ಬೆಂಗಳೂರು : ಸಂಪುಟ ವಿಸ್ತರಣೆ ಕುರಿತಂತೆ ಚರ್ಚಿಸಲು ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ದೆಹಲಿ ತೆರಳಬೇಕಿತ್ತು. ಆದರೆ ಹೈಕಮಾಂಡ್ ತುರ್ತು ಕರೆಯ ಹಿನ್ನಲೆಯಲ್ಲಿ ಭಾನುವಾರ ಸಂಜೆ 5.40ರ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ. ಸಂಭಾವ್ಯ ಸಚಿವರ ಪಟ್ಟಿಯ ಜೊತೆಗೆ ದೆಹಲಿಗೆ ತೆರಳಿರುವ ಬೊಮ್ಮಾಯಿ, ಇಂದು ರಾತ್ರಿ ಕೆಲ ಮುಖಂಡರನ್ನು ಭೇಟಿಯಾಗಲಿದ್ದಾರೆ.
ನಾಳೆ ಜೆಪಿ ನಡ್ಡಾ ಸೇರಿದಂತೆ ಹಿರಿಯ ಮುಖಂಡರನ್ನು ಭೇಟಿಯಾಗಲಿರುವ ಬಸವರಾಜ ಬೊಮ್ಮಾಯಿ, ಸಚಿವರ ಪಟ್ಟಿಗೆ ಫೈನಲ್ ಟಚ್ ನೀಡಲಿದ್ದಾರೆ. ಈಗಾಗಲೇ ಸಿಎಂ ಕಡೆಯಿಂದ ಸಚಿವರ ಪಟ್ಟಿ ಹೈಕಮಾಂಡ್ ಗೆ ಸಲ್ಲಿಕೆಯಾಗಿದ್ದು, ಈ ಪೈಕಿ ಕೆಲಸ ಹೆಸರುಗಳ ಬಗ್ಗೆ ಹೈಕಮಾಂಡ್ ಸಮಾಧಾನ ಹೊಂದಿಲ್ಲ. ಹೀಗಾಗಿ ಈ ಬಗ್ಗೆ ಅವರಿಂದ ವಿವರಣೆ ಪಡೆಯುವ ಸಾಧ್ಯತೆಗಳಿದೆ. ಜೊತೆಗೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಜಾತಿವಾರು, ಪ್ರಾಂತ್ಯವಾರು ಅವಕಾಶಗಳನ್ನು ಕೊಡಬೇಕಾಗಿದೆ.
ಮಾತ್ರವಲ್ಲದೆ ಸಂಘದೊಂದಿಗೆ ನಿಕಟ ಸಂಬಂಧ ಹೊಂದಿರುವವರಿಗೆ, ಪಕ್ಷದ ಬೆಳವಣಿಗೆಗೆ ಅವಿರತ ದುಡಿದವರಿಗೂ ಸಂಪುಟದಲ್ಲಿ ಅವಕಾಶ ಕೊಡಬೇಕಾಗಿದ್ದು. ಹೊಸಮುಖಗಳಿಗೆ ಅವಕಾಶ ಕೊಡುವುದು ಹೇಗೆ ಅನ್ನುವ ಕುರಿತಂತೆ ಹೈಕಮಾಂಡ್ ಈಗಾಗಲೇ ನೀಲ ನಕ್ಷೆ ಮಾಡಿದೆ. ಈ ಬಗ್ಗೆಯೂ ಹೈಕಮಾಂಡ್ ಬೊಮ್ಮಾಯಿ ಜೊತೆ ಚರ್ಚಿಸಲಿದೆ.
ಆದರೆ ವಲಸೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಿತ್ರಮಂಡಳಿ ಸದಸ್ಯರಿಗೆ ಅವಕಾಶ ಸಿಗಲಿದೆಯೇ ಅನ್ನುವುದು ಈಗಿರುವ ಕುತೂಹಲ.
Discussion about this post