ಪ್ರವಾಹದಿಂದ ತತ್ತರಿಸಿದ ಕರ್ನಾಟಕಕ್ಕೆ ಪರಿಹಾರ ಬರುವ ಲಕ್ಷಣ ಗೋಚರಿಸುತ್ತಿಲ್ಲ. ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಅವರಿಗೆ ಜನರ ಬಗ್ಗೆ ಕಾಳಜಿ ಇರುವಂತೆ ಕಾಣಿಸುತ್ತಿಲ್ಲ.
ಮೋದಿ ರಾಷ್ಟ್ರೀಯ ರಾಜಕಾರಣಕ್ಕೆ ಬರುವ ಮುನ್ನವೇ ಗೆದ್ದು ಬೀಗಿದ್ದ ಸದಾನಂದಗೌಡ, ಜೋಷಿ ಸುರೇಶ್ ಅಂಗಡಿ, ನಳಿನ್ ಕುಮಾರ್ ಕಟೀಲು ಹೀಗೆ ಸಾಲು ಸಾಲು ಸಂಸದರು ಕೇಂದ್ರದ ಮೇಲೆ ಒತ್ತಡ ಹೇರುವ ಲಕ್ಷಣಗಳಿಲ್ಲ.
Buy Mobile Charger and Holder starting from Rs.49
ರಾಜ್ಯ ಸರ್ಕಾರ ಕೊಟ್ಟ ವರದಿಯನ್ನು ಮೋದಿ ಸರ್ಕಾರದ ಅಧಿಕಾರಿಗಳು ತಿರಸ್ಕರಿಸಿಯಾಗಿದೆ. ಅಲ್ಲಿಗೆ ಇನ್ನೆರೆಡು ದಿನದಲ್ಲಿ ಪರಿಹಾರ ಅನ್ನುವ ಸಿಎಂ ಮಾತು, ನಾಲ್ಕು ದಿನಗಳಲ್ಲಿ ಪರಿಹಾರ ಅನ್ನುವ ರಾಜ್ಯಾಧ್ಯಕ್ಷರ ಮಾತು, 10 ದಿನದಲ್ಲಿ ಪರಿಹಾರ ಮೊತ್ತ ಬರಲಿದೆ ಅನ್ನುವ ಶೋಬಾ ಕರಂದ್ಲಾಜೆ ಮತ್ತು ಬರೀ ಸುಳ್ಳು ಅನ್ನುವುದು ಸ್ಪಷ್ಟವಾಗಿದೆ.
ರಾಜ್ಯ ಸರ್ಕಾರ ಸಲ್ಲಿಸಿರುವ ವರದಿಯಲ್ಲಿ ಲೋಪವಿರಬಹುದು ಹಾಗಂತ ಮಧ್ಯಂತರ ಪರಿಹಾರ ಕೊಡಿಸುವುದಕ್ಕೆ ಸಂಸದರಿಗೆ ತಾಕತ್ತಿಲ್ಲ ಅನ್ನುವುದು ಸ್ಪಷ್ಟವಾಗಿದೆ. ಮೋದಿ ಮುಂದೆ ನಿಂತು ಮಾತನಾಡುವ ತಾಕತ್ತಿಲ್ಲದ ಮಂದಿ ಸಂಸದರಾಗಿರುವುದರಿಂದ ರಾಜ್ಯದ ಜನ ಸಂಕಷ್ಟ ಎದಿರಿಸುವಂತಾಗಿದೆ.
Get upto 60% off on Washing Machine
ನೆರೆ ಸಂತ್ರಸ್ಥರಿಗೆ ಪರಿಹಾರ ಕೊಡಲು ಕೇಂದ್ರ ಸರ್ಕಾರ ಸಾಧ್ಯವಾಗುತ್ತಿಲ್ಲ. ರಾಜ್ಯ ಬೊಕ್ಕಸದಿಂದ ಪರಿಹಾರ ಕೋಡೋಣ ಅಂದ್ರೆ ಕಾಸಿಲ್ಲ. ಹಾಗಂತ ಚಿಂತೆ ಮಾಡುವುದು ಬೇಡ. ಬಲಿಷ್ಟ ಭಾರತಕ್ಕಾಗಿ ಸಂಸದರನ್ನು ಗೆಲ್ಲಿಸಿದ ಕನ್ನಡಿಗರು ಕೈ ಬಿಡುವುದಿಲ್ಲ. ಕೇಂದ್ರ ಸರ್ಕಾರ ಕಾಸು ಕೊಡದಿದ್ದರೇನು ರಾಜ್ಯದ ಜನ ತಮ್ಮ ಕೈಲಾದ ಸಹಾಯ ಮಾಡಿಯೇ ಮಾಡುತ್ತಾರೆ. ಸಾಸಿವೆ ಡಬ್ಬದಲ್ಲಿ ಕೂಡಿಟ್ಟ ಕಾಸನ್ನು ಕನ್ನಡಿಗ ಮಹಿಳೆಯರು ಕೊಟ್ಟೇ ಕೊಡುತ್ತಾರೆ.
ಜೋಳಿಗೆ ಹಿಡಿದು ಕರ್ನಾಟಕ ಸುತ್ತೋಣ. ನೆರೆ ಪರಿಹಾರಕ್ಕಾಗಿ ಸಹಾಯ ಧನ ಯಾಚಿಸೋಣ.ಸಾವಿರ ಸಾವಿರ ಕೋಟಿ ಸಂಗ್ರಹವಾಗದಿದ್ದರೂ ಕೆಲ ಕೋಟಿಗಳು ಬರುವುದರಲ್ಲಿ ಸಂಶಯವಿಲ್ಲ.
ಜೊತೆಗೆ 25 ಸಂಸದರು ಹಲವು ಕೋಟಿಗಳಿಗೆ ಬಾಳುತ್ತಾರೆ. ಅವರು ಕೂಡಾ ಒಂದಿಷ್ಟು ಕೋಟಿ ಹಣವನ್ನು ಕೊಟ್ಟೇ ಕೊಡುತ್ತಾರೆ. ಇನ್ಯಾಕೆ ತಡ ದೇಣಿಗೆ ಸಂಗ್ರಹಕ್ಕೆ ಸಿದ್ದರಾಗೋಣ.
ದೇಣಿಗೆ ಸಂಗ್ರಹಕ್ಕೆ ನೀವೇ ಹೊರಟು ನಿಂತ್ರೆ ಮೋದಿ ಖಂಡಿತಾ ಕಣ್ಣು ತೆರೆಯುತ್ತಾರೆ ಅ ಸಂಶಯವೇ ಬೇಡ.
Discussion about this post