ಚಿತ್ಕಲಾ ಬಿರದಾರ್ ಅಮೆರಿಕಾ ಪ್ರವಾಸವನ್ನು ಸಾಕಷ್ಟು ತಿಂಗಳ ಹಿಂದೆ ಪ್ಲಾನ್ ಮಾಡಿದ್ದರು. ಹೀಗಾಗಿಯೇ ಕನ್ನಡತಿ ( kannadathi ) ಧಾರಾವಾಹಿಯ ಕಥೆಯನ್ನು ಅವರ ಪ್ರವಾಸಕ್ಕೆ ಪೂರಕವಾಗಿ ಕಟ್ಟಿಕೊಡಲಾಗಿತ್ತು
ಕನ್ನಡತಿ (kannadathi ) ಧಾರಾವಾಹಿ ಮೂಲಕ ರತ್ಮಮಾಲ ಎಂದೇ ಪ್ರಸಿದ್ಧರಾಗಿರುವ ಚಿತ್ಕಲಾ ಬಿರಾದಾರ್ (chitkala biradar) ಅಮೆರಿಕಾ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂತಿರುಗಿದ್ದಾರೆ. ಈ ಮೂಲಕ ಕನ್ನಡತಿ (kannadathi)ಧಾರಾವಾಹಿಗೆ ಮತ್ತೆ ರೀ ಎಂಟ್ರಿ ಕೊಡುವ ಮುನ್ಸೂಚನೆ ಸಿಕ್ಕಿದೆ. ಚಿತ್ಕಲ್ಕಾ ಮತ್ತು ಜಗದೀಶ್ ತಮ್ಮ ಮದುವೆಯ 30ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಹೀಗಾಗಿ ಈ ಬಾರಿ ಅಮೆರಿಕಾದಲ್ಲಿ ಅವರು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಈ ಹಿಂದೆಯೇ ಪ್ಲಾನ್ ಮಾಡಿದ್ದರು. ಆ ನಿಟ್ಟಿನಲ್ಲಿ ಕನ್ನಡತಿಗೆ ಸಣ್ಣದಾಗಿ ಬ್ರೇಕ್ ಕೊಟ್ಟಿದ್ದರು.
ಇದೇ ಕಾರಣಕ್ಕಾಗಿ ಕನ್ನಡತಿ (kannadathi) ಕಥೆಯಲ್ಲೂ ಒಂದಿಷ್ಟು ಬದಲಾವಣೆ ಮಾಡಲಾಗಿತ್ತು. ಹರ್ಷ ಮತ್ತು ಭುವಿಯ ಮದುವೆ ಬೆನ್ನಲ್ಲೇ ಚಿಕಿತ್ಸೆ ಸಲುವಾಗಿ ರತ್ನಮಾಲಾ (Rathnamala) ಅವರನ್ನು ನಿರ್ದೇಶಕರು ಆಸ್ಪತ್ರೆ ಸೇರಿಸಿದ್ದರು. ಈ ಮೂಲಕ ರತ್ಮಮಾಲಾ ಅನುಪಸ್ಥಿತಿಯಲ್ಲಿ ಕಥೆ ಮುಂದುವರಿಯುವಂತೆ ನೋಡಿಕೊಂಡಿದ್ದರು.
ಇದನ್ನೂ ಓದಿ : prevent dengue : ಡೆಂಘೀ ಜ್ವರದ ಅಪಾಯದಿಂದ ಪಾರಾಗುವುದು ಹೇಗೆ..?
ಇದೀಗ ಅಮೆರಿಕಾ ಪ್ರವಾಸ ಮುಗಿಸಿ ಬಂದಿರುವ ಕಾರಣ, ರತ್ನಮಾಲಾ ಆರೋಗ್ಯ ಸುಧಾರಿಸಿಕೊಂಡು ಕನ್ನಡತಿಗೆ ರೀ ಎಂಟ್ರಿ ಕೊಡುವ ಸಾಧ್ಯತೆಗಳಿದೆ. ಈಗಾಗಲೇ ರತ್ನಮಾಲ ಅನುಪಸ್ಥಿತಿಯಲ್ಲಿ ಸಾಕಷ್ಟು ಬೆಳವಣಿಗೆಗಳು ಸಂಭವಿಸಿದೆ. ಮಾಲಾ ಶಿಕ್ಷಣ ಸಂಸ್ಥೆಯಲ್ಲಿ ಸಾನಿಯಾ ಕಾಟ ತಡೆಯಲಾರದೆ ಭುವಿ ಕೆಲಸ ಬಿಟ್ಟಿದ್ದಾಳೆ. ಇಡೀ ಆಸ್ತಿಯನ್ನು ಭುವಿಗೆ ಹೆಸರಿಗೆ ಬರೆದಿರುವ ವಿಚಾರ ಇನ್ನೂ ಸಾನಿಯಾಗೆ ಗೊತ್ತಿಲ್ಲ. ಹೀಗಾಗಿ ರತ್ನಮಾಲಾ ರೀ ಎಂಟ್ರಿಯ ಬಳಿಕ ಧಾರಾವಾಹಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ವೀಕ್ಷಕರು ನಿರೀಕ್ಷಿಸುತ್ತಿದ್ದಾರೆ.
ಒಂದೇ ದಿನ 172 ಪೊಲೀಸರನ್ನು ವರ್ಗಾಯಿಸಿದ ಎಸ್ಪಿ ಹರಿರಾಮ್ ಶಂಕರ್
ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿರುವ ಪೊಲೀಸರು ಕರ್ತವ್ಯಕ್ಕಿಂತ ಬೇರೆ ಕೆಲಸಗಳಲ್ಲೇ ತೊಡಗಿಕೊಂಡಿರುತ್ತಾರೆ
ಹಾಸನ : ಮಂಗಳೂರಿನಲ್ಲಿ ಡಿಸಿಪಿಯಾಗಿದ್ದ ಹರಿರಾಮ್ ಶಂಕರ್ ಇದೀಗ ಪಕ್ಕದ ಹಾಸನ ಜಿಲ್ಲೆಯ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮಂಗಳೂರು ನಗರದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಹರಿರಾಮ್ ಶಂಕರ್ ಹಾಸನದಲ್ಲೂ ಕ್ರಾಂತಿ ಮಾಡುವ ನಿರೀಕ್ಷೆಗಳಿತ್ತು.
ಇದರ ಮೊದಲ ಭಾಗವಾಗಿ ಒಂದೇ ದಿನ 172 ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ. ಇವರೆಲ್ಲರೂ ಒಂದೇ ಠಾಣೆಯಲ್ಲಿ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಹಲವಾರು ವರ್ಷಗಳ ಕಾಲ ಒಂದೇ ಠಾಣೆಯಲ್ಲಿ ಜಾಂಡ ಊರಿದ್ದ ಇವರು ಅಕ್ರಮಗಳಿಗೆ ಸಾಥ್ ಕೊಡುತ್ತಿದ್ದಾರೆ ಅನ್ನುವ ಆರೋಪ ಕೂಡಾ ಕೇಳಿ ಬಂದಿತ್ತು. ದಿಶಾ ಸಭೆಯಲ್ಲೂ ಈ ಬಗ್ಗೆ ದೂರುಗಳು ಬಂದಿತ್ತು.
ಇದರ ಬೆನ್ನಲ್ಲೇ ಆಡಳಿತ ವಿಭಾಗದಲ್ಲಿ ಹಿಡಿತ ಮತ್ತು ಸುಧಾರಮೆ ನಿಟ್ಟಿನಲ್ಲಿ ಈ ವರ್ಗಾವಣೆ ಮಾಡಲಾಗಿದೆ. ಒಟ್ಟಿನಲ್ಲಿ ಹೊಸದಾಗಿ ಬಂದಿರುವ ಪೊಲೀಸ್ ವರಿಷ್ಠಾಧಿಕಾರಿ ಹಾಸನದಲ್ಲೊಂದು ಮೈಲಿಗಲ್ಲು ಸ್ಥಾಪಿಸೋದು ಖಚಿತವಾಗಿದೆ.
Discussion about this post