ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ (30) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೌಂದರ್ಯ ಯಡಿಯೂರಪ್ಪ ಪುತ್ರ ಪದ್ಮಾವತಿಯವರ ದ್ವೀತಿಯ ಪುತ್ರಿಯಾಗಿದ್ದಾರೆ. ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಸಂತನಗರದಲ್ಲಿರುವ ಮೌಂಟ್ ಕಾರ್ಮೆಲ್ ಸಮೀಪದ ವಸತಿ ಸಮುಚ್ಛಯದಲ್ಲಿ ಇವರು ವಾಸವಾಗಿದ್ದರು.
ಸೌಂದರ್ಯ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಸೌಂದರ್ಯ ಪತಿ ಡಾ. ನಿರಂಜನ್ ರಾಮಯ್ಯ ಆಸ್ಪತ್ರೆಯಲ್ಲಿ ಸಹಾಯಕ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. 2018ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮರಿಸ್ವಾಮಿ ಅಣ್ಣನ ಮಗ ಡಾ. ನಿರಂಜನ್ ಮತ್ತು ಸೌಂದರ್ಯ ವಿವಾಹ ನೆರವೇರಿತ್ತು.
ಇಂದು ನಿರಂಜನ್ ಎಂದಿನಂತೆ 8 ಗಂಟೆಗೆ ಕೆಲಸಕ್ಕೆ ಹೋಗಿದ್ದರು. 10 ಗಂಟೆಗೆ ಹೊತ್ತಿಗೆ ಮನೆ ಕೆಲಸದವರು ಬಂದಾಗ ಬಾಗಿಲು ತೆರೆಯಲಿಲ್ಲ. ಅನುಮಾನಗೊಂಡು ನಿರಂಜನ್ ಗೆ ಕರೆ ಮಾಡಿ ವಿಷಯ ತಿಳಿಸಲಾಗಿದೆ. ಬಳಿಕ ಬಾಗಿಲು ಒಡೆದಾಗ ಸೌಂದರ್ಯ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
9 ತಿಂಗಳ ಹಿಂದಷ್ಟೇ ಸೌಂದರ್ಯ ಮಗುವಿಗೆ ಜನ್ಮ ನೀಡಿದ್ದರು. 3 ತಿಂಗಳ ಹಿಂದೆ ಪತಿ ಮನೆಗೆ ಮರಳಿದ್ದ ಸೌಂದರ್ಯ ಡೆಲಿವರಿ ಬಳಿಕ ಡಿಪ್ರೇಷನ್ ಗೆ ಹೋಗಿದ್ದರು ಅನ್ನಲಾಗಿದೆ.
ಮಾನ್ಯ ಮುಖ್ಯಮಂತ್ರಿಗಳು, ಆತ್ಮೀಯರೂ ಆಗಿರುವ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ತಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ.@BSBommai pic.twitter.com/wDQ1SJt3is
— B.S. Yediyurappa (@BSYBJP) January 28, 2022
ತಮ್ಮ ಹುಟ್ಟಿದ ದಿನದ ನಿಮಿತ್ತ ಇಂದು ಭೇಟಿಗೆ ಆಗಮಿಸಿದ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ಹಾಗೂ ಆತ್ಮೀಯರಾದ ಬಸವರಾಜ ಬೊಮ್ಮಾಯಿ ಅವರಿಗೆ ಶುಭ ಹಾರೈಸಲಾಯಿತು. @BSBommai pic.twitter.com/fwdTqmZ1iQ
— B.S. Yediyurappa (@BSYBJP) January 28, 2022
Discussion about this post