ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆ ಸಂಕಟ ಇನ್ನೂ ಮುಂದುವರಿದಿದೆ. ದೆಹಲಿಯಲ್ಲಿ ಬೀಡು ಬಿಟ್ಟಿರುವ ಬೊಮ್ಮಾಯಿ ಸಂಭಾವ್ಯ ಸಚಿವರ ಪಟ್ಟಿಗೆ ಒಪ್ಪಿಗೆ ಪಡೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈಗಾಲೇ ಬೊಮ್ಮಾಯಿ ಕೊಟ್ಟಿರುವ ಪಟ್ಟಿಗೆ ತಿದ್ದುಪಡಿ ಸೂಚಿಸಿರುವ ಹೈಕಮಾಂಡ್ ಇನ್ನೂ ಅಳೆದು ತೂಗುವ ಕೆಲಸ ಮಾಡುತ್ತಿದೆ.
ಈ ನಡುವೆ ರಾಜ್ಯದಲ್ಲಿ ಬಿಜೆಪಿಗೆ ಮತ್ತೆ ವರ್ಚಸ್ಸು ತಂದುಕೊಡುವ ನಿಟ್ಟಿನಲ್ಲಿ ಖಡಕ್ ಕ್ಯಾಬಿನೆಟ್ ರಚಿಸುವಂತೆ ಆರ್ ಎಸ್ ಎಸ್ ಸಲಹೆ ನೀಡಿದೆ. ಆದರೆ ಜಾತಿವಾರು, ಪ್ರಾಂತ್ಯವಾರು ಸಮಾನತೆಯ ಕಾರಣದಿಂದ ಸಂಪೂರ್ಣ ಯುವ ಸಚಿವರ ಕ್ಯಾಬಿನೆಟ್ ಕಷ್ಟ ಎನ್ನಲಾಗಿದೆ. ಜೊತೆಗೆ ವಲಸೆ ಬಂದವರನ್ನು ಗಮನದಲ್ಲಿಟ್ಟುಕೊಂಡು ಸಂಪುಟ ವಿಸ್ತರಿಸಬೇಕಿದೆ.
ಜೊತೆಗೆ ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಅನೇಕ ಶಾಸಕರು ಬೊಮ್ಮಾಯಿ ಕ್ಯಾಬಿನೆಟ್ ಗೆ ಬರುವ ಸಾಧ್ಯತೆಗಳಿದ್ದು ಇದು ನೂತನ ಮುಖ್ಯಮಂತ್ರಿಗಳಿಗೆ ಬಿಸಿ ತುಪ್ಪವಾಗಲಿದೆ. ಇನ್ನು ಅನೇಕ ಹಳಬರಿಗೆ ಕೊಕ್ ಕೊಟ್ಟು
ಇನ್ನು ಬೊಮ್ಮಾಯಿ ಸಂಪುಟದಲ್ಲಿ ಎಷ್ಟು ಡಿಸಿಎಂಗಳಿರಬೇಕು, ಯಾರು ಡಿಸಿಎಂ ಆಗಬೇಕು ಅನ್ನುವ ಬಗ್ಗೆಯೂ ಗೊಂದಲ ಮುಂದುವರಿದಿದೆ. ಯಡಿಯೂರಪ್ಪ ಸಂಪುಟದಲ್ಲಿ ಡಿಸಿಎಂಗಳಾಗಿದ್ದವರನ್ನು ಮುಂದುವರಿಸುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದ್ದು, ಹಿರಿಯ ಶಾಸಕರಿಗೆ ಜಾತಿವಾರು ಆಧಾರದಲ್ಲಿ ಡಿಸಿಎಂ ಪಟ್ಟ ಒಲಿಯುವ ಸಾಧ್ಯತೆಗಳಿದೆ.
ಒಟ್ಟಿನಲ್ಲಿ ಬೊಮ್ಮಾಯಿ ಸಂಪುಟ ವಿಸ್ತರಣೆ ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದೆ.
Discussion about this post