ಮಾನ್ವಿ ತಾಲ್ಲೂಕಿನ ಕರೆಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಗ್ರಾಮ ವಾಸ್ತವ್ಯಕ್ಕಾಗಿ ಸರ್ಕಾರಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮುಖ್ಯಮಂತ್ರಿ.ಕುಮಾರಸ್ವಾಮಿ ಅವರಿಗೆ ಪ್ರತಿಭಟನೆಯ ಬಿಸಿ ಎದುರಾಗಿದೆ.
ಇದರಿಂದ ಕುಪಿತಗೊಂಡ ಸಿಎಂ, ಅಧಿಕಾರಿಗಳು ಮತ್ತು ಸಚಿವರು ಮಾತ್ರವಲ್ಲ ಜನರ ಮೇಲೂ ಮೇಲೆ ಕೆಂಡಾಮಂಡಲರಾಗಿದ್ದಾರೆ.
ಸಿಎಂ ಪ್ರಯಾಣಿಸುತ್ತಿದ್ದ ಬಸ್ ಅನ್ನು ಮಾರ್ಗ ಮಧ್ಯೆ ತಡೆದ ವೈಟಿಪಿಎಸ್ ಕಾರ್ಮಿಕರು ಘೇರಾವ್ ಹಾಕಿದ್ದಾರೆ. ಪೊಲೀಸರು ಪ್ರತಿಭಟನೆ ತಡೆಯುವ ಯತ್ನ ಮಾಡಿದರೂ ಪ್ರತಿಭಟನಾ ನಿರತರು ಬಸ್ ತಡೆಯುವಲ್ಲಿ ಯಶಸ್ವಿಯಾದರು.
ಈ ವೇಳೆ ಕೆಂಡಾಮಂಡಲವಾದ ಸಿಎಂ, ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡರು. ನೀವು ನರೇಂದ್ರ ಮೋದಿಗೆ ವೋಟ್ ಹಾಕ್ತೀರಿ, ಸಮಸ್ಯೆ ಬಗೆ ಹರಿಸಲು ನಮ್ ಹತ್ರ ಬರ್ತೀರಾ , ನಿಮಗೆಲ್ಲಾ ಮರ್ಯಾದೆ ಕೊಡಬೇಕಾ? ಲಾಠಿ ಚಾರ್ಜ್ ಮಾಡಿಸ್ಬೇಕಾ ಎಂದು ಹೇಳಿದರು.
ಇದೇ ವೇಳೆ ಆಕ್ರೋಶಿತರಾಗಿ ಬಸ್ನಿಂದ ಕೆಳಗಿಳಿಯಲು ಮುಂದಾದಾಗ ಸಚಿವ ವೆಂಕಟರಾವ್ ಸಚಿವ ನಾಡಗೌಡ ಅವರು ಸಿಎಂ ಅವರನ್ನು ತಡೆದರು. ಅಣ್ಣಾ..ನಾನು ಇಳಿಯುತ್ತೇನೆ ನೀವು ಕುಳಿತುಕೊಳ್ಳಿ ಎಂದು ಸಮಾಧಾನಪಡಿಸಿದರು. ಹೀಗಾಗಿ ಸಚಿವರು ಮತ್ತು ಸಿಎಂ ನಡುವೆಯೂ ಮುಸುಕಿನ ಗುದ್ದಾಟ ನಡೆಯಿತು. ಈ ವೇಳೆ ಗರಂ ಆದ ಸಚಿವ ನಾಡಗೌಡ ರಾಯಚೂರು ಎಸ್ಪಿ ಮೇಲೆ ಗರಂ ಆಗಿ ದನ ಕಾಯ್ತೀರ ಅಂದರು.
ನಂತ್ರ ಹರ ಸಾಹಸ ಪಟ್ಟ ಪೊಲೀಸರು ಪ್ರತಿಭಟನಕಾರರನ್ನು ಚದುರಿಸಿ ಮುಖ್ಯಮಂತ್ರಿ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು.
//ws-in.amazon-adsystem.com/widgets/q?rt=tf_cw&ServiceVersion=20070822&MarketPlace=IN&ID=V20070822%2FIN%2Ftorrentspree-21%2F8010%2F7fd63c53-681e-4cd5-a9d1-d35c9d00a6f3&Operation=GetScriptTemplate Amazon.in Widgetsಸಿಎಂ ಕೊಟ್ಟಿರುವ ಈ ಹೇಳಿಕೆ ನಿಜಕ್ಕೂ ದುರಂತ ಅನ್ನುವುದರಲ್ಲಿ ಎರಡು ಮಾತಿಲ್ಲ. ಮೊನ್ನೆ ತಮ್ಮಣ್ಣಸ ಆಮೇಲೆ ರೇವಣ್ಣ ಇದೀಗ ಕುಮಾರಣ್ಣ ತಮ್ಮ ಹತಾಶೆಯನ್ನು ಹೊರ ಹಾಕುತ್ತಿರುವುದು ಸ್ಪಷ್ಟವಾಗಿದೆ.
ಹಾಗಾದ್ರೆ ಮೋದಿಗೆ ಓಟು ಹಾಕಿದ ಮಂದಿ ಕುಮಾರಸ್ವಾಮಿ ಬಳಿ ಸಮಸ್ಯೆ ಹೇಳಿಕೊಳ್ಳುವ ಹಾಗಿಲ್ವ..?
ಈ ಬೆಳವಣಿಗೆ ಬೆನ್ನಲ್ಲೇ ಸಿಡಿದೆದ್ದ ಬಿಜೆಪಿ ಕಾರ್ಯಕರ್ತರು ಸಿಎಂ ಹಾಕುವ ಹಾದಿಯಲ್ಲಿ ಬಿಜೆಪಿ ಬಾವುಟ ಹಿಡಿದು ಮೋದಿ..ಮೋದಿ ಘೋಷಣೆ ಕೂಗಿದರು.
Discussion about this post