ಬೆಂಗಳೂರು : ನಟ, ಹೋರಾಟಗಾರ ಚೇತನ್ ಇಷ್ಟು ದಿನಗಳ ಕಾಲ ಬಲಪಂಥೀಯರನ್ನು ಟಾರ್ಗೇಟ್ ಮಾಡಿದ್ದರು. ಬಿಜೆಪಿ, ಹಿಂದುತ್ವ ಅವರ ಟೀಕೆಗೆ ಒಳಗಾಗುತ್ತಿತ್ತು. ಈ ಕಾರಣಕ್ಕಾಗಿಯೇ ಚೇತನ್ ಸದಾ ಸುದ್ದಿಯಲ್ಲಿರುತ್ತಿದ್ದರು.
ಇದೀಗ ಚೇತನ್ ನೋಟ ದಳಪತಿಗಳ ಕಡೆಗೆ ಹೊರಳಿದೆ. ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಟೀಕಿಸಿರುವ ಚೇತನ್, ಕರ್ನಾಟಕವನ್ನು 5 ವರ್ಷಗಳ ಮುನ್ನಡಿಸುವ ಸ್ವಾತಂತ್ರ್ಯವಿದ್ದಿದ್ದರೆ, ‘ಕ್ರಾಂತಿಕಾರಿ’ ಬದಲಾವಣೆಗಳನ್ನು ತರುತ್ತೇನೆಂದು ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಮೊದಲಿಗೆ, 2 ಬಾರಿ ಅವರು ಸಿಎಂ ಆಗಿದ್ದಾಗಲೂ ಕೂಡ ನಮ್ಮ ರಾಜ್ಯಕ್ಕೆ ಅಂತಹದೇನೂ ಕ್ರಾಂತಿಕಾರಿ ಮಾಡಲಿಲ್ಲ, ಪ್ರಯತ್ನನೂ ಮಾಡಲಿಲ್ಲ
ಮುಖ್ಯವಾಗಿ, ಅವರಿಗೆ ‘ಕ್ರಾಂತಿಕಾರಿ’ ದೃಷ್ಟಿಯಿಲ್ಲ. ಅವರ ಚಿಂತನೆಯ ಪ್ರಕ್ರಿಯೆಯು ಅಧಿಕಾರಕ್ಕೆ ಮುಂಚಿತವಾಗಿರಬೇಕು ಅಂದಿದ್ದಾರೆ.
ನಿನ್ನೆ ನೆಲಮಂಗಲದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, ರಾಷ್ಟ್ರಿಯ ಪಕ್ಷಗಳ ಹಂಗಿಲ್ಲದಂತೆ ಜನತೆ ಜೆಡಿಎಸ್ ಗೆ ಪೂರ್ಣ ಬಹುಮತದ ಅಧಿಕಾರ ದೊರಕಿದರೆ ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದರು.
ಅಧಿಕಾರದಲ್ಲಿದ್ದಾಗ ಜನರಿಗೆ ನಾನು ಮೋಸ ಮಾಡಿಲ್ಲ, ದ್ರೋಹ ಬಗೆದಿಲ್ಲ. ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಮೈತ್ರಿ ಸರ್ಕಾರದ ಮುಖಂಡರು ಇಲ್ಲ-ಸಲ್ಲದ ಕಿರುಕುಳ ನೀಡಿದರು. ಸಾಲ ಮನ್ನಾದಿಂದ ರೈತರ ಕಷ್ಟಗಳಿಗೆ ಶಾಶ್ವತ ಪರಿಹಾರ ದೊರಕದು. ರೈತರು ಸಾಲಗಾರನಾಗದಂತೆಯೇ ಮಾಡಬೇಕಿದೆ. ತಮ್ಮ ಸರ್ಕಾರದ ಹಲವು ಯೋಜನೆಗಳನ್ನು ಈಗಿನ ಸರ್ಕಾರ ಸ್ಥಗಿತಗೊಳಿಸಿದ್ದರಿಂದ ಜನತೆ, ರೈತರು ಮತ್ತೆ ಸಂಕಷ್ಟ ಅನುಭವಿಸುತ್ತಿದ್ದಾರೆ, ಹೀಗಾಗಿ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡಬೇಕಾದರೆ ರಾಜ್ಯದ ಆರೂವರೆ ಕೋಟಿ ಜನರು ಮತ್ತೊಮ್ಮೆ ಆಶೀರ್ವಾದ ಮಾಡಬೇಕು, ಆಗ ಕ್ರಾಂತಿಕಾರಿ ಬದಲಾವಣೆ ಮಾಡುತ್ತೇನೆ ಅಂದಿದ್ದರು
Discussion about this post