ಮಂಗಳೂರು : ಕರಾವಳಿಯ ಅನೇಕ ಭಾಗದ ಕೋಳಿ ಫಾರಂಗಳಿಗೆ ಕೋಳಿ ಸರಬರಾಜು ಮಾಡುತ್ತಿರುವ ತಮಿಳುನಾಡಿನ ವ್ಯಾಪಾರಿಗಳು ನಾಟಿ ಕೋಳಿ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ.
ಬಣ್ಣದಲ್ಲಿ ನಾಟಿ ಕೋಳಿಯನ್ನೇ ಹೋಲುವ ಹೈಬ್ರೀಡ್ ಕೋಳಿಗಳನ್ನು ಮಾರಾಟ ಮಾಡುತ್ತಿರುವ ವ್ಯಾಪಾರಿಗಳು ಇದೇ ನಾಟಿ ಕೋಳಿ ಎಂದು ನಂಬಿಸಿದ್ದಾರೆ.
ಎಲ್ಲಿಯವರೆಗೆ ತಮಿಳುನಾಡಿನ ಕೋಳಿಗಳು ನಾಟಿಕೋಳಿ ಎಂದು ಪ್ರಸಿದ್ಧವಾಗಿದೆ ಅಂದ್ರೆ ಕರಾವಳಿಯ ಭೂತ, ಕೋಲ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಇದೇ ಕೋಳಿ ಬಳಕೆಯಾಗುತ್ತಿದೆ.
ತಮಿಳುನಾಡು ರೈತರು ಒಂದು ಕೋಳಿಯನ್ನು 90 ರಿಂದ 100 ರೂಪಾಯಿಗೆ ಮಾರಾಟ ಮಾಡುತ್ತಿರುವ ಕಾರಣ ಕೋಳಿ ಅಂಗಡಿ ಮಾಲೀಕರು ಕೂಡಾ ಇದೇ ನಾಟಿ ಕೋಳಿ ಎಂದು ಗ್ರಾಹಕರಿಗೆ ನೀಡುತ್ತಿದ್ದಾರೆ.
ತಮಿಳುನಾಡಿನ ವ್ಯಾಪಾರಿಗಳ ಈ ಕೃತ್ಯದಿಂದ ಕರ್ನಾಟದಲ್ಲಿ ಶುದ್ಧ ನಾಟಿಕೋಳಿ ಸಾಕಾಣಿಕೆ ಮಾಡುತ್ತಿರುವವರು ಕಂಗಲಾಗಿದ್ದಾರೆ.
ಮಾತ್ರವಲ್ಲದೆ ತಮಿಳುನಾಡಿನ ಕೋಳಿಗಳ ಪ್ರವೇಶದಿಂದ ಕರ್ನಾಟಕದ ಕೋಳಿಗಳಿಗೆ ಬರಬಾರದ ಕಾಯಿಲೆಗಳು ಕಾಣಿಸಿಕೊಳ್ಳಲಾರಂಭಿಸಿದೆ.
ಮಂಡ್ಯದಲ್ಲಿ ತಮಿಳುನಾಡು ವ್ಯಾಪಾರಿಗಳ ಕಾರುಬಾರು ಮಿತಿ ಮೀರಿದ್ದು, ಮಂಡ್ಯದ ವಿವಿಧ ಜಿಲ್ಲೆಗಳಿಗೆ ಕೋಳಿ ತುಂಬಿದ ವಾಹನದಲ್ಲಿ ಬರುತ್ತಿರುವ ವ್ಯಾಪಾರಿಗಳು ನಾಟಿ ಕೋಳಿ ಎಂದು ಮೋಸ ಮಾಡುತ್ತಿದ್ದಾರೆ.
ಇವೆಲ್ಲವೂ ಫಾರಂಗಳಲ್ಲಿ ಬೆಳೆದ ಕೋಳಿಗಳಾಗಿದ್ದುಸ ಸಂಪೂರ್ಣ ಜೌಷಧಿಯಿಂದಲೇ ಬೆಳೆದಿವೆ. ಹೀಗಾಗಿ ಅನೇಕ ಕಾಯಿಲೆಗಳಿಗೆ ಇವು ತುತ್ತಾಗುವ ಸಾಧ್ಯತೆಗಳಿದೆ.
ಕರ್ನಾಟಕದ ಕೃಷಿ ಇಲಾಖೆ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಾಟಿ ಕೋಳಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಇಲ್ಲ.
Discussion about this post