ಬೆಂಗಳೂರು : ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಗಾಂಧಿ ಭವನ ಬಳಿಯ ಖಾದಿ ಎಂಪೋರಿಯಂಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ ಜುಬ್ಬಾ ಹೊಲಿಸಲು 10 ಖಾದಿ ಪೀಸ್ ಖರೀದಿಸಿದರು. ಜೊತೆಗೆ ಪತ್ನಿಗೆ ಒಂದಿಷ್ಟು ಸೀರೆಗಳನ್ನು ಬೊಮ್ಮಾಯಿ ಖರೀದಿಸಿದ್ದಾರೆ.
ಸೀರೆ ಖರೀದಿಯ ಸಂದರ್ಭದಲ್ಲಿ ಬೊಮ್ಮಾಯಿ ತಮ್ಮ ಪತ್ನಿಗೆ ಯಾವುದು ಇಷ್ಟವಾಗಬಹುದು, ಯಾವ ಕಲರ್ ಅವರಿಗೆ ಹೊಂದಬಹುದು ಅನ್ನುವ ಕುರಿತಂತೆ ಪರಿಶೀಲನೆ ಮಾಡಿಯೇ ಖರೀದಿಸಿದ್ದಾರೆ. ಇದೇ ವೇಳೆ ಕಾರಜೊಳ ಸಾಹೇಬ್ರೆ ನೀವು ಸೀರೆ ಖರೀದಿಸಿ ಎಂದು ಸಿಎಂ ಹೇಳಿದ್ರೆ ಸೀರೆ ಖರೀದಿ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಸೆಲೆಕ್ಷನ್ ಗೊತ್ತಾಗಲ್ಲ. ಅಂದರು.
ಇದಕ್ಕೆ ಪ್ರತಿಯಾಗಿ ಬೊಮ್ಮಾಯಿಯವರು ದುಡ್ಡು ಕೊಟ್ಟು ಸುಮ್ನೆ ಬೈಸಿಕೊಳ್ಳೋದು ನಮ್ಮ ಕೆಲಸ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದೇ ವೇಳೆ ಆಗಮಿಸಿದ ವಿಜಯೇಂದ್ರ ಏನ್ ಸೀರೆ ಖರೀದಿ ಜೋರಾ ಎಂದು ಕೇಳಿದ್ರೆ ನಮ್ದು ಮುಗಿಯಿತು, ಈಗ ನೀವು ತೆಗೆದುಕೊಳ್ಳಿ ಅಂದರು.
ನಂತರ ವಿಜಯೇಂದ್ರ ಖಾದಿ ಸೀರೆ ಖರೀದಿಸಿದರು. ಮುಖ್ಯಮಂತ್ರಿ 16031, ಎಂಟಿಬಿ ನಾಗರಾಜ್ 3 ಸಾವಿರ ಹಾಗೂ ಬಿ.ವೈ.ರಾಘವೇಂದ್ರ 4,300 ರೂಪಾಯಿ ಮೌಲ್ಯದ ಖಾದಿ ಬಟ್ಟೆ ಖರೀದಿಸಿದ್ದಾರೆ.
Discussion about this post