ಕಾಂತಾರ ( Kantara tulu) ಮತ್ತೊಂದು ಸುದ್ದಿ ಸದ್ದು ಮಾಡಲು ಸಜ್ಜಾಗಿದೆ. ಬೇಸರ ಅಂದ್ರೆ ರಿಷಬ್ ತುಳು ವಾಯ್ಸ್ ಸಿನಿಮಾದಲ್ಲಿ ಇರೋದಿಲ್ಲ
ಕಾಂತಾರ ( Kantara tulu) ಕನ್ನಡ ಚಿತ್ರರಂಗದಲ್ಲೊಂದು ಸಂಚಲನ ಮೂಡಿಸಿದ ಸಿನಿಮಾ. ಕೆಜಿಎಫ್ ಕನ್ನಡ ಚಿತ್ರರಂಗವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ಯಿತು ಎಂದು ಇಷ್ಟು ದಿನಗಳ ಕಾಲ ಹೇಳಲಾಗುತ್ತಿತ್ತು. ಆದರೆ ಈಗ ಇಡೀ ವಿಶ್ವದ ಚಿತ್ರರಂಗವೇ ಚಂದನವನದತ್ತ ನೋಡುವಂತೆ ಮಾಡಿದ್ದು ಕಾಂತಾರ. ( Kantara tulu)
ದೈವದ ಕಥೆಯೊಂದನ್ನು ಹೇಳುವ ಮೂಲಕ ರಿಷಬ್ ಶೆಟ್ಟಿಯವರು ಬೇರೆ ಬೇರೆ ದೇಶದ ಸಿನಿ ಪ್ರೇಕ್ಷಕರು ಮಾತ್ರವಲ್ಲ ತಂತ್ರಜ್ಞರೂ ಇತ್ತ ನೋಡುವಂತೆ ಮಾಡಿದ್ದಾರೆ. ಈ ಸಾಧನೆಯ ಹಿಂದೆ ಕೇವಲ ರಿಷಬ್ ಮಾತ್ರವಲ್ಲ, ಅವರಿಗೆ ಸಾಥ್ ಕೊಟ್ಟ ಹೊಂಬಾಳೆ ಪ್ರೊಡಕ್ಷನ್ ಅನ್ನೂ ನಾವು ಬೆನ್ನು ತಟ್ಟಲೇಬೇಕು. ( Kantara tulu)
ಇದನ್ನು ಓದಿ : Chikkaballapura : ಅಜ್ಜಿಯನ್ನು ನಿರ್ಲಕ್ಷ್ಯಿಸಿದ ಮೊಮ್ಮಗಳು : ಜಮೀನು ವಾಪಾಸ್ ಕೊಡಿಸಿದ ಉಪವಿಭಾಗಾಧಿಕಾರಿ
ಈ ನಡುವೆ ಇದೇ ಕಾಂತಾರ ( Kantara tulu ) ತುಳುನಾಡಿನಲ್ಲಿ ಮತ್ತೊಂದು ಸುತ್ತಿನ ಸದ್ದು ಮಾಡಲು ಸಿದ್ದವಾಗಿದೆ. ಹೌದು ತುಳು ಭಾಷೆಗೆ ಡಬ್ಬಿಂಗ್ ಆಗುತ್ತಿರುವ ಚಿತ್ರ ನವೆಂಬರ್ ತಿಂಗಳಲ್ಲಿ ಚಿತ್ರಮಂದಿರಕ್ಕೆ ಬರಲಿದೆ. ಅಚ್ಚರಿ ಏನ್ ಗೊತ್ತಾ ತುಳು ಚಿತ್ರ ಕೇವಲ ಕಾಸರಗೋಡು, ದಕ್ಷಿಣ ಕನ್ನಡ ಉಡುಪಿಯಲ್ಲಿ ಮಾತ್ರ ಬಿಡುಗಡೆಯಾಗುತ್ತಿಲ್ಲ, ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಹಲವು ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣಲಿದೆ. ಬೇರೆ ಬೇರೆ ರಾಜ್ಯದಲ್ಲಿರುವ ತುಳುವರೂ ಚಿತ್ರ ನೋಡುವಂತಾಗಬೇಕು ಅನ್ನೋದು ಚಿತ್ರತಂಡದ ಗುರಿ. ಅಷ್ಟೇ ಯಾಕೆ ವಿದೇಶಗಳಲ್ಲೂ ಕಾಂತಾರದ ತುಳು ವರ್ಷನ್ ಬಿಡುಗಡೆ ಮಾಡಲು ಚಿತ್ರರಂಗ ಯೋಚಿಸುತ್ತಿದೆ.
ಇನ್ನು ತುಳು ಡಬ್ಬಿಂಗ್ ಕೆಲಸಗಳು ಈಗಾಗಲೇ ಒಂದು ಹಂತಕ್ಕೆ ಬಂದಿದ್ದು, ರಿಷಬ್ ಶೆಟ್ಟಿಯ ಪಾತ್ರಕ್ಕೆ ದೇವಿದಾಸ್ ಕಾಪಿಕಾಡ್ ಪುತ್ರ ಅರ್ಜುನ್ ದನಿ ಕೊಟ್ಟಿದ್ದಾರೆ. ಕಿಶೋರ್ ಪಾತ್ರಕ್ಕೆ ವರಾಹ ರೂಪಂ ಹಾಡು ಬರೆದ ಶಶಿರಾಜ್ ಕಾವೂರು ದನಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಕಾಂತಾರ ತುಳು ಚಿತ್ರಕ್ಕಾಗಿ ಸಾಕಷ್ಟು ಡೈಲಾಗ್ ಗಳನ್ನು ಬದಲಾಯಿಸಲಾಗಿದ್ದು, ತುಳು ನೆಲಕ್ಕೆ ಹೊಂದಿಕೊಳ್ಳುವಂತೆ ಸಂಭಾಷಣೆಯನ್ನು ರೀ ರೈಟ್ ಮಾಡಲಾಗಿದೆ.
ಒಟ್ಟಿನಲ್ಲಿ ತುಳು ಮಂದಿ ಪಂರ್ಜುಲಿ ಮತ್ತು ಗುಳಿಗನ ಅಬ್ಬರವನ್ನು ತೆರೆಯ ಮೇಲೆ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
Discussion about this post