ಉಪ ಚುನಾವಣೆಗೆ ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆಯಾಗಿದೆ. ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಅವರ ಕುಟುಂಬದ ಬಹುತೇಕ ಸದಸ್ಯರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಜೊತೆಗೆ ಮತ್ತೊಬ್ಬ ಮೊಮ್ಮಗನನ್ನೂ ರಾಜಕೀಯಕ್ಕೆ ಕರೆ ತರುವ ಮುನ್ಸೂಚನೆಯನ್ನೂ ಈ ಪಟ್ಟಿ ನೀಡಿದೆ.
ಇನ್ನು ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರನ್ನು ಪಟ್ಟಿಯಿಂದ ಹೊರಗಿಡಲಾಗಿದ್ದು, ಈ ಮೂಲಕ ಅವರು ಮಾನಸಿಕವಾಗಿ ಜಿಡಿಟಿ ಪಕ್ಷದಿಂದ ಹೊರ ಬಂದಿರೋದು ಖಚಿತವಾಗಿದೆ.
ದೇವೇಗೌಡರ ಜತೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ರೇವಣ್ಣ ಪುತ್ರರಾದ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಹಾಗೂ ಡಾ.ಸೂರಜ್ ರೇವಣ್ಣ ಅವರು ಪಟ್ಟಿಯಲ್ಲಿರುವ ಪ್ರಮುಖರು.
ಈ ಪಟ್ಟಿಯಲ್ಲಿ ಕುಟುಂಬ ಅದೆಷ್ಟು ಸದಸ್ಯರು ಪ್ರಚಾರಕ್ಕೆ ಹೋಗ್ತಾರೆ ನೋಡಬೇಕು.
ಇನ್ನುಳಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಬಂಡೆಪ್ಪ ಕಾಶಂಪುರ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಎನ್.ಎಚ್.ಕೋನರೆಡ್ಡಿ, ಎಂ.ಕೃಷ್ಣಾರೆಡ್ಡಿ, ಡಾ.ಕೆ.ಅನ್ನದಾನಿ, ಬಿ.ಎಂ.ಫಾರೂಕ್, ಕಾಂತರಾಜು, ಡಾ.ಟಿ.ಎ.ಶರವಣ, ಮರಿತಿಬ್ಬೇಗೌಡ, ಬಿ.ಬಿ.ನಿಂಗಯ್ಯ, ವೈ.ಎಸ್.ವಿ.ದತ್ತ, ರಮೇಶ್ಬಾಬು, ಮಹ್ಮದ ಜಫ್ರುಲ್ಲಾಖಾನ್, ಕೆ.ಎಂ.ತಿಮ್ಮರಾಯಪ್ಪ, ಎಚ್.ಸಿ.ನೀರಾವರಿ, ಎಂ.ಟಿ.ಕೃಷ್ಣಪ್ಪ, ಕೆ.ವಿ.ಅಮರ್ನಾಥ್, ಪಿ.ಆರ್.ಸುಧಾಕರ ಲಾಲ್, ಸೈಯದ್ ಸೈಫುಲ್ಲಾಸಾಹೇಬ್, ಆರ್.ಪ್ರಕಾಶ್, ಆನಂದ ಅಸ್ನೋಟಿಕರ್, ಬಸವರಾಜ ಹೊರಟ್ಟಿ, ಚೌಡರೆಡ್ಡಿ ತೂಪಲ್ಲಿ, ಲೀಲಾದೇವಿ ಆರ್.ಪ್ರಸಾದ್, ರುತ್ ಮನೋರಮಾ, ವಿಲ್ಸನ್ ರೆಡ್ಡಿ ಹಾಗೂ ಕೆ.ಎ.ಆನಂದ್ ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.
ಜೆಡಿಟಿಗೆ ಸ್ಟಾರ್ ಪ್ರಚಾರಕ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ ಅಂದ್ರೆ ಅವರು ಬಿಜೆಪಿ ಕಡೆಗೆ ಮುಖ ಮಾಡುವುದು ಖಚಿತ. ಅಲ್ಲಿಗೆ ಮೈಸೂರು ಭಾಗದಲ್ಲಿ ಮತ್ತೆ ಕಮಲವರಳಿಸುವ ಪ್ರಯತ್ನ ಶುರುವಾಗಲಿದೆ ಅಂದಾಯ್ತು.
Discussion about this post