ಜೊತೆ ಜೊತೆಯಲ್ಲಿ ಒಂದು ಕಾಲದಲ್ಲಿ ಕಿರುತೆರೆಯಲ್ಲಿ ಧೂಳೆಬ್ಬೆಸಿದ ಧಾರವಾಹಿ. ಆರೂರು ಜಗದೀಶ್ ಶಕ್ತಿ ಸಾಮರ್ಥ್ಯವೇನು ಅನ್ನುವುದನ್ನು ತೋರಿಸಿದ್ದೇ ಈ ಧಾರವಾಹಿ. ಆರೂರು ಹಿಂದೆ ಮಾಡಿದ್ದ ಧಾರವಾಹಿಗಳು ಹಿಟ್ ಆಗಿತ್ತು ಆದರೆ ಈ ಮಟ್ಟಿನ ಸದ್ದು ಮಾಡಿರಲಿಲ್ಲ. ಸಿನಿಮಾ ಗಲ್ಲಾ ಪೆಟ್ಟಿಗಯನ್ನೇ ಅಲುಗಾಡಿಸಿತು ಅಂತಿವಲ್ಲ, ಹಾಗೇ TRP ಪಟ್ಟಿಯನ್ನೇ ಶೇಕ್ ಮಾಡಿದ ಹಿರಿಮೆ ಈ ಧಾರವಾಹಿಯದ್ದು.
ಅಂದ ಹಾಗೇ ಇಷ್ಟೆಲ್ಲಾ ಪೀಠಿಕೆ ಯಾಕಂದ್ರೆ ಜನ ಇಷ್ಟೊಂದು ಇಷ್ಟ ಧಾರವಾಹಿ ವಿರುದ್ದ ತಿರುಗಿ ಬಿದ್ದಿದ್ದಾರೆ. ಕಾರಣ ಸಿಂಪಲ್ ಇಷ್ಟು ದಿನಗಳ ಅನು ಅರ್ಯ ನಡುವಿನ ಕ್ಯೂಟ್ ಲವ್ ಸ್ಟೋರಿ ಇದೀಗ ಉಲ್ಟಾ ಹೊಡೆದಿದೆ. ಆರ್ಯವರ್ಧನ್ ನಿಧಾನವಾಗಿ ವಿಲನ್ ಸ್ವರೂಪ ತಳೆಯಲಾರಂಭಿಸಿದ್ದು, ಅನಿರುದ್ಧ ಅವರನ್ನು ವಿಲನ್ ಲುಕ್ ನಲ್ಲಿ ನೋಡಲು ಜನ ಇಷ್ಟಪಡುತ್ತಿಲ್ಲ,
ಹೀಗಾಗಿ ವೀಕ್ಷಕರ ಬೇಸರಗೊಂಡಿದ್ದಾರೆ. ಹೀಗೆ ವೀಕ್ಷಕರು ಬೇಸರಗೊಳ್ಳುತ್ತಾರೆ ಅನ್ನುವ ಕಾರಣಕ್ಕಾಗಿ ಮರಾಠಿಯ ಮೂಲ ಕಥೆಯನ್ನು ಈ ಹಿಂದೆ ಬದಲಾಯಿಸಲಾಗಿತ್ತು. ಮರಾಠಿ ಮೂಲ ಕಥೆಯಾಗಿದ್ರೆ ಇಷ್ಟು ಹೊತ್ತಿಗೆ ರಾಜನಂದಿನಯ ಪ್ರವೇಶವಾಗಿರಬೇಕಾಗಿತ್ತು. ಆದರೆ ಕನ್ನಡದ ಸೂಕ್ಷ್ಮ ಮನಸ್ಸು ಅರಿತಿರುವ ನಿರ್ದೇಶಕ ಆರೂರು ಜಗದೀಶ್ ಸೂಕ್ಷ್ಮವಾಗಿ ಕಥೆ ಹೆಣೆದಿದ್ದಾರೆ
Discussion about this post