ಬೆಂಗಳೂರು : ಲಾಕ್ ಡೌನ್ ಕಾರಣದಿಂದ ಮದ್ಯ ಸಿಗದೇ ಕಂಗಲಾಗಿದ್ದ ಕುಡುಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಮನೆ ಮಠ ಮಾರಿದರೂ ಪರವಾಗಿಲ್ಲ, ಮನೆ ಮಂದಿ ಬೀದಿಗೆ ಬಿದ್ದರೂ ಪರವಾಗಿಲ್ಲ ಎಂದು ,ಸೋಮವಾರದಿಂದ ಅಂದ್ರೆ ಏಪ್ರಿಲ್ 4 ರಿಂದ ಮದ್ಯದಂಗಡಿಗಳು ಬಾಗಿಲು ತೆರೆಯಲಿದೆ. ಇಂತಿಷ್ಟೇ ಅವಧಿಗೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜೊತೆಗೆ ಮಾಸ್ಕ್ ಹಾಕಿರಬೇಕು, ಕೈಗವಸು ಧರಿಸಬೇಕು, ಸ್ಯಾನಿಟೈಸರ್ ಇರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದೆಲ್ಲಾ ಆದೇಶದಲ್ಲಿ ಹೇಳಲಾಗಿದೆ.
ಈ ನಡುವೆ ಒಂದು ಹೆಜ್ಜೆ ಮುಂದೆ ಹೋಗಿರುವ ಶಿವಮೊಗ್ಗದ ಅಬಕಾರಿ ಅಧಿಕಾರಿಗಳು ಒಬ್ಬರಿಗೆ ಒಂದು ಅವಧಿಗೆ 6 ಕ್ವಾರ್ಟರ್ ಮದ್ಯ ಮಾತ್ರ ನೀಡಲಾಗುತ್ತದೆ ಅಂದಿದ್ದಾರೆ. ಅದಕ್ಕಿಂತ ಹೆಚ್ಚು ಮದ್ಯವನ್ನು ಒಯ್ಯುವಂತಿಲ್ಲ ಅನ್ನುವುದು ಅಬಕಾರಿ ಅಧಿಕಾರಿಗಳು ಮಾತು.
6 ಕ್ವಾರ್ಟರ್ ಅಥವಾ 4 ಫುಲ್ ಬಾಟಲ್ ಬಿಯರ್ ಅಥವಾ 6 ಪಿಂಟ್ ಒಯ್ಯಲು ಮಾತ್ರ ಶಿವಮೊಗ್ಗದಲ್ಲಿ ಅನುಮತಿಯಂತೆ. ಈ ಆದೇಶಕ್ಕೆ ಇಡೀ ರಾಜ್ಯಕ್ಕೆ ಅನ್ವಯಿಸುತ್ತದೋ ಅಥವಾ ಕೇವಲ ಶಿವಮೊಗ್ಗಕ್ಕೆ ಮಾತ್ರವೇ ಅನ್ನುವುದು ಇನ್ನಷ್ಟೇ ಗೊತ್ತಾಗಬೇಕಾದೆ.
Discussion about this post