ಹುಬ್ಬಳ್ಳಿ : ಇಂಧನ ದರ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡುವ ಮುನ್ಸೂಚನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಇಂಧನದ ಮೇಲಿನ ತೆರಿಗೆಯನ್ನು ಕಡಿಮೆ ಮಾಡೋ ಸುಳಿವು ನೀಡಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸೆಸ್ ಕಡಿಮೆ ಮಾಡೋ ಸಾಧ್ಯತೆಗಳಿದೆ.
ಸೋಮವಾರ ಆರ್ಥಿಕ ಪರಿಶೀಲನಾ ಸಭೆಯನ್ನು ಕರೆದಿರುವ ಮುಖ್ಯಮಂತ್ರಿಗಳು ಆರ್ಥಿಕ ಪರಿಸ್ಥಿತಿಯ ಅವಲೋಕನ ನಡೆಸಲಿದ್ದಾರೆ. ಅಧಿಕಾರಿಗಳು ಆರ್ಥಿಕ ಪರಿಸ್ಥಿತಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ರೆ ಸೆಸ್ ಕಡಿಮೆ ಮಾಡುವ ನಿರ್ಧಾರ ಕೈಗೊಳ್ಳಲಿದ್ದಾರೆ.
ಕೆಲ ದಿನಗಳ ಹಿಂದೆ ಮಾತನಾಡಿದ್ದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಇಂಧನದ ಮೇಲಿನ ತೆರಿಗೆಯನ್ನು ಯಾವುದೇ ಕಾರಣ ಕಡಿತ ಮಾಡುವುದಿಲ್ಲ ಅಂದಿದ್ದರು. ಇದೀಗ ಡೀಸೇಲ್ ದರ ನೂರರ ಗಡಿ ದಾಟುತ್ತಿದ್ದಂತೆ ಮನಸ್ಸು ಬದಲಿಸಿರುವ ಮುಖ್ಯಮಂತ್ರಿಗಳು ದರ ಇಳಿಕೆಯತ್ತ ಮನಸ್ಸು ಮಾಡಿದ್ದಾರೆ.
Discussion about this post