ಬೆಂಗಳೂರು : ರಾಜ್ಯ ವಿಧಾನಸಭಾ ಅಧಿವೇಶನ ಸೋಮವಾರ ಪ್ರಾರಂಭಗೊಂಡಿದ್ದು, ಇಡೀ ಕಲಾಪದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರೇ ಹೈಲೈಟ್ ಆಗಿದ್ದರು. ಮಾಜಿಯಾದ ಬಳಿಕ ಮೊದಲ ಅಧಿವೇಶನ ಇದಾಗಿದ್ದು, ಯಡಿಯೂರಪ್ಪ ಅವರ ಕಲಾಪ ಪಾಲ್ಗೊಳ್ಳುವಿಕೆ ಬಗ್ಗೆ ಸಹಜವಾಗಿಯೇ ಕುತೂಹಲವಿದೆ.
ಇನ್ನು ಬೊಮ್ಮಾಯಿ ಸಂಪುಟಕ್ಕೆ ಅನೇಕ ಹೊಸ ಮುಖಗಳು ಬಂದಿರುವ ಕಾರಣ ಸದನದಲ್ಲಿ ಸಾಕಷ್ಟು ಸೀಟು ಬದಲಾವಣೆಗಳಾಗಿವೆ. ಯಡಿಯೂರಪ್ಪ ಅವರಿಗೆ ನಿಯಮಗಳ ಪ್ರಕಾರ ನಾಲ್ಕನೇ ಸಾಲಿನಲ್ಲಿ ಆಸನ ವ್ಯವಸ್ಥೆಯನ್ನು ಸ್ಪೀಕರ್ ಮಾಡಿದ್ದರು. ಆದರೆ ಕೊನೆಯ ಸಾಲಿನಲ್ಲಿ ಆಸನ ನೀಡುವಂತೆ ಅವರು ಸ್ಪೀಕರ್ ಗೆ ಮನವಿ ಮಾಡಿದ ಹಿನ್ನಲೆಯಲ್ಲಿ ಕೊನೆಯ ಸಾಲಿನಲ್ಲೇ ಅವರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಸಚೇತಕರ ಕುರ್ಚಿಯ ಪಕ್ಕದಲ್ಲೇ ಯಡಿಯೂರಪ್ಪ ಆಸನ ಪಡೆದಿದ್ದಾರೆ.
ಇನ್ನು ಬೊಮ್ಮಾಯಿ ಸಿಎಂ ಆಗಿರುವುದರ ಬಗ್ಗ ಅಸಮಾಧಾನ ಹೊಂದಿರುವ ಜಗದೀಶ್ ಶೆಟ್ಟರ್ ಕೂಡಾ ಕೊನೆ ಸಾಲಿನಲ್ಲೇ ಆಸನವನ್ನು ಕೇಳಿ ಪೆಡಿದ್ದಾರೆ. ಇಷ್ಟೇ ಅಲ್ಲದೆ ಇನ್ನು ಅನೇಕರ ಕುರ್ಚಿ ಬದಲಾಗಿದ್ದು, ಮೂರನೇ ಸಿಲಿನಲ್ಲಿ ಕುಳಿತುಕೊಳ್ಳುತ್ತಿದ್ದ ಅರಗ ಜ್ಞಾನೇಂದ್ರ ಮೊದಲ ಸಾಲಿಗೆ ಬಂದಿದ್ದಾರೆ. ಕಳೆದ ಅಧಿವೇಶನ ಸಂದರ್ಭದಲ್ಲಿ ಎರಡನೇ ಸಾಲಿಗೆ ಸರಿದಿದ್ದ ಸಚಿವ ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ಸಚಿವ ಸ್ಥಾನ ಪಡೆದ ಹಿನ್ನಲೆಯಲ್ಲಿ ಮತ್ತೆ ಮೊದಲ ಸಾಲಿಗೆ ಬಂದಿದ್ದಾರೆ.
ಇದರೊಂದಿಗೆ ಕಳೆದ ಹಲವು ವರ್ಷಗಳಿಂದ ನಾಲ್ಕನೇ ಸಾಲಿನಲ್ಲಿ ಸೀಟು ಭಾಗ್ಯ ಪಡಿದ್ದ ಸುನಿಲ್ ಕುಮಾರ್, ಬಿಸಿ ನಾಗೇಶ್, ಹಾಲಪ್ಪ ಆಚಾರ್, ಮುನಿರತ್ನ ಎರಡನೇ ಸಾಲಿನಲ್ಲಿ ಸೀಟು ಅಲಂಕರಿಸಿದ್ದಾರೆ.
Discussion about this post