ಬೆಂಗಳೂರು : ಕೊರೋನಾ ನಿಯಂತ್ರಣ ಸಲುವಾಗಿ ರಾಜ್ಯ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ನೈಟ್ ಕರ್ಫ್ಯೂ, ವಿಕೇಂಡ್ ಕರ್ಫ್ಯೂ, ದೇವಸ್ಥಾನಗಳಲ್ಲಿ ಪೂಜೆ ಸ್ಥಗಿತ ಹೀಗೆ ಹೊರಡಿಸಿರುವ ಆದೇಶಗಳನ್ನು ನೋಡಿದರೆ ಕೊರೋನಾ ಮತ್ತೆ ಚೀನಾಗೆ ಓಡಿ ಹೋಗಬೇಕು. ಆದರೆ ಹೀಗೆಲ್ಲಾ ಆದೇಶ ಹೊರಡಿಸಿದ ರಾಜಕಾರಣಿಗಳು ಹೇಗೆ ಬೇಕಾದರೂ ಇರಬಹುದು. ಮನಸ್ಸಿಗೆ ಇಚ್ಛೆ ಬಂದಂತೆ ಕಾರ್ಯಕ್ರಮ ಮಾಡಬಹುದು. ಬಡ ಹಾಗೂ ಮಧ್ಯಮ ವರ್ಗದ ಮಂದಿ ಮದುವೆ ಮಾಡಿದರೆ ದಂಡ ಬೀಳುತ್ತದೆ. ರಾಜಕಾರಣಿಗಳ ಮಕ್ಕಳ ಮದುವೆಯಲ್ಲಿ ಕೊರೋನಾ ನಿಯಮ ಗಾಳಿಗೆ ತೂರಿದರೆ ಎಲ್ಲವೂ ಮಾಫಿ.
ರಾಜಕಾರಣಿಗಳು ಹೇಗೆ ಬೇಕಾದರೂ ಸಮಾವೇಶ ಮಾಡಬಹುದು, ಅದೇ ಗಣೇಶ ಕೂರಿಸ್ತೀವಿ ಅಂದ್ರೆ ಕೊರೋನಾ ಬರುತ್ತದೆ ಅಂತಾರೆ. ಗಣೇಶೋತ್ಸವ ಅನುಮತಿ ಕೊಡಿ ಎಂದು ಆಸ್ತಿಕರು ಕೊಟ್ಟ ಮನವಿಗೆ ಸರ್ಕಾರ ಇನ್ನೂ ಸ್ಪಂದಿಸಿಲ್ಲ, ಬದಲಾಗಿ ಸಭೆಗಳ ಸಭೆ ನಡೆಸುತ್ತಲೇ ಇದೆ.
ಈ ನಡುವೆ ಇಂದು ಗಣೇಶೋತ್ಸವಕ್ಕೆ ಷರತ್ತಿನ ಅನುಮತಿ ಸಿಗುವ ಸಾಧ್ಯತೆಗಳಿದೆ ಎನ್ನಲಾಗಿದೆ. ಆಗಸ್ಟ್ 30 ರಂದು ಗಣೇಶೋತ್ಸವ ಆಚರಣೆ ಕುರಿತಂತೆ ನಿರ್ಧರಿಸಲು ಕರೆದಿದ್ದ ಸಭೆಯಲ್ಲಿ ಸೆ5ರಂದು ಸಿಎಂ ಬೊಮ್ಮಾಯಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು. ಅದರಂತೆ ಇಂದು ಗಣೇಶೋತ್ಸವ ಹೇಗೆ ಆಚರಿಸಬೇಕು ಅನ್ನುವ ಕುರಿತಂತೆ ಆದೇಶ ಹೊರ ಬೀಳಲಿದೆ.
ಮೂಲಗಳ ಪ್ರಕಾರ 3 ದಿನ ಮಾತ್ರ ಮೂರ್ತಿ ಕೂರಿಸಲು ಅವಕಾಶ ಸಿಗಲಿದ್ದು, ಸಂಚಾರಿ ಟ್ಯಾಂಕರ್ ಮೂಲಕ ಗಣೇಶ ವಿಗ್ರಹ ವಿಸರ್ಜನೆ ಮಾಡಬೇಕು.ಯಾವುದೇ ಕಾರಣಕ್ಕೂ ಮೆರವಣಿಗೆ ಮಾಡುವಂತಿಲ್ಲ. ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ಸಿಕ್ಕರೂ ದೊಡ್ಡ ಮಟ್ಟದ ಉತ್ಸವಗಳಿಗೆ ಅನುಮತಿ ಸಿಗುವುದು ಅನುಮಾನ. ಬೆಳಗಾವಿ, ಹುಬ್ಬಳಿ, ಬೆಳಗಾವಿ, ಚಿತ್ರದುರ್ಗ ಸೇರಿ ಹಲವು ಜಿಲ್ಲೆಗಳಲ್ಲಿ ದೊಡ್ಡ ಮಟ್ಟದ ಆಚರಣೆಗೆ ಬ್ರೇಕ್ ಬೀಳಲಿದೆ.
Discussion about this post