ಬೆಂಗಳೂರು : ಇದೇ ತಿಂಗಳ 11 ರಂದು ಮೇಘಾಲಯದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಕಾರಹಳ್ಳಿ ಬಳಿಯಿರೂ BSF Camp ( ಬಿಎಸ್ಎಫ್ ಟ್ರೈನಿಂಗ್ ಕ್ವಾಟರ್ಸ್) ಗೆ ಬಂದಿದ್ದ 70 ಯೋಧರಿಗೆ ಕೊರೋನಾ ಸೋಂಕು ತಗುಲಿದೆ. ಕೆಲ ದಿನಗಳ ಹಿಂದೆ 34 ಯೋಧರಿಗೆ ಸೋಂಕು ತಗುಲಿತ್ತು. ಹೀಗಾಗಿ ಎಲ್ಲರನ್ನೂ ಪರೀಕ್ಷೆ ಒಳಪಡಿಸಲು ನಿರ್ಧರಿಸಲಾಗಿದ್ದು, ಇದೀಗ ಮತ್ತೆ 36 ಯೋಧರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 70ಕ್ಕೆ ಏರಿದೆ.
ಈಗಾಗಲೇ 70 ಮಂದಿಯನ್ನು ಐಸೋಲೇಷನ್ ಗೆ ಒಳಪಡಿಸಲಾಗಿದ್ದು, ಈ ಪೈಕಿ ಒಬ್ಬ ಯೋಧನಿಗೆ ICUನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರಹಳ್ಳಿಯ ಕ್ಯಾಂಪ್ ನಲ್ಲಿ 1800 ಜನ ಯೋಧರು ಹಾಗೂ ಮತ್ತು ಅವರ ಕುಟುಂಬಸ್ಥರಿದ್ದು ಮಂಗಳವಾರ 400 ಜನರನ್ನು ಆರೋಗ್ಯ ಇಲಾಖೆ RTPCR ಪರೀಕ್ಷೆಗೆ ಒಳಪಡಿಸಿತ್ತು. ಇನ್ನೂ 1400 ಜನರನ್ನು ಪರೀಕ್ಷೆ ಒಳಪಡಿಸಬೇಕಾಗಿದ್ದು ಇದಕ್ಕಾಗಿ ಆರೋಗ್ಯ ಇಲಾಖೆ ಸಿದ್ದತೆ ಮಾಡಿಕೊಂಡಿದೆ.
Discussion about this post