ಬೆಂಗಳೂರು : ಸಚಿವ ರಮೇಶ್ ಜಾರಕಿಹೊಳಿ ಮಂಚದಾಟದ ಸಿಡಿಯ ಸೂತ್ರಧಾರರು ಎನ್ನಲಾದ ಆರೋಪಿಗಳಿಬ್ಬರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಹಲವು ವಾರಗಳ ಕಾಲ ಎಸ್ಐಟಿ ಕಣ್ಣು ತಪ್ಪಿಸಿ ಬಚಾವ್ ಆಗಿದ್ದ ಆರೋಪಗಳಿಗೆ ಈ ಸುದ್ದಿ ಸಂತಸ ಕೊಟ್ಟಿತ್ತು.
ಆದರೆ ಈಗ ನ್ಯಾಯಾಲಯದ ಆದೇಶ ಪ್ರತಿ ಲಭ್ಯವಾಗಿದ್ದು, ಜಾಮೀನು ಸಿಕ್ಕ ಖುಷಿಯಲ್ಲಿರುವ ಆರೋಪಿಗಳು ಬೆಚ್ಚಿ ಬಿದ್ದಿದ್ದಾರೆ. ಕೋರ್ಟ್ ಆದೇಶ ನೋಡಿದರೆ ಆರೋಪಿಗಳು ನೆಮ್ಮದಿಯಾಗಿ ತನಿಖಾಧಿಕಾರಿ ಮುಂದೆ ಹಾಜರಾಗುವಂತಿಲ್ಲ. ಹೋಗುವುದಿದ್ದರು ಒಂದೆರೆಡು ಜೊತೆ ಬಟ್ಟೆ ಒಯ್ಯುವುದೇ ಉತ್ತಮ.
ಆರೋಪಿಗಳು ಜಾಮೀನು ಪಡೆದರೂ, ತನಿಖಾಧಿಕಾರಿ ಅಗತ್ಯ ಬಿದ್ದರೆ ಆರೋಪಿಗಳನ್ನು ಬಂಧಿಸಬಹುದು ಎಂದು ಹೇಳಿರುವ ನ್ಯಾಯಾಲಯ, ತನಿಖಾಧಿಕಾರಿ ಮುಂದೆ ಹಾಜರಾಗಲೇಬೇಕು ಅಂದಿದೆ.
ಜೂನ್ 12 ಅಂದರೆ ಇಂದು ಆರೋಪಿಗಳು ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಬೇಕಾಗಿದ್ದು, ತನಿಖಾಧಿಕಾರಿ ಧರ್ಮೆಂದ್ರ ಅವರು ಆರೋಪಿಗಳ ವಿಚಾರಣೆಗೆ ಸಿದ್ದತೆ ಮಾಡಿಕೊಂಡಿದ್ದಾರೆ. ಒಂದು ವೇಳೆ ಇಂದು ಆರೋಪಿಗಳು ವಿಚಾರಣೆಗೆ ಹಾಜರಾದರೂ ಬಂಧಿಸುವ ಸಾಧ್ಯತೆಗಳು ತೀರಾ ಕಡಿಮೆ. ನಾಲ್ಕೈದು ದಿನಗಳ ವಿಚಾರಣೆ ಬಳಿಕ ಯಾವುದಾದರೂ ಹೇಳಿಕೆಯಲ್ಲಿ ವ್ಯತ್ಯಾಸ ಅಥವಾ ಸಾಕ್ಷಿ ನಾಶದ ಕುರುಕು ಸಿಕ್ರೆ ಆಗ ಬಂಧಿಸುವ ಸಾಧ್ಯತೆಗಳಿದೆ.
Discussion about this post