ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಎಡವಟ್ಟುಗಳ ಮೂಲಕ ಸುದ್ದಿಯಾದವರು.ಅದು ಕೇರಳದಲ್ಲಿ ಮಾಡಿದ ಭಾಷಣದ ವೇಳೆ ಪ್ರಸ್ತಾಪಿದ ಡಾಲರ್ ವಿಷಯ ಇರಬಹುದು. ತಮ್ಮದೇ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಪಂಪವೆಲ್ ಮೇಲ್ಸುತೇವೆ ಇರಬಹುದು. ( ಈ fly over ಅನ್ನು ಯುನೆಸ್ಕೋ ಅಥವಾ ರಾಷ್ಟ್ರೀಯ ಸ್ಮಾರಕವನ್ನಾಗಿಸುವುದು ಬೆಟರ್ ).
ಹೀಗೆ ಸಾಲು ಸಾಲು ಎಡವಟ್ಟುಗಳು ಮೂಲಕ ಸುದ್ದಿಯಾದ ನಳಿನ್ ಕುಮಾರ್ ಕಟೀಲು ಇಂದು ಕರ್ನಾಟಕದ ಜಿಲ್ಲೆಗಳ ಸಂಖ್ಯೆ ಮೂಲಕ ವಿವಾದ ಹುಟ್ಟಿಸಿದ್ದಾರೆ.
ಯಾದಗಿರಿ ಜಿಲ್ಲಾ ಪ್ರವಾಸದಲ್ಲಿರುವ ಅವರು ಬೆಳಗ್ಗೆ ಕರ್ನಾಟಕದಲ್ಲಿ 32 ಜಿಲ್ಲೆಗಳಿದೆ ಅಂದಿದ್ದರು. ಮಧ್ಯಾಹ್ನ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ 34 ಜಿಲ್ಲೆ ಅಂದಿದ್ದರು. ಹೀಗಾಗಿ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ದರು.
ಸಂಜೆಯಷ್ಟು ಹೊತ್ತಿಗೆ ತಮ್ಮ ನಾಯಕರು ಜನರಿಂದ ಉಗಿಸಿಕೊಳ್ಳುತ್ತಿದ್ದಾರೆ ಎಂದು ಗೊತ್ತಾದ ತಕ್ಷಣ ರಕ್ಷಣೆಗೆ ಮುಂದಾದ ಕಾರ್ಯಕರ್ತರು ನಮ್ಮ ಲೆಕ್ಕದಲ್ಲಿ 36 ಜಿಲ್ಲೆಗಳಿದೆ ಅನ್ನಲಾರಂಭಿಸಿದರು.
ಸಂಘಟನೆಯ ದೃಷ್ಟಿಯಿಂದ ಬಿಜೆಪಿ 36 ಜಿಲ್ಲಾಧ್ಯಕ್ಷರನ್ನು ನೇಮಿಸಿಕೊಂಡಿದೆ. ಹುಬ್ಬಳಿ ಮತ್ತು ಧಾರವಾಡ, ಬೆಳಗಾವಿ ನಗರ ಮತ್ತು ಗ್ರಾಮಾಂತರ, ಕಲಬುರಗಿ ನಗರ ಮತ್ತು ಗ್ರಾಮಾಂತರ, ಮೈಸೂರು ನಗರ ಮತ್ತು ಗ್ರಾಮಾಂತರ, ಬೆಂಗಳೂರು ನಗರ, ಬೆಂಗಳೂರು ಜಿಲ್ಲೆ ಎಂದು ಪಾಲು ಮಾಡಲಾಗಿದೆ.
36 ಜಿಲ್ಲಾಧ್ಯಕ್ಷರ ಪಟ್ಟಿ ರಾಜ್ಯ ಬಿಜೆಪಿ ವೆಬ್ ಸೈಟ್ ನಲ್ಲೂ ಲಭ್ಯವಿದೆ. ಹೀಗಾಗಿ ನಾಳೆ ನಳಿನ್ ಕುಮಾರ್ ಕಟೀಲು ಹೇಳಿದ್ದು ಸರಿ ಇದೆ ಅನ್ನುವ ಅಧಿಕೃತ ಹೇಳಿಕೆ ಬರುವುದು ಖಚಿತ.
ಸಂಘಟನೆ ದೃಷ್ಟಿಯಲ್ಲಿ ಬಿಜೆಪಿ ಅದೆಷ್ಟು ಜಿಲ್ಲಾಧ್ಯಕ್ಷರನ್ನು ನೇಮಿಸಿಕೊಳ್ಳಬಹುದು ಅದು ಅವರ ವೈಯುಕ್ತಿಕ ನಿರ್ಧಾರ. ಹಾಗಂತ 32 ಜಿಲ್ಲೆಗಳ ಪ್ರವಾಸದಲ್ಲಿದ್ದೇನೆ ಎಂದು ಮಾಧ್ಯಮಗಳ ಮುಂದೆ ಹೇಳುವುದು ಅದೆಷ್ಟರ ಮಟ್ಟಿಗೆ ಸರಿ.
Discussion about this post