ಬೆಂಗಳೂರು : ಅಮೆರಿಕಾದ ಪ್ರತಿಷ್ಠಿತ ಕಂಪನಿ ಫೈಜರ್ ಸಂಶೋಧಿಸಿದ ಕೊರೋನಾ ಲಸಿಕೆ ಹಳ್ಳ ಹಿಡಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ತರಾತುರಿಯಲ್ಲಿ ಆಗಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಲಸಿಕೆಗೆ ಹಸಿರು ನಿಶಾನೆ ತೋರಿದ ಕರ್ಮಕ್ಕೆ ಇದೀಗ ಅನೇಕ ದೇಶದ ನಾಗರಿಕರು ಸಂಕಷ್ಟ ಪಡುವಂತಾಗಿದೆ.
ಈಗಾಗಲೇ ಹಲವು ದೇಶಗಳಲ್ಲಿ ಫೈಜರ್ ಲಸಿಕೆಯಿಂದ ವಿಪರೀತ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಲಾರಂಭಿಸಿದೆ. ಮಾತ್ರವಲ್ಲದೆ ಅನೇಕರ ಸಾವಿಗೆ ಕಾರಣವಾಗಿದೆ.
ಭಾರತದ ಎರಡು ಲಸಿಕೆಗಳು ಯಶಸ್ವಿ. ಶಿಖರದತ್ತ ಹೆಜ್ಜೆ ಹಾಕುತ್ತಿದ್ರೆ ಅಮೇರಿಕಾ ಲಸಿಕೆಯ ಡೌನ್ ಫಾಲ್ ಪ್ರಾರಂಭವಾಗಿದೆ.
ಹಾಗೇ ನೋಡಿದರೆ ಫೈಜರ್ ಲಸಿಕೆ ಬಗ್ಗೆ ಸಾಕಷ್ಟು ನಿರೀಕ್ಷೆಗಳಿತ್ತು ಆದರೆ ಇದೀಗ ಎಲ್ಲಾ ನಿರೀಕ್ಷೆಗಳು ಹುಸಿಯಾಗಿದ್ದು, ಫೈಜರ್ ಲಸಿಕೆ ವೇಸ್ಟ್ ಅನ್ನುವುದೊಂದೇ ಬಾಕಿ.
ಟ್ರಯಲ್ ಸಂದರ್ಭದಲ್ಲಿ ಸಿಕ್ಕ ಫಲಿತಾಂಶಕ್ಕೂ ಈಗ ಸಿಗುತ್ತಿರುವ ರಿಸಲ್ಟ್ ಗೆ ಸಾಕಷ್ಟು ವ್ಯತ್ಯಾಸಗಳಿದೆ. ಸರಿಯಾಗಿ ಕ್ನಿನಿಕಲ್ ಟ್ರಯಲ್ ನಡೆಯದ ಕಾರಣ ಈ ಎಡವಟ್ಟುಗಳು ಕಾಣಿಸಿಕೊಂಡಿದೆ ಎನ್ನಲಾಗಿದೆ.
ಈ ನಡುವೆ ಫೈಜರ್ ಕೊರೋನಾ ಲಸಿಕೆ ಪಡೆದ 12400 ಇಸ್ರೇಲ್ ನಾಗರಿಕರಲ್ಲಿ ಮತ್ತೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ದುರಂತ ಅಂದ್ರೆ ಅವರೆಲ್ಲರಲ್ಲಿ ಕೆಲವರು ಎರಡೆರು ಡೋಸ್ ಲಸಿಕೆಗಳನ್ನು ಪಡೆದವರಾಗಿದ್ದಾರೆ.
ಫೈಜರ್ ಲಸಿಕೆ ನೀಡಿದ ಬಳಿಕ 1.89 ಲಕ್ಷ ಜನರಿಗೆ ಮತ್ತೊಮ್ಮೆ ಕೊರೋನಾ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ಶೇ. 6.6 ಜನರಿಗೆ ಸೋಂಕು ದೃಢವಾಗಿದೆ.
ಫೈಜರ್ ಲಸಿಕೆಯ ಎರಡನೇ ಡೋಸೇಜ್ನ್ನು ಪಡೆದಿದ್ದ 69 ಮಂದಿಯಲ್ಲೂ ಸೋಂಕು ಕಾಣಿಸಿಕೊಂಡಿದೆ.
ಇಸ್ರೇಲ್ನಲ್ಲಿ ಡಿಸೆಂಬರ್ 19ರಿಂದ ಫೈಜರ್ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ 22 ಲಕ್ಷ ಜನರಿಗೆ ಲಸಿಕೆ ವಿತರಣೆ ಮಾಡಲಾಗಿದೆ. 90 ಲಕ್ಷ ಜನಸಂಖ್ಯೆಯಲ್ಲಿ ಈಗಾಗಲೇ ಶೇ. 25 ಜನರಿಗೆ ಲಸಿಕೆ ನೀಡಿದಂತಾಗಿದೆ.
Discussion about this post