ಬೆಂಗಳೂರು : ನಗರದಲ್ಲಿ ಸೋಮವಾರವೂ ಧಾರಾಕಾರ ಮಳೆ ಸುರಿದಿದ್ದು, ಇಂದು ಕೂಡಾ ಮಳೆಯ ಅಬ್ಬರ ಮುಂದುವರಿಯುವ ಮುನ್ಸೂಚನೆಯಿದೆ. ಈ ನಡುವೆ ಬೆಂಗಳೂರಿನಲ್ಲಿ ಮೂರು ಕಡೆ ಗೋಡೆ ಕುಸಿದು ಆತಂಕ ಸೃಷ್ಟಿಯಾಗಿದೆ.
ರಾಜಕಾಲುವೆಯ ಹೂಳುತೆಗೆಯುವಲ್ಲಿ ಬಿಬಿಎಂಪಿ ವಿಳಂಭ ಮಾಡಿದ್ದು ಎಲ್ಲಾ ದುರ್ಘಟನೆಗಳಿಗೆ ಕಾರಣವಾಗಿದ್ದು, ಬಿಬಿಎಂಪಿ ಅಧಿಕಾರಿಗಳನ್ನು ಮೊದಲು ವಿಚಾರಣೆಗೆ ಒಳಪಡಿಸಿ ಜೈಲಿಗಟ್ಟಬೇಕು.
ಈ ನಡುವೆ ಸೋಮವಾರ ರಾತ್ರಿ ಸುರಿದ ಮಳೆಗೆ ಬೆಂಗಳೂರು ಹೈರಣಾಗಿದ್ದು, ಮನೆಯ ಸ್ವಿಚ್ ಬೋರ್ಡ್ನಿಂದ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಒಬ್ಬರು ಸಾವನ್ನಪ್ಪಿದ್ದಾರೆ.ಕೆ.ಪಿ.ಅಗ್ರಹಾರ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದ್ದು, ವೆಂಕಟೇಶ್ (56) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮನೆಯೊಳಗೆ ನೀರು ನುಗ್ಗಿತ್ತು. ಈ ವೇಳೆ ಮಳೆ ನೀರು ಹೊರ ಹಾಕುತ್ತಿದ್ದಾಗ, ಆಕಸ್ಮಿಕವಾಗಿ ಸ್ವಿಚ್ ಬೋರ್ಡ್ ತಗುಲಿ ಮೃತಪಟ್ಟಿದ್ದಾರೆ.
ಮತ್ತೊಂದು ಕಡೆ ರಾತ್ರಿ ಸುರಿದ ಮಳೆಗೆ ಬೆಂಗಳೂರು ವಿಮಾನ ನಿಲ್ದಾಣದ ಪರಿಸ್ಥಿತಿ ನೋಡಿದರೆ ಬೆಂಗಳೂರಿನ ಮರ್ಯಾದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುವಂತಿತ್ತು. ವಿಮಾನ ನಿಲ್ದಾಣ ಹಾಗೂ ಅದರ ಸುತ್ತಮುತ್ತ ರಸ್ತೆಗಳಲ್ಲೇ ನೀರು ನಿಂತ ಕಾರಣ ಜನರ ಓಡಾಟಕ್ಕೆ ಸಾಧ್ಯವಾಗಿರಲಿಲ್ಲ.
2 ಅಡಿಗೂ ಹೆಚ್ಚು ನೀರು ನಿಂತ ಕಾರಣ ಅನೇಕ ಟ್ಯಾಕ್ಸಿ ಮತ್ತು ಕಾರುಗಳಿಗೆ ಹಾನಿಯಾಗಿದೆ.ಜೊತೆಗೆ ಸಿಕ್ಕಾಪಟ್ಟೆ ಮಳೆ ಸುರಿಯುತ್ತಿದ್ದ ಕಾರಣ ವಿಮಾನ ನಿಲ್ದಾಣದ ಕಡೆಗೆ ಬಸ್ ಗಳು ಕೂಡಾ ಆಗಮಿಸಲಿಲ್ಲ. ಹೀಗಾಗಿ ಪ್ರಯಾಣಿಕರು ಪರದಾಡುವಂತಾಯ್ತು. ಈ ವೇಳೆ ಬಂದ ಟ್ರ್ಯಾಕ್ಟರ್ ಚಾಲಕನೋರ್ವ ಏರ್ಪೋರ್ಟ್ಗೆ ಹೋಗಲು ನಿಂತಿದ್ದ ಪ್ರಯಾಣಿಕರನ್ನು ಟ್ರ್ಯಾಕ್ಟರ್ಗೆ ಹತ್ತಿಸಿಕೊಂಡು ಏರ್ಪೋರ್ಟ್ಗೆ ಡ್ರಾಪ್ ಮಾಡಿದ್ದಾರೆ.
Discussion about this post