ಮುಖ್ಯಮಂತ್ರಿಯಾಗಿದಷ್ಟು ದಿನ ಕಾವೇರಿ ನಿವಾಸದಲ್ಲೇ ಉಳಿದುಕೊಂಡಿದ್ದ ಸಿದ್ದರಾಮಯ್ಯ ಕಾವೇರಿಯ ಕಾರುಬಾರಿನಿಂದಲ್ಲೇ 5 ವರ್ಷ ಅವಧಿ ಪೂರೈಸಿದರು ಎಂದು ಜ್ಯೋತಿಷಿಗಳು ಸಿಎಂ ಯಡಿಯೂರಪ್ಪ ಅವರನ್ನು ನಂಬಿಸಿದಂತಿದೆ.
ಹೀಗಾಗಿ ಸಿಎಂ ಆಗಿದ್ದ ವೇಳೆ ವಾಸವಾಗಿದ್ದ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್ 2 ರಲ್ಲಿ ವಾಸ್ತವ್ಯ ಹೂಡಲು ಯಡಿಯೂರಪ್ಪ ನಿರಾಕರಿಸಿದ್ದಾರೆ. ಬದಲಾಗಿ ಸಿದ್ದರಾಮಯ್ಯ ವಾಸ್ತವ್ಯ ಹೂಡಿರುವ ಕಾವೇರಿ ನಿವಾಸಕ್ಕಾಗಿ ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ.
ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಪ್ರಾರಂಭಿಸಿದ್ದ ಸಿದ್ದರಾಮಯ್ಯ, ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾವೇರಿಯನ್ನು ಜಾರ್ಜ್ ಅವರ ಹೆಸರಿಗೆ ಮಂಜೂರು ಮಾಡಿಸಿ ತಾವು ವಾಸ್ತವ್ಯ ಹೂಡಿದ್ದರು. ಮೈತ್ರಿ ಸರ್ಕಾರ ಪತನದ ಬಳಿಕ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಬಳಿಕ ಕಾವೇರಿ ನಿವಾಸವನ್ನು ತಮಗೆ ಮಂಜೂರು ಮಾಡುವಂತೆ ಕೋರಿದ್ದರು.
ಈ ನಡುವೆ ಕಾವೇರಿ ನಿವಾಸವನ್ನು ಯಡಿಯೂರಪ್ಪ ತಮ್ಮ ಹೆಸರಿಗೆ ಮಂಜೂರು ಮಾಡಿಸಿಕೊಂಡಿದ್ದು, ನಿವಾಸ ತೆರವುಗೊಳಿಸುವಂತೆ ಸಿದ್ದರಾಮಯ್ಯ ಮೇಲೆ ಪರೋಕ್ಷ ಒತ್ತಡ ಪ್ರಾರಂಭಗೊಂಡಿದೆ. ಹೀಗಾಗಿ ಕೆಜೆ ಜಾರ್ಜ ಅವರಿಗೆ ಪತ್ರ ಬರೆದಿರುವ ಆಡಳಿತ ಸುಧಾರಣೆ ಇಲಾಖೆ ಮನೆ ಖಾಲಿ ಮಾಡುವಂತೆ ಸೂಚಿಸಿದ್ದಾರೆ. ಇದಕ್ಕೆ ಮರು ಉತ್ತರಿಸಿರುವ ಜಾರ್ಜ್ ಸೂಕ್ತ ಕಾಲವಕಾಶ ಬೇಕು ಅಂದಿದ್ದಾರೆ.
Discussion about this post