ಬೆಂಗಳೂರು : ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ವಾಯುಮಾಲಿನ್ಯಗೊಂಡಿರುವ ನಗರ ಯಾವುದು ಎಂದು ಯಾರನ್ನೇ ಕೇಳಿ ಸಿಗುವ ಉತ್ತರ ಬೆಂಗಳೂರು. ಹೌದು, ಬೆಂಗಳೂರು ಕಂಡ ಪ್ರತಿಯೊಬ್ಬರಿಗೂ ಇಲ್ಲಿ ಸೇವಿಸುವ ಗಾಳಿ ಅದೆಷ್ಟು ಕೆಟ್ಟಿದೆ ಅನ್ನುವುದು ಅನುಭವಕ್ಕೆ ಬಂದಿರುತ್ತದೆ. ಮಾತ್ರವಲ್ಲದೆ ರಾಜಧಾನಿಯ ರಸ್ತೆಗಳಿಂದ ಎದ್ದೆಳುವ ಧೂಳು, ಕಾರ್ಖಾನೆಗಳಿಂದ ಬರೋ ಹೊಗೆ ಎಲ್ಲವೂ ಉಸಿರುಗಟ್ಟಿಸುತ್ತದೆ.
ಆದರೆ ಇದೀಗ ಸ್ವಿಜರ್ಲೆಂಡ್ ಮೂಲಕ ಐಕ್ಯೂ ಏರ್ ಸಂಸ್ಥೆ ವಿಶ್ವದ ವಿವಿಧ ದೇಶಗಳ ವಾಯುಗುಣಮಟ್ಟ ಕುರಿತ ವರದಿಯೊಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಶಾಕಿಂಗ್ ಸತ್ಯ ಹೊರ ಬಿದ್ದಿದೆ. ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ವಾಯು ಮಾಲಿನ್ಯ ಹೊಂದಿರುವ ನಗರಗಳ ಪೈಕಿ ಬೆಂಗಳೂರು ಸ್ಥಾನ ಪಡೆದಿಲ್ಲ. ಬದಲಾಗಿ ಹುಬ್ಬಳ್ಳಿ ಅತ್ಯಂತ ಕೆಟ್ಟ ಗಾಳಿಯನ್ನು ಹೊಂದಿದೆ ಅಂದಿದೆ. ವಾಣಿಜ್ಯ ನಗರಿ ಎಂದು ಹೆಸರು ಪಡೆದಿರುವ ಹುಬಳ್ಳಿಯ ವಾಯು, ಸೇವನೆ ಯೋಗ್ಯವಲ್ಲ ಎಂದು ವರದಿ ಹೇಳಿದೆ.
ಇನ್ನುಳಿಂತೆ ಯಾದಗಿರಿ ರಾಜ್ಯದಲ್ಲೇ 2ನೇ ಗರಿಷ್ಟ ವಾಯುಮಾಲಿನ್ಯ ಹೊಂದಿರುವ ನಗರಿ ಎಂಬ ಕಳಂಕ ಹೊತ್ತುಕೊಂಡಿದ್ದು, ಬೆಂಗಳೂರು 3ನೇ ಸ್ಥಾನದಲ್ಲಿದೆ. 4ನೇ ಸ್ಥಾನದಲ್ಲಿ ಬೆಳಗಾವಿ, 5ನೇ ಸ್ಥಾನದಲ್ಲಿ ಚಿಕ್ಕಬಳ್ಳಾಪುರ, 6ನೇ ಸ್ಥಾನದಲ್ಲಿ ವಿಜಯಪುರ ಹಾಗೂ 7ನೇ ಸ್ಥಾನದಲ್ಲಿ ರಾಮನಗರ ಗುರುತಿಸಿಕೊಂಡಿದೆ.
ಇನ್ನುಳಿದಂತೆ 8 ಸ್ಥಾನದಲ್ಲಿ ಚಿಕ್ಕಮಗಳೂರು, 9ನೇ ಸ್ಥಾನದಲ್ಲಿ ಮಡಿಕೇರಿ, 10ನೇ ಸ್ಥಾನದಲ್ಲಿ ಚಾಮರಾಜನಗರವಿದೆ. ಬಾಗಲಕೋಟೆ, ಹಾವೇರಿ, ಮಂಗಳೂರು, ಮೈಸೂರು ನಂತರ ಸ್ಥಾನಗಳಲ್ಲಿ ಕಾಣಿಸಿಕೊಂಡಿದೆ.
Discussion about this post