ಜೊತೆ ಜೊತೆಯಲಿ ( jothe jotheyali) ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದವರು ಶಿಲ್ಪಾ ಅಯ್ಯರ್ ( shilpa ayyar)
ಜೊತೆ ಜೊತೆಯಲಿ, ಒಲವಿನ ನಿಲ್ದಾಣ ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಶಿಲ್ಪಾ ಅಯ್ಯರ್ ( shilpa ayyar) ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಶಿಲ್ಪಾ ಅಯ್ಯರ್ ಅವರ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದಾರು.( jothe jotheyali)
ಸಚಿನ್ ವಿಶ್ವನಾಥ್ ಅನ್ನುವವರ ಜೊತೆ ಶಿಲ್ಪಾ ಅಯ್ಯರ್ ( shilpa ayyar) ನಿಶ್ಚಿತಾರ್ಥ ನಡೆದಿದೆ. ನಿಶ್ಚಿತಾರ್ಥ ಸಮಾರಂಭದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಶಿಲ್ಪಾಗೆ, ಅನೇಕರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಇವರಿಬ್ಬರೂ ಸಪ್ತಪದಿ ತುಳಿಯಲಿದ್ದಾರೆ ಅನ್ನಲಾಗಿದೆ.(jothe jotheyali)
ಜೊತೆ ಜೊತೆಯಲಿ’ ( jothe jotheyali) ಧಾರಾವಾಹಿಯಲ್ಲಿ ಶಿಲ್ಪಾ ಅಯ್ಯರ್ (shilpa ayyar) ಅವರು ನಟಿಸುತ್ತಿದ್ದಾಗ ಅನೇಕರು ಹರ್ಷ ಪಾತ್ರಧಾರಿ ಜೊತೆ ಲವ್ನಲ್ಲಿದ್ದಾರೆ ಎಂದು ಕೆಲವರು ಹೇಳಿದ್ದರಂತೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶಿಲ್ಪಾ ಅಯ್ಯರ್ ಅವರು “ಮಾನ್ಸಿ, ಹರ್ಷನ ಕೆಮಿಸ್ಟ್ರಿ ತುಂಬ ಚೆನ್ನಾಗಿದೆ. ಅದನ್ನು ವೀಕ್ಷಕರು ತುಂಬ ಇಷ್ಟಪಟ್ಟಿದ್ದಾರೆ. ಹೀಗಾಗಿ ನಾನು, ಹರ್ಷ ಪಾತ್ರಧಾರಿ ಡೇಟ್ ಮಾಡುತ್ತಿದ್ದೇವೆ ಎಂದು ಕೆಲವರು ಅಂದುಕೊಂಡಿದ್ದರು. ನಿಮ್ಮ ಜೋಡಿ ಚೆನ್ನಾಗಿದೆ ಅಂತ ಅನೇಕರು ಮೆಸೇಜ್ ಕಳಿಸುತ್ತಿದ್ದಾರೆ. ಆದರೆ ನಾವಿಬ್ಬರೂ ಉತ್ತಮ ಸ್ನೇಹಿತರು ಅಷ್ಟೇ. ನಮ್ಮಿಬ್ಬರ ನಡುವೆ ಅದು ಬಿಟ್ಟು ಏನೂ ಇಲ್ಲ” ಎಂದು ಸ್ಪಷ್ಟನೆ ನೀಡಿದ್ದರು ಕೂಡಾ.
ಜೊತೆ ಜೊತೆಯಲ್ಲಿ ಮಾತ್ರವಲ್ಲದೆ ‘ಶಾಂತಂ ಪಾಪಂ’, ‘ಬ್ರಹ್ಮಗಂಟು’, ನಾಗಮಂಡಲ’, ‘ಕಸ್ತೂರಿ ನಿವಾಸ’ ಧಾರಾವಾಹಿಯಲ್ಲೂ ಶಿಲ್ಪ ನಟಿಸಿದ್ದಾರೆ. ಸುದ್ದಿ ನಿರೂಪಕಿಯಾಗಿದ್ದ ಶಿಲ್ಪ ಬಳಿಕ ನಟಿಯಾಗಿ ಗುರುತಿಸಿಕೊಂಡಿದ್ದರು.
ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಮಾನ್ಸಿ ಪಾತ್ರದಲ್ಲಿ ಶಿಲ್ಪಾ ಅಯ್ಯರ್ ಕಾಣಿಸಿಕೊಂಡಿದ್ದರು. ಅದಾದ ನಂತರದಲ್ಲಿ ಅವರು ಈ ಧಾರಾವಾಹಿಯಿಂದ ಹೊರಗಡೆ ಬಂದಿದ್ದರು. ಆಮೇಲೆ ‘ಒಲವಿನ ನಿಲ್ದಾಣ’ ಧಾರಾವಾಹಿಯಲ್ಲಿ ಹೀರೋ ಅತ್ತಿಗೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Discussion about this post