ನಾನು ಸನ್ಯಾಸಿ. ನನಗೆ ಮತ ಕೊಡದಿದ್ದರೆ ಶಾಪ ನೀಡುತ್ತೇನೆ ಎಂದು ಉನ್ನಾವೋ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
ಒಬ್ಬ ಸನ್ಯಾಸಿ ನಿಮ್ಮ ಮನೆ ಬಾಗಿಲಿಗೆ ಬಂದು ಬಿಕ್ಷೆ (ಮತ) ಬೇಡುತ್ತಿದ್ದಾನೆ. ಒಂದು ವೇಳೆ ನೀವು ಬಿಕ್ಷೆ ನೀಡಿದಿದ್ದರೆ, ಶಾಪಕ್ಕೆ ಗುರಿಯಾಗುತ್ತಿರಿ. ಇದನ್ನು ನಾನು ಹೇಳುತ್ತಿಲ್ಲ. ಇದೆಲ್ಲ ಶಾಸ್ತ್ರದಲ್ಲೇ ಇದೆ. ನಾನು ಧಾನ ಅಥವಾ ದೌಲತ್ ಕೇಳುಲು ಬಂದಿಲ್ಲ. ಮತ ಕೇಳಲು ಬಂದಿದ್ದೇನೆ. ನೀವು ನನಗೆ ಮತ ನೀಡಿ ಚುನಾವಣೆಯಲ್ಲಿ ಗೆಲ್ಲಿಸಿದರೆ, 1.5 ಕೋಟಿ ಭಾರತೀಯರ ಹಣೆಬರಹ ಬದಲಾಗಲಿದೆ ಎಂದಿದ್ದಾರೆ.
ಈ ಸಾಕ್ಷಿ ಮಹಾರಾಜ್ ಗೆ ತಲೆ ಕೆಟ್ಟಿರುವಂತಿದೆ. ಸನ್ಯಾಸಿಯಾದರೇನು, ಮತದಾರರಿಗೆ ನೀವು ಒಬ್ಬ ಅಭ್ಯರ್ಥಿ ಅಷ್ಟೇ. ಈ ಹಿಂದೆ ಒಳ್ಳೆ ಕೆಲಸ ಮಾಡಿದ್ರೆ ಜನ ಗೆಲ್ಲಿಸುತ್ತಾರೆ. ಅದನ್ನು ಬಿಟ್ಟು ಸನ್ಯಾಸಿ ಅನ್ನುವ ಅಹಂ ತಲೆಯಲ್ಲಿ ಇತ್ತು ಅನ್ನುವುದಾದರೆ ಮಠಕ್ಕೆ ಸೇರಿಸುತ್ತಾರೆ. ಅದನ್ನು ಬಿಟ್ಟು ಶಾಪ ಕೊಡ್ತೀನಿ ಎಂದು ಬೆದರಿಸಿದ್ರೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಬೇಕಾಗುತ್ತದೆ.
ಮೋದಿ ಹೆಸರಿಲ್ಲಿ ಗೆದ್ದಿರುವ ಇವರಿಗೆ ಈ ಬಾರಿಯೂ ಮೋದಿ 16 ಗಂಟೆ ಕೆಲಸ ಮಾಡ್ತಾರೆ, ಮೋದಿ ಆ ಸಾಧನೆ ಮಾಡಿದ್ದಾರೆ, ಮೋದಿ ಈ ಸಾಧನೆ ಮಾಡಿದ್ದಾರೆ ಎಂದು ಹೇಳುವುದೇ ಆಗಿದೆ. ತಾವೇನು ಮಾಡಿದ್ದೇವೆ ಎಂದು ಹೇಳಲು ಬಹುತೇಕ ಬಿಜೆಪಿ ಅಭ್ಯರ್ಥಿಗಳಿಗೆ ಸಾಧ್ಯವಾಗಿಲ್ಲ.
ಲೋಕಸಭಾ ಕ್ಷೇತ್ರದ ಮತದಾರರು ತಮ್ಮ ಸಂಸದ ಒಳ್ಳೆಯ ಕೆಲಸ ಮಾಡಲಿ ಎಂದು, ಪ್ರಧಾನಿಯಾದವರು ದೇಶದ ಕೆಲಸ ಮಾಡುತ್ತಾರೆ. ಅದನ್ನು ಬಿಟ್ಟು ಶಾಪ ಕೊಡ್ತೀನಿ ಅಂದ್ರೆ ಮತದಾರರೇ ದೊಡ್ಡ ಶಾಪ ಕೊಟ್ಟು ಬಿಡ್ತಾರೆ.
Discussion about this post