ಚೈನಾ ವೈರಸ್ ವಿರುದ್ಧ ಇದೀಗ ಸಮರ ಸಾರಿರುವ ಭಾರತ ಲಸಿಕೆ ವಿತರಣೆ ಪ್ರಾರಂಭಿಸಿದೆ.
ಈಗಾಗಲೇ ಅನೇಕ ಪ್ರಸಿದ್ಧ ವೈದ್ಯರು ಲಸಿಕೆ ಪಡೆಯುವ ಮೂಲಕ ಜನ ಸಾಮಾನ್ಯರಲ್ಲಿರುವ ಆತಂಕಗಳನ್ನು ದೂರ ಮಾಡುವ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ ಡಾ. ಸುದರ್ಶನ್ ಬಳ್ಳಾಲ್, ಡಾ. ದೇವಿ ಪ್ರಸಾದ್ ಶೆಟ್ಟಿ ಸೇರಿದಂತೆ ಅನೇಕರು ಲಸಿಕೆ ಪಡೆದಿದ್ದಾರೆ.
ಈ ನಡುವೆ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿಎನ್. ಮಂಜುನಾಥ್ ಇಂದು ಲಸಿಕೆ ಪಡೆದಿದ್ದಾರೆ.
ನಾನು ಲಸಿಕೆ ತೆಗೆದುಕೊಂಡಿದ್ದೇನೆ, ಯಾವುದೇ ಸಮಸ್ಯೆಯಾಗಿಲ್ಲ, ನೀವೂ ಲಸಿಕೆ ಪಡೆಯಿರಿ ಎಂದು ಕರೆ ಕೊಟ್ಟಿರುವ ಅವರು, ಆರೋಗ್ಯ ಕಾರ್ಯಕರ್ತರು ಆತಂಕವಿಲ್ಲದೆ ಲಸಿಕೆ ಹಾಕಿಸಿಕೊಳ್ಳಬೇಕು ಅಂದಿದ್ದಾರೆ.
ಈ ನಡುವೆ ಲಸಿಕೆ ಕುರಿತಂತೆ ಕೊರೋನಾ ವಾರಿಸರ್ಯ್ ಗಳಲ್ಲಿರುವ ಆತಂಕದ ಬಗ್ಗೆ ಮಾತನಾಡಿರುವ ಅವರು, ಲಸಿಕೆ ಹಾಕಿಸಿದ ಮೇಲೆ ಜ್ವರ, ಆಲರ್ಜಿ, ಮೈಕೈ ನೋವು ಕಾಣಿಸಿಕೊಳ್ಳುವ ಲಸಿಕೆಯ ಪರಿಣಾಮವೇ ಹೊರತು ಅಡ್ಡ ಪರಿಣಾಮ ಅಂದಿದ್ದಾರೆ.
Discussion about this post