ಅರ್ಥ ವ್ಯವಸ್ಥೆ ಹಾಗೂ ಕರ್ನಾಟಕದ ಹೆಗ್ಗರುತನ್ನು ಬದಲಿಸುವ ಕ್ವಿನ್ ಸಿಟಿ ಯೋಜನೆ
ಬೆಂಗಳೂರಿನಲ್ಲಿ ನಡೆದ ಜ್ಞಾನ, ಆರೋಗ್ಯ ಮತ್ತು ಸಂಶೋಧನೆಯನ್ನು ಸಮಗ್ರವಾಗಿ ಸಂಯೋಜಿಸುವ ರಾಜ್ಯದ ಅರ್ಥ ವ್ಯವಸ್ಥೆ ಹಾಗೂ ಕರ್ನಾಟಕದ ಹೆಗ್ಗರುತನ್ನು ಬದಲಿಸುವ ಕ್ವಿನ್ ಸಿಟಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸೌಧದಲ್ಲಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ಈ ಯೋಜನೆಯಿಂದ ರಾಜ್ಯದ ಆರ್ಥಿಕ ಬೆಳವಣಿಗೆ ಹೆಚ್ಚಾಗಲಿದ್ದು, ಜಾಗತಿಕ ಪ್ರತಿಭಾನ್ವಿತರನ್ನು ಆಕರ್ಷಿಸಲಿದೆ ಎಂದು ತಿಳಿಸಿದರು.
ಕೇವಲ ಕಟ್ಟಡಗಳನ್ನು ನಿರ್ಮಾಣ ಮಾಡುವುದು ಕ್ವಿನ್ ಸಿಟಿಯ ಗುರಿಯಲ್ಲ. ಶಿಕ್ಷಣ, ತಂತ್ರಜ್ಞಾನ, ಉದ್ಯೋಗ, ಸುಸ್ಥಿರ ಅಭಿವೃದ್ಧಿ ಸೇರಿದಂತೆ ಕರ್ನಾಟಕದ ಭವಿಷ್ಯವನ್ನು ಗುರಿಯಾಗಿಟ್ಟುಕೊಂಡು ಜನರ ಜೀವನದಲ್ಲಿ ಬದಲಾವಣೆ ತರುವುದು ಯೋಜನೆಯ ಗುರಿ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರು ನಗರದ ಅಭಿವೃದ್ಧಿಗೆ ಸರ್ಕಾರ ಕಟಿಬದ್ಧವಾಗಿದ್ದು ನೀರು ವಿದ್ಯುತ್ ರಸ್ತೆ ಸೇರಿದಂತೆ ಎಲ್ಲಾ ಮೂಲ ಸೌಕರ್ಯವನ್ನು ಜನರಿಗೆ ಹಾಗೂ ಕೈಗಾರಿಕೆಗಳಿಗೆ ಒದಗಿಸುವುದು ಆದ್ಯತೆ” ಎಂದು ಹೇಳಿದರು.
ಕೆಲವೇ ದಿನಗಳಲ್ಲಿ ಕಾವೇರಿ ಕುಡಿಯುವ ನೀರಿನ ಐದನೇ ಹಂತ ಕಾಮಗಾರಿ ಮುಗಿಯಲಿದ್ದು ಮುಂದಿನ ೧೦ ವರ್ಷ ಬೆಂಗಳೂರು ಹಾಗೂ ನಗರದ ಸುತ್ತಮುತ್ತ ನೀರಿನ ತೊಂದರೆ ಇರುವುದಿಲ್ಲ” ಎಂದು ತಿಳಿಸಿದರು.
All we need to know about the KWIN city
The project aims to create a parallel city to Bengaluru for equal growth and opportunities in all sectors within an accessible distance to Karnataka’s capital.
After taking all the suggestions, the state government rounded off the area between Doddaspete and Doddaballapur, which is roughly 60 kilometres from Bengaluru. This will be built in a total of 2000 acres of land which is on the Satellite Town Ring Road. (STRR)
KWIN City will primarily focus on attracting top educational institutions, start-ups, research centres and global health centres, which can provide employment to the local people.
The Département of Commerce and Industries is implementing the project, and as it is away from the usual Bengaluru traffic, it is likely to attract investors, keeping its accessibility to the international airport in mind.
The Kempegowda International Airport is just an hour away from the KWIN city, and a new real-estate boom is expected around Doddaballapur.