2024-2029 ಜಾಗತಿಕ ಸಾಮರ್ಥ್ಯ ಕೇಂದ್ರ – ಜಿಸಿಸಿ ನೀತಿ (ಗ್ಲೋಬಲ್ ಕೆಪಬಿಲಿಟಿ ಸೆಂಟರ್) ಬಿಡುಗಡೆ
ರಾಜ್ಯದಲ್ಲಿ 2029ರ ವೇಳೆಗೆ 500 ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 2024 ಹಾಗೂ 2029 ಜಿಸಿಸಿ ನೀತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಇದರಿಂದಾಗಿ 3 ಲಕ್ಷದ 50 ಸಾವಿರ ಉದ್ಯೋಗಗಳನ್ನು ಸೃಷ್ಠಿಸಲಾಗುವುದು ಮತ್ತು ಆರ್ಥಿಕ ಉತ್ಪಾದನೆಯಲ್ಲಿ 50 ಬಿಲಿಯನ್ ಡಾಲರ್ ಗುರಿ ತಲುಪಲಾಗುವುದು. ಜಿಸಿಸಿಯಲ್ಲಿ ಸುಮಾರು 5 ಲಕ್ಷದ 70 ಸಾವಿರ ವೃತ್ತಿಪರರು ಉದ್ಯೋಗದಲ್ಲಿದ್ದಾರೆ.
ದೇಶದಲ್ಲಿ ಬೆಂಗಳೂರು ಶೇಕಡ 39ರಷ್ಟು ಮಾರುಕಟ್ಟೆ ಪಾಲುದಾರಿಕೆಯನ್ನು ಹೊಂದಿದೆ ಎಂದು ಸಚಿವರು ತಿಳಿಸಿದರು. ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕರೂಪ್ ಕೌರ್ ಮತ್ತಿತರರು ಭಾಗವಹಿಸಿದ್ದರು.
ಜಿಸಿಸಿ ನೀತಿಯ ಪ್ರಮುಖ ಅಂಶಗಳು ಹೀಗಿವೆ…
– ಬೆಂಗಳೂರು ಮತ್ತು ಬೆಂಗಳೂರಿನ ಹೊರವಲಯದಲ್ಲಿ ಮೂರು ಹೊಸ ಟೆಕ್ ಪಾರ್ಕ್ಗಳೊಂದಿಗೆ ಜಾಗತಿಕ ನಾವೀನ್ಯತೆಯ ಜಿಲ್ಲೆಗಳ ಸ್ಥಾಪನೆ.
– ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗಾಗಿ 100 ಕೋಟಿ ರೂಪಾಯಿ ಆವಿಷ್ಕಾರ ನಿಧಿ.
– “ಇನ್ನೋವೇಶನ್ ಬಿಯಾಂಡ್ ಬೆಂಗಳೂರು” ಪ್ಯಾಕೇಜ್ ನೇಮಕಾತಿಗೆ ನೆರವು, ಇತರೆ ಬೆಂಬಲ ಮತ್ತು ಪ್ರೋತ್ಸಾಹಕಗಳ ವಿಸ್ತರಣೆ.
– ಅನುಮೋದನೆಗಳು ಮತ್ತು ಸರ್ಕಾರದ ಸಮನ್ವಯವನ್ನು ಸುವ್ಯವಸ್ಥಿತಗೊಳಿಸಲು ಜಿಸಿಸಿಗಳಿಗೆ ಏಕ ಸಂಪರ್ಕದ (SPOC) ರಚನೆ.
– ಬೆಂಗಳೂರು ಕ್ಲಸ್ಟರ್ ಆಚೆಗೆ ನ್ಯಾನೋ ಜಿಸಿಸಿಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗಳಿಗೆ ಬೆಂಬಲ.
– ಒಂದು ಲಕ್ಷ ಇಂಟರ್ನ್ಶಿಪ್ಗಳ ಸುಗಮಗೊಳಿಸುವಿಕೆ
– ಕೃತಕ ಬುದ್ಧಿಮತ್ತೆ (AI) ಗಾಗಿ ಉತ್ಕೃಷ್ಟತಾ ಕೇಂದ್ರ ಮತ್ತು AI ಸಂಶೋಧನೆ ಮತ್ತು ಅಭಿವೃದ್ಧಿಗೆ ಚಾಲನೆ ನೀಡಲು AI ಕೌಶಲ್ಯ ಮಂಡಳಿ ಪ್ರಾರಂಭ.
The Karnataka government on Friday unveiled the draft of India’s first global capability centre (GCC) policy, aiming at establishing 500 of these centres by 2029 and generating 3.5 lakh jobs.
The policy is expected to contribute $50 billion to the state’s economy in the next five years