ಜಗತ್ತಿಗೆಲ್ಲಾ ಬುದ್ದಿ ಮಾತು ಹೇಳುವ ಅಮೆರಿಕಾ, ತನ್ನ ದೇಶದಲ್ಲಿ ಏನಾಗುತ್ತಿದೆ ಅನ್ನುವ ಬಗ್ಗೆ ತಲೆ ಕಡೆಸಿಕೊಂಡಿಲ್ಲ ( Indian American)
ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಭಾರತದ ಜೈಲು, ಪೊಲೀಸರು ,ಸರ್ಕಾರ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಇದೊಂದು ಆತಂಕಕಾರಿ ಬೆಳವಣಿಗೆ ಎಂದೆಲ್ಲಾ ಅಮೆರಿಕಾ ಬಾಯಿ ಬಡಿದುಕೊಂಡಿದ್ದು. ಇದಕ್ಕೆ ತಕ್ಕ ಉತ್ತರವನ್ನು ಬಳಿಕ ಭಾರತ ಕೊಟ್ಟಿತ್ತು.( Indian American)
ಆದರೆ ಇದೀಗ ಮತ್ತೊಮ್ಮೆ ಅಮೆರಿಕಾದ ನೆಲದಲ್ಲಿ ಏನಾಗುತ್ತಿದೆ ಅನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ.
ಇದನ್ನು ಓದಿ : Kempanna : ಕೈ ಮುಗಿದು ಪ್ರಾರ್ಥಿಸುತ್ತೇನೆ ಕೇಸ್ ಹಾಕಿ : ಮುನಿರತ್ನಗೆ ಕೆಂಪಣ್ಣ ಸವಾಲು
ಅಮೇರಿಕಾದ ಟೆಕ್ಸಾಸ್ ರಾಜ್ಯದಲ್ಲಿ ಮೆಕ್ಸಿಕನ್-ಅಮೆರಿಕನ್ ಮಹಿಳೆಯೊಬ್ಬರು ನಾಲ್ಕು ಭಾರತೀಯ-ಅಮೆರಿಕನ್ ಮಹಿಳೆಯರನ್ನು ಜನಾಂಗೀಯವಾಗಿ ನಿಂದಿಸಿದ್ದಾರೆ. ಮಾತ್ರವಲ್ಲದೆ ಆಕೆ ಥಳಿಸಿರುವ ವಿಡಿಯೋ ಕೂಡಾ ರೆಕಾರ್ಡ್ ಆಗಿದೆ. ನೀವು ಅಮೇರಿಕಾವನ್ನು ಹಾಳು ಮಾಡುತ್ತಿದ್ದೀರಿ, ಭಾರತಕ್ಕೆ ಹಿಂತಿರುಗಿ ಎಂದೆಲ್ಲಾ ನಿಂದನೆ ಮಾಡಿರುವ ವಿಡಿಯೋ ಈಗಾಗಲೇ ವೈರಲ್ ಆಗಿದೆ.
ಟೆಕ್ಸಾಸ್ನ ಡಲ್ಲಾಸ್ನಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಭಾರತದ ವಿರುದ್ಧ ಪರೋಕ್ಷವಾಗಿ ಕತ್ತಿ ಮಸೆಯುತ್ತಿರುವ ಅಮೆರಿಕಾದಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸಿದ್ದರು.
ಇದರ ಬೆನ್ನಲ್ಲೇ ಸ್ಥಳೀಯ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದು, ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
Discussion about this post