ಬೆಂಗಳೂರು : ಕರ್ನಾಟಕದಲ್ಲಿ ಜೂನ್ 7ರ ತನಕ ಜಾರಿಯಲ್ಲಿರುವ ಲಾಕ್ ಡೌನ್ ಅನ್ನು ಮುಂದುವರಿಸಬೇಕು ಎಂದು ಈಗಾಗಲೇ ತಜ್ಞರು ಶಿಫಾರಸು ಮಾಡಿದ್ದಾರೆ. ಕೆಲ ಶಾಸಕರು ಸಚಿವರು ಕೂಡಾ ಲಾಕ್ ಡೌನ್ ಮುಂದುವರಿಸಿದೆ ವಿಧಿಯಿಲ್ಲ ಅಂದಿದ್ದಾರೆ. ಆದರೆ ಒಂದಿಷ್ಟು ಮಂದಿ ಸಚಿವರಿಗೆ ಲಾಕ್ ಡೌನ್ ಮುಂದುವರಿಯೋದು ಬೇಕಾಗಿಲ್ಲ. ಈಗಾಗಲೇ ಕೆಲಸ ಕಾರ್ಯಗಳಿಲ್ಲದೆ ಜನ ಕಂಗಲಾಗಿದ್ದಾರೆ. ಈ ಹಿನ್ನಲೆಯಲ್ಲಿ ಅನ್ ಲಾಕ್ ಪ್ರಕ್ರಿಯೆ ಪ್ರಾರಂಭಿಸಿ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಈ ಹಿನ್ನಲೆಯಲ್ಲಿ ಇಂದು ಸಂಜೆ ಹಿರಿಯ ಸಚಿವರ ಸಭೆ ಕರೆದಿರುವ ಸಿಎಂ ಯಡಿಯೂರಪ್ಪಅನ್ ಲಾಕ್ ಪ್ರಕ್ರಿಯೆ ಪ್ರಾರಂಭಿಸುವ ಕುರಿತಂತೆ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ರಫ್ತು ಘಟಕಗಳಿಗೆ ಅನುಮತಿ ಕೊಡಲು ತೀರ್ಮಾನಿಸಲಾಗಿದ್ದು, ನಾಳೆಯಿಂದಲೇ ಅವುಗಳು ಲಾಕ್ ಡೌನ್ ನಿಂದ ಮುಕ್ತವಾಗಲಿದೆ. ಇದರೊಂದಿಗೆ ಜೂನ್ 7 ರ ನಂತ್ರ ಒಂದಿಷ್ಟು ವಿನಾಯತಿಗಳು ಘೋಷಣೆಯಾಗುವ ಸಾಧ್ಯತೆಗಳಿದೆ.
ಅದರಲ್ಲೂ ಹಳ್ಳಿಗಳಲ್ಲಿ ಕೊರೋನಾ ಅಬ್ಬರಿಸುತ್ತಿರುವ ಕಾರಣ ಜಿಲ್ಲಾಧಿಕಾರಿಗಳಿಗೆ ಪರಮಾಧಿಕಾರವನ್ನು ಕೊಟ್ಟು, ಹೆಚ್ಚು ಸೋಂಕು ಇರೋ ಹಳ್ಳಿಗಳನ್ನು ಲಾಕ್ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಈಗಾಗಲೇ ಉಡುಪಿಯಲ್ಲಿ ಜಾರಿ ಮಾಡಿರುವ ಈ ಕೆಲಸ ಫಲ ನೀಡಿದ್ದು, ಅದನ್ನೂ ರಾಜ್ಯದೆಲ್ಲೆಡೆ ವಿಸ್ತರಿಸುವ ಸಾಧ್ಯತೆಗಳಿದೆ.
ಇಂದು ಮಾತನಾಡಿರುವ ಮುಖ್ಯಮಂತ್ರಿಗಳು ಲಾಕ್ ಡೌನ್ ವಿಸ್ತರಣೆ ಎಂದು ಹೇಳಿದ್ದಾರೆ. ಆದರೆ ಲಭ್ಯ ಮಾಹಿತಿಗಳ ಪ್ರಕಾರ ಲಾಕ್ ಡೌನ್ ವಿಸ್ತರಣೆಯ ಆದೇಶದ ಜೊತೆಗೆ ಕೆಲವೊಂದು ವಿನಾಯತಿಗಳು ಕೂಡಾ ಸಿಗಲಿದೆಯಂತೆ.
Discussion about this post