ಬೆಳಗಾವಿ : ಬಡಾಲ ಅಂಕಲಗಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಒಂದೇ ಕುಟುಂಬದ 7 ಮಂದಿ ಮೃತಪಟ್ಟ ಪ್ರಕರಣ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ವಿಷಾಧ ವ್ಯಕ್ತಪಡಿಸಿದ್ದು, ಮೃತರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಈ ಬಗ್ಗೆ ಪ್ರಧಾನಮಂತ್ರಿ ಸಚಿವಾಲಯ ಟ್ವೀಟ್ ಮಾಡಿದ್ದು, ಮನೆ ಕುಸಿದು ಜೀವ ಹಾನಿ ಸಂಭವಿಸಿದ ಸುದ್ದಿ ಹೇಳಿ ಅತೀವ ದುಃಖವಾಗಿದೆ. ದುಃಖತಪ್ತ ಕುಟುಂಬ ಸದಸ್ಯರ ಜೊತೆ ನಾನಿದ್ದೇನೆ ಎಂದು ಹೇಳಲಾಗಿದೆ.
The loss of lives due to a house collapse in Belagavi, Karnataka is saddening. My thoughts are with the bereaved kin in this hour of sadness. An ex-gratia of Rs. 2 lakh each from PMNRF would be paid to the next of kin of the deceased: PM @narendramodi
— PMO India (@PMOIndia) October 7, 2021
ಈ ನಡುವೆ ಮೃತರ ಪೈಕಿ 6 ಜನರ ಪಾರ್ಥಿವ ಶರೀರಗಳನ್ನು ಸಾಮೂಹಿಕವಾಗಿ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಮತ್ತೊಬ್ಬ ಬಾಲಕಿ ಅಂತ್ಯಕ್ರಿಯೆ ಪ್ರತ್ಯೇಕವಾಗಿ ನೆರವೇರಿದೆ.
ಹಳೆಯ ಮನೆಯ ಚಾವಣಿ ತೆಗೆದು ಹೊಸ ಛಾವಣಿ ಹಾಕಲು ಮನೆಯವರು ಸಿದ್ದತೆ ಮಾಡಿಕೊಂಡಿದ್ದರು. ಮನೆಯ ಚಾವಣಿ ತೆಗೆದಿದ್ದ ಮನೆಯವರು ಪಕ್ಕದಲ್ಲೇ ತಗಡಿನ ಶೆಡ್ ನಿರ್ಮಿಸಿ ವಾಸವಾಗಿದ್ದರು. ಆದರೆ ಮಳೆ ಸುರಿದ ಪರಿಣಾಮ ಶಿಥಿಲಗೊಂಡ ಗೋಡೆ ಪಕ್ಕದಲ್ಲಿದ್ದ ಶೆಡ್ ಮೇಲೆ ಬಿದ್ದು 7 ಜನರನ್ನು ಬಲಿ ಪಡೆದಿತ್ತು.
ಘಟನೆಯಲ್ಲಿ ಅರ್ಜುನ ಖನಗಾಂವಿ (45), ಪತ್ನಿ ಸತ್ಯವ್ವ ಅರ್ಜುನ್ ಖನಗಾಂವಿ (45), ಪುತ್ರಿ ಪೂಜಾ ಅರ್ಜುನ್ ಖನಗಾಂವಿ (8) ಮತ್ತು ಸವಿತಾ ಭೀಮಪ್ಪ ಖನಗಾಂವಿ (30), ಲಕ್ಷ್ಮಿ ಭೀಮಪ್ಪ ಖನಗಾಂವಿ (15), ಶಾಂತವ್ವ ಭೀಮಪ್ಪ ಖನಗಾಂವಿ ಹಾಗೂ ಕಾಶವ್ವ ವಿಠ್ಠಲ ಕೊಳೆಪ್ಪನವರ (8) ಮೃತರಾಗಿದ್ದರು.
ಈ ನಡುವೆ ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದು, ಪರಿಹಾರದ ಮೊತ್ತವನ್ನು ತಕ್ಷಣವೇ ತಲುಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ.
At least seven people died after a house collapsed at Badal-Ankalgi village in Karnataka’s Belagavi district on Wednesday following heavy rain, police sources said. The seven were of the same family and five of them died on the spot while two were on the way to the hospital,
Discussion about this post