಪಿ ರದ್ದು ಮಾಡಿಲ್ಲ, ನ್ಯಾಯಾಲಯ ರದ್ದು ಮಾಡಿದೆ ಅಂದಿದ್ದಾರೆ.
ಈ ನಡುವೆ ವಿಜಯಪುರದಲ್ಲಿ ಮಾತನಾಡಿರುವ ನಳಿನ್ ಕುಮಾರ್ ಕಟೀಲು, SDPIನ ನೂರಾರು ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದು ಸಿದ್ದರಾಮಯ್ಯ. ಅವರ ಆಡಳಿತ ಅವಧಿಯಲ್ಲಿ ಮೂರು ಸಾವಿರ ರೈತರ ಆತ್ಮಹದತ್ಯೆಯಾಗಿದೆ. ನೂರಾರು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಒಬ್ಬ ನರಹಂತಕ ಮುಖ್ಯಮಂತ್ರಿ ಆಗಿದ್ದರು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಎಸ್ಡಿಪಿಐ ಬೆಳೆಯಲು ಸಿದ್ದರಾಮಯ್ಯ ಅವರೇ ಕಾರಣ. ಅವರ ಅವಧಿಯಲ್ಲೇ ದೇಶ ವಿರೋಧಿ ಸಂಘಟನೆಗಳು ಬೆಳೆದಿವೆ. ನಮ್ಮ ಸರ್ಕಾರ ದೇಶ ವಿರೋಧಿ ಸಂಘಟನೆಗಳನ್ನು ಸದೆ ಬಡಿಯಲು ದೃಢ ಸಂಕಲ್ಪ ಮಾಡಿದೆ. ಪಿಎಫ್ಐ ಮೇಲೆ ನಡೆಯುತ್ತಿರುವ ದಾಳಿ ರಾಜಕೀಯ ಪ್ರೇರಿತವಲ್ಲ ಎಂದು ನಳಿನ್ ಸ್ಪಷ್ಟಪಡಿಸಿದ್ದಾರೆ.
Discussion about this post