ಇಷ್ಟು ದಿನಗಳ ಕಾಲ ಜಿಯೋ ನೆಟ್ ವರ್ಕ್ ಬಳಸುತ್ತಿದ್ದ ಮಂದಿ ಬಿಟ್ಟಿಯಾಗಿ ಹೊರಹೋಗುವ ಕರೆಗಳನ್ನು ಎಂಜಾಯ್ ಮಾಡಿದ್ದಾಯ್ತು. ಕಡಿಮೆ ದರದಲ್ಲಿ ಸಿಕ್ಕ ಇಂಟರ್ ನೆಟ್ ಬಳಸಿದ್ದು ಆಯ್ತು.
ಈವರೆಗೆ ಹಲವು ಉಚಿತ ಸೇವೆಗಳನ್ನು ಕೊಟ್ಟಿರುವ ಜಿಯೋ ಸಂಸ್ಥೆ ತನ್ನ ಗ್ರಾಹಕರು ಸೇವೆ ಮುಂದುವರಿಸಬೇಕಾದರೆ ರಿಜಾರ್ಜ್ ಮಾಡಿಸಿಕೊಳ್ಳುವುದು ಅನಿವಾರ್ಯ. ಈಗಾಗಲೇ ನಿಮ್ಮ ರಿಜಾರ್ಜ್ ಅವಧಿ ಮುಕ್ತಾಯವಾಗಲ್ಲದಿದ್ದರೂ ಟಾಪ್ ಅಪ್ ರಿಜಾರ್ಜ್ ಅನ್ನು ಮಾಡಿಸಿಕೊಳ್ಳುವುದು ಕಡ್ಡಾಯ.
ಒಂದು ವೇಳೆ ರಿಜಾರ್ಜ್ ಮಾಡಿಸಿಲ್ಲ ಅನ್ನುವುದಾದರೆ ನೀವು ಇತರ ನೆಟ್ ವರ್ಕ್ ಗಳಿಗೆ ಕರೆ ಮಾಡುವುದು ಅಸಾಧ್ಯ. ರಿಜಾರ್ಜ್ ಮಾಡಿಸಿಲ್ಲ ಅನ್ನುವುದಾಗಿದ್ದರೆ ಜಿಯೋದಿಂದ ಜಿಯೋಗೆ ಕರೆ ಮಾಡುವುದಕ್ಕೆ ತೊಂದರೆಯಿಲ್ಲ. ವಾಟ್ಸಾಪ್ ಸಂದೇಶ ಮತ್ತು ಕರೆಗಳನ್ನು ಮಾಡುವುದಕ್ಕೂ ಯಾವುದೇ ಅಡ್ಡಿ ಇಲ್ಲ.
ಹಾಗಾದರೆ ಏಕಾಏಕಿ ಹೊರ ಹೋಗುವ ಕರೆಗಳಿಗೆ ಜಿಯೋ ದರ ವಿಧಿಸಲು ಕಾರಣವೇನು ಅನ್ನುವುದನ್ನು ನೋಡುವುದಾದರೆ ಅದಕ್ಕೆ ಪ್ರಮುಖ ಕಾರಣ ಇಂಟರ್ ಕನೆಕ್ಟ್ ಯುಸೇಜ್ ಜಾರ್ಜ್ ( IUC ), ಇದನ್ನು ವಿಡಿಯೋದಲ್ಲಿ ವಿವರಿಸಲಾಗಿದೆ.
10 ರಿಂದ 100 ರೂಪಾಯಿ ತನಕ 5 ವಿಧದ ಟಾಪ್ ಅಪ್ ಗಳನ್ನುಪರಿಚಯಿಸಲಾಗಿದ್ದು, ಗ್ರಾಹಕರಿಗೆ ಹೊರೆಯಾಗದಿರಲಿ ಎಂದು ಕೆಲ ಜಿಬಿ ಇಂಟರ್ ನೆಟ್ ಅನ್ನು ಫ್ರೀಯಾಗಿ ಕೊಡುವುದಾಗಿ ಹೇಳಿದೆ.
ಇನ್ನು ಈ ದರ ಈ ವರ್ಷದ ಅಂತ್ಯದವರೆಗೆ ಮಾತ್ರ ಇರಲಿದ್ದು, 2020ರ ಜನವರಿ ಮೊದಲ ದಿನದಿಂದ ಈ ದರ ರದ್ದುಗೊಳ್ಳಲಿದೆ.
ಹಾಗೇ ನೋಡಿದರೆ ಇದೇನು ದುಬಾರಿ ದರ ಅನ್ನಿಸುತ್ತಿಲ್ಲ. ಈಗಾಗಲೇ ಏರ್ ಟೆಲ್ ಸೇರಿದಂತೆ ಇತರ ಕಂಪನಿಗಳು ಗ್ರಾಹಕರ ಕಡೆಯಿಂದ ಸಿಕ್ಕಾಪಟ್ಟೆ ವಸೂಲಿ ಮಾಡಿದೆ. ಜಿಯೋ ಪರಿಚಯವಾದ ಮೇಲೆಯೇ ಗೊತ್ತಾಗಿದ್ದು ಅವರೆಷ್ಟು ಬಾಚಿದ್ದಾರೆ ಎಂದು.
Discussion about this post