ಕನ್ನಡ ಕಿರುತೆರೆಯ ಕಲಾವಿದರು ಪರಭಾಷೆಯ ಕಿರುತೆರೆಗೆ ಕಾಲಿಡುವುದು ಹೊಸತೇನಲ್ಲ. ಈಗಾಗಲೇ ಕನ್ನಡದ ಅನೇಕ ಕಿರುತೆರೆಯ ಕಲಾವಿದರು ತೆಲುಗು ಹಾಗೂ ತಮಿಳು ಸೀರಿಯಲ್ಗಳಲ್ಲಿ ಮಿಂಚುತ್ತಿದ್ದಾರೆ. ಇದೀಗ ಇದೇ ಸಾಲಿಗೆ ಹೊಸದಾಗಿ ಸೇರ್ಪಡೆಯಾಗುತ್ತಿದ್ದಾರೆ ಕನ್ನಡ ನಟಿ ಸುಜಾತ ಅಕ್ಷಯ.
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಸುಜಾತ ಅಕ್ಷಯ ಇದೀಗ ತೆಲುಗಿನ ಕಿರುತೆರೆಗೆ ಕಾಲಿಟ್ಟಿದ್ದಾರೆ. ತೆಲುಗಿನ ಧಾರಾವಾಹಿಯೊಂದರಲ್ಲಿ ನಟಿ ಸುಜಾತ ಅಕ್ಷಯ ಅಭಿನಯಿಸುತ್ತಿದ್ದಾರೆ. ತಾವು ನಟಿಸಿರುವ ತೆಲುಗು ಸೀರಿಯಲ್ನ ಪ್ರೋಮೋವನ್ನು ನಟಿ ಸುಜಾತ ಅಕ್ಷಯ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Discussion about this post